Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ಸಿಗುತ್ತಾ?
Annayya Kannada Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ದೊಡ್ಡ ತಂಗಿ ರತ್ನ ಮದುವೆ ಸಂಭ್ರಮ ಜೋರಾಗಿದೆ. ಆದರೆ ಪರಶು ಹಾಗೂ ವೀರಭದ್ರ ಮಾಡುತ್ತಿರುವ ಮೋಸದ ಬಗ್ಗೆ ಇನ್ನೂ ಅಣ್ಣನಿಗೆ ಅರಿವಿಲ್ಲ.ಈಗ ಮತ್ತೊಂದು ಕುತೂಹಲ ಟ್ವಿಸ್ಟ್ ಎದುರಾಗಿದೆ. ರತ್ನ ಹಾಗೂ ಪರಶು ಮದುವೆ ದಿನವೇ ಪರಶುನನ್ನು ಓಡಿ ತಬ್ಬಿಕೊಂಡಿದ್ದಾನೆ ಚಿಕ್ಕ ಮಗು. ಹೀಗಾಗಿ ಪರಶುಗೆ ಈಗಾಗಲೇ ಮದುವೆ ಆಗಿದೆಯಾ? ಅನ್ನೋದೇ ಟ್ವಿಸ್ಟ್.
ಅಣ್ಣಯ್ಯ ಧಾರಾವಾಹಿ -
ಅಣ್ಣಯ್ಯ (Annayya Kannada Serial) ಧಾರಾವಾಹಿಯಲ್ಲಿ ಶಿವಣ್ಣನ (Shivanna) ದೊಡ್ಡ ತಂಗಿ ರತ್ನ ಮದುವೆ (Marriage) ಸಂಭ್ರಮ ಜೋರಾಗಿದೆ. ಆದರೆ ಪರಶು ಹಾಗೂ ವೀರಭದ್ರ ಮಾಡುತ್ತಿರುವ ಮೋಸದ ಬಗ್ಗೆ ಇನ್ನೂ ಅಣ್ಣನಿಗೆ ಅರಿವಿಲ್ಲ.ಈಗ ಮತ್ತೊಂದು ಕುತೂಹಲ ಟ್ವಿಸ್ಟ್ ಎದುರಾಗಿದೆ. ರತ್ನ ಹಾಗೂ ಪರಶು ಮದುವೆ ದಿನವೇ ಪರಶುನನ್ನು (Parashu) ಓಡಿ ತಬ್ಬಿಕೊಂಡಿದ್ದಾನೆ ಚಿಕ್ಕ ಮಗು. ಹೀಗಾಗಿ ಪರಶುಗೆ ಈಗಾಗಲೇ ಮದುವೆ ಆಗಿದೆಯಾ? ಅನ್ನೋದೇ ಟ್ವಿಸ್ಟ್.
ವೀರಭದ್ರನಿಗೆ ಅವಮಾನ
ಪರಶು ಮತ್ತು ರತ್ನ ಮದುವೆ ಅತ್ಯಂತ ಮೋಸದಿಂದಲೇ ಆಗುತ್ತಿದೆ. ಅಪ್ಪ ಮಗನ ಮುಖವಾಡ ಇನ್ನೂ ರಿವೀಲ್ ಆಗಿಲ್ಲ. ಒಂದು ಕಡೆ ವೀರಭದ್ರ ಶಾರದಮ್ಮನಿಗೆ ಅವಮಾನ ಮಾಡಲು ಹೋಗಿ ತಾನು ಸೋತ್ತಿದ್ದ. ಶಿವುಗೆ ಅವಮಾನ ಮಾಡಲು ಹೊಂಚು ಹಾಕಿದ್ದ ವೀರಭದ್ರನಿಗೆ ಸೋಲಾಗಿತ್ತು. ಹೇಗಾದರೂ ಮಾಡಿ ಶಾರದಮ್ಮನಿಗೆ ಮತ್ತೆ ಜೈಲಾಗಬೇಕು ಅಥವಾ ಅವಮಾನ ಆಗಲೇಬೇಕೆಂದು ಪರಶು ಮತ್ತು ಛತ್ರಿ ಜೊತೆ ಸೇರಿ ಪ್ಲ್ಯಾನ್ ಮಾಡಿ ಸೋತ್ತಿದ್ದ. ಶಾರದಮ್ಮನ ಮೇಲ್ ಆರೋಪ ಬರೋದನ್ನು ನೋಡಿ, ಮಜಾ ತೆಗೆದುಕೊಳ್ಳುವ ಉಪಾಯ ವೀರಭದ್ರನದ್ದಾಗಿತ್ತು. ಆದರೆ ಅದೂ ಉಲ್ಟಾ ಹೊಡೆಯಿತು.
ಇದನ್ನೂ ಓದಿ: Rashmika Vijay Wedding: ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರಲಿರುವ ರಶ್ಮಿಕಾ ಮಂದಣ್ಣ; ಅಧಿಕೃತ ಘೋಷಣೆ
ಪರಶು ಪಾಪ ಕೃತ್ಯಗಳ ಮುಖವಾಡ ರಿವೀಲ್ ಆಗತ್ತಾ?
ಇದೀಗ ಮದುವೆ ದಿನವೇ ಅಣ್ಣನಿಗೆ ಶಾಕ್ ಎದುರಾಗಿದೆ. ಇನ್ನೇನು ರತ್ನಳನ್ನು ಮದುವೆ ಆಗೋ ಸಮಯಕ್ಕೆ ಚಿಕ್ಕ ಮಗು ಓಡಿ ಬಂದು ಅಪ್ಪ ಎಂದು ಪರಶುನನ್ನು ಅಪ್ಪಿಕೊಂಡಿದೆ. ಇದನ್ನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಮದುವೆ ಮುಂಚೆ ಒಂದು ಹೆಂಗಸನ್ನು ಕೂಡಿ ಹಾಕಿದ್ದ ಪರಶು. ಈಗ ಪ್ರೋಮೋ ನೋಡಿ, ಪರಶುಗೆ ಈಗಾಗಲೇ ಮದುವೆ ಬೇರೆ ಆಗಿದ್ಯಾ ಅಂತ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ಪಾರುನೇ ತನ್ನ ಅಣ್ಣನ ಮುಖವಾಡ ಕಳಿಚಲು ಈ ರೀತಿ ಮಾಸ್ಟರ್ ಪ್ಲ್ಯಾನ್ಸ್ ಮಾಡಿರಬಹುದು ಎಂದು ಕಮೆಂಟ್ ಮಾಡ್ತಿದ್ದಾರೆ. ಪರಶು ಪಾಪ ಕೃತ್ಯಗಳ ಮುಖವಾಡ ಇನ್ನಾದರೂ ಬಯಲಾಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್ಜಿವಿ? ಗರಂ ಆದ್ರು ಕನ್ನಡಿಗರು
ತಾನು ತಂಗಿಯರಿಗೆ ಒಳ್ಳೆಯ ಹುಡುಗರನ್ನೇ ಹುಡುಕಿ ಮದುವೆ ಮಾಡಿದ್ದೇನೆ ಎಂದುಕೊಂಡು ಶಿವು ಮೂರು ಜನ ತಂಗಿಯರ ಬಾಳಿಗೆ ಮುಳ್ಳಾಗಿದ್ದಾನೆ. ಮುಂದೊಂದು ದಿನ ಇದು ಗೊತ್ತಾದರೆ ಶಿವು ಪರಿಸ್ಥಿತಿ ಏನಾಗಲಿದೆ? ಅಮ್ಮನ ಸತ್ಯ, ಮಾವ ವೀರಭದ್ರ ಮಾಡಿದ ಮೋಸ ಇದೆಲ್ಲವೂ ಶಿವುಗೆ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.