Actor Darshan: ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆ; ಲಕ್ಕಿ ಸ್ಟಾಟ್‌ಗೆ ತೆರಳಲು ಚಾಲೆಂಜಿಂಗ್ ಸ್ಟಾರ್‌ಗೆ ಇಲ್ಲ ಅನುಮತಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿಗೆ ಯುರೋಪ್‌ನ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಲಾಗಿದೆ. ಇದರಿಂದ ʼಡೆವಿಲ್ʼ ಚಿತ್ರದ ಶೂಟಿಂಗ್ ತಮ್ಮ ಲಕ್ಕಿ ಸ್ಟಾಟ್‌ನಲ್ಲಿ ನಡೆಸಬೇಕು ಎನ್ನುವ ಅವರ ಕನಸು ಭಗ್ನಗೊಂಡಿದೆ.

ದರ್ಶನ್.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ (Actor Darshan) ಅವರಿಗೆ ಇದೀಗ ಬಹುದೊಡ್ಡ ಶಾಕ್ ಎದುರಾಗಿದೆ. ಸದ್ಯ ಬೇಲ್ ಮೇಲೆ ಹೊರಗಿರುವ ದರ್ಶನ್‌ಗೆ ಯುರೋಪ್‌ನ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಲಾಗಿದೆ. ಜೈಲಿನಿಂದ ಬಂದ ಮೇಲೆ ಅವರು ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರ ʼಡೆವಿಲ್ʼ (Devil) ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಇದರ ಚಿತ್ರೀಕರಣಕ್ಕಾಗಿ ದುಬೈ ಮತ್ತು ಯುರೋಪ್‌ಗೆ ಹೋಗಲು ದರ್ಶನ್ ಕೋರ್ಟ್‌ನ ಅನುಮತಿ ಕೇಳಿದ್ದರು. ಇದಕ್ಕೆ 64 ಸಿಸಿಎಚ್ ಕೋರ್ಟ್ ಸಮ್ಮತಿಸಿತ್ತು. ಆದರೆ ಇದೀಗ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಿದೆ.
ಪ್ರಕಾಶ್ ವೀರ್ ನಿರ್ದೇಶನದ ʼಡೆವಿಲ್ʼ ಚಿತ್ರದ ಶೂಟಿಂಗ್ ಬಹುತೇಕ ಅಂತಿಮಗೊಂಡಿದೆ. ಹಾಡಿನ ಚಿತ್ರೀಕರಣವನ್ನು ದರ್ಶನ್ ಲಕ್ಕಿ ಸ್ಟಾಟ್ ಎಂದೇ ಕರೆಯಿಸಿಕೊಳ್ಳುವ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇದೀಗ ಈ ಆಸೆಗೆ ತಣ್ಣೀರೆರಚಿದಂತಾಗಿದೆ.
ವಿದೇಶಕ್ಕೆ ತೆರಳಲು 64 ಸಿಸಿಎಚ್ ಕೋರ್ಟ್ ಅನುಮತಿ ನೀಡಿದ್ದರಿಂದ ದರ್ಶನ್ ಯುರೋಪ್‌ನ ಸ್ವಿಟ್ಜರ್‌ಲ್ಯಾಂಡ್ ವೀಸಾ ಅಪ್ಲೈ ಮಾಡಿದ್ದರು. ಆದರೆ ಅವರ ಮೇಲೆ ಕೊಲೆ ಅರೋಪ ಇರುವ ಹಿನ್ನೆಲೆಯಲ್ಲಿ ಸ್ವಿಟ್ಜರ್‌ಲ್ಯಾಂಡ್ ವೀಸಾ ನೀಡಲು ನಿರಾಕರಿಸಿದೆ.
ಈ ಸುದ್ದಿಯನ್ನೂ ಓದಿ: The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಹೊಸ ಪೋಸ್ಟರ್ ರಿಲೀಸ್
ಥಾಯ್ಲೆಂಡ್‌ಗೆ ಹಾರಲಿದ್ದಾರೆ ದರ್ಶನ್
ಸ್ವಿಟ್ಜರ್‌ಲ್ಯಾಂಡ್ ವೀಸಾ ಕ್ಯಾನ್ಸಲ್ ಆದ ಬೆನ್ನಲ್ಲೇ ದರ್ಶನ್ ಥಾಯ್ಲೆಂಡ್ ಪರ್ಮಿಶನ್‌ಗೆ ಕೊರ್ಟ್ ಮೊರೆ ಹೋಗಿದ್ದು, ಜುಲೈ 11ರಿಂದ ತೆರಳಲು ಅನುಮತಿ ಸಿಕ್ಕಿದೆ. ಹೀಗಾಗಿ ದರ್ಶನ್ ಮುಂದಿನ ವಾರ ಥಾಯ್ಲೆಂಡ್‌ನ ಪುಕೆಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಸ್ವಿಟ್ಜರ್‌ಲ್ಯಾಂಡ್ ದರ್ಶನ್ ಅಭಿನಯದ ಸಾಕಷ್ಟು ಸಿನಿಮಾಗಳ ಸಾಂಗ್ ಶೂಟಿಂಗ್ ಆಗಿತ್ತು. ಆ ಮೂಲಕ ಅವರಿಗೆ ಅದೃಷ್ಟದ ತಾಣ ಎನಿಸಿಕೊಂಡಿತ್ತು. ಆದರೆ ಈ ಬಾರಿ ಲಕ್ ಕೈ ಕೊಟ್ಟಿದೆ.
ಗಮನ ಸೆಳೆದ ʼಡೆವಿಲ್ʼ ಚಿತ್ರದ ಹೊಸ ಪೋಸ್ಟರ್
ʼತಾರಕ್ʼ ಚಿತ್ರದ ಬಳಿಕ ಪ್ರಕಾಶ್ ಮತ್ತು ಕಾಂಬಿನೇಷನ್‌ನಲ್ಲಿ ʼಡೆವಿಲ್ʼ ಚಿತ್ರ ಮೂಡಿ ಬರುತ್ತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಎಲ್ಲವೂ ಅಂದಿಕೊಂಡಂತೆ ಆಗಿದ್ದರೆ ಇಷ್ಟತ್ತಿಗಾಗಲೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿದ್ದರಿಂದ ಚಿತ್ರೀಕರಣ ವಿಳಂಬಗೊಂಡಿದೆ. ಅವರು ಜೈಲಿನಿಂದ ಹೊರ ಬಂದ ಹಿನ್ನೆಲೆಯಲ್ಲಿ ಇದೀಗ ಶೂಟಿಂಗ್ ಪುನರಾರಂಭಗೊಂಡಿದೆ. ಈ ವರ್ಷವೇ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಪೋಸ್ಟರ್ ಗಮನ ಸೆಳೆದಿದೆ.