ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ದೊಡ್ಮನೆಯಿಂದ ಔಟ್‌ ಆದ ಮಾತಿನ ಮಲ್ಲಿ ಮಲ್ಲಮ್ಮ

ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ಮಲ್ಲಮ್ಮ ಇದೀಗ ಬಿಗ್‌ ಬಾಸ್‌ ಮನೆಯಿಂದ ಅಧಿಕೃತವಾಗಿ ಎಲಿಮಿನೇಟ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎಂದು ಕೆಲವು ದಿನಗಳಿಂದೆ ಸಖತ್‌ ಸುದ್ದಿಯಾಗಿತ್ತು. ಆದರೀಗ ಕಡಿಮೆ ವೋಟ್‌ ಪಡೆದು ಮನೆಯಿಂದ ಹೊರ ಬಂದಿದ್ದಾರೆ.

ದೊಡ್ಮನೆಯಿಂದ ಔಟ್‌ ಆದ ಮಾತಿನ ಮಲ್ಲಿ ಮಲ್ಲಮ್ಮ

bigg boss kannada -

Yashaswi Devadiga Yashaswi Devadiga Nov 2, 2025 10:35 PM

ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ಮಲ್ಲಮ್ಮ (Mallamma) ಇದೀಗ ಬಿಗ್‌ ಬಾಸ್‌ (Bigg Boss Kannada 12) ಮನೆಯಿಂದ ಅಧಿಕೃತವಾಗಿ ಎಲಿಮಿನೇಟ್‌ (Eliminate) ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎಂದು ಕೆಲವು ದಿನಗಳಿಂದೆ ಸಖತ್‌ ಸುದ್ದಿಯಾಗಿತ್ತು. ಆದರೀಗ ಕಡಿಮೆ ವೋಟ್‌ ಪಡೆದು ಮನೆಯಿಂದ (Bigg Boss House) ಹೊರ ಬಂದಿದ್ದಾರೆ.

ಮೊದ ಮೊದಲಿಗೆ ಟಾಸ್ಕ್‌ ಅರ್ಥೈಸಿಕೊಳ್ಳಲು ಪರದಾಡಿದ್ದ ಮಲ್ಲಮ್ಮ

ಮೊದಲ ವಾರವೆಲ್ಲ ಮಲ್ಲಮ್ಮ ಅವರಿಗೆ ಟಾಸ್ಕ್‌ ಅರ್ಥೈಸಿಕೊಳ್ಳಲು ಪರದಾಡುತ್ತಿದ್ದರು. ಈ ಮುಂಚೆ ಬಿಗ್‌ ಬಾಸ್, ಒಂಟಿ ತಂಡದಲ್ಲಿರುವ ಸದಸ್ಯರು ಮಾತ್ರ ಮನೆಯ ದಿನಸಿ ಸಾಮಗ್ರಿಗಳ ಆಯ್ಕೆ ಮಾಡಬೇಕು ಎಂದಿದ್ದರು. ಇದರಲ್ಲಿ ಮಲ್ಲಮ್ಮ ಎಡವಟ್ಟು ಮಾಡಿದ್ದರು.

ಮನೆ ಪಡೆಯುವ ದಿನಸಿ ಸಾಮಗ್ರಿಗಳ ನಿರ್ಧಾರ ಒಂಟಿಗಳದ್ದೇ ಆಗಿರುತ್ತದೆ ಎಂದು ಬಿಗ್ ಬಾಸ್ ಹೇಳಿದ್ದರು. ಬಳಿಕ ನೆಲದ ಮೇಲೆ ಒಂದು ಗುರುತು ಹಾಕಲಾಗಿದೆ ಅದರ ಮೇಲೆ ನಿಲ್ಲಿ ಎಂದು ಬಿಗ್ ಬಾಸ್ ಮಲ್ಲಮ್ಮ ಅವರಿಗೆ ಹೇಳಿದ್ದರು. ಆದರೆ, ಮಲ್ಲಮ್ಮ ಅವರಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.. ಬಿಗ್ ಬಾಸ್ ಪದೇ ಪದೇ ಗುರುತಿನ ಮೇಲೆ ನಿಲ್ಲಿ ಎಂದು ಹೇಳಿದರು ಮಲ್ಲಮ್ಮಗೆ ಅದು ಅರ್ಥವಾಗಿಲ್ಲ.

ಇದನ್ನೂ ಓದಿ: BBK 12: ನಿಮ್ಮಿಬ್ಬರ ವಿಡಿಯೊ ಹಾಕ್ಲಾ? ರಾಶಿಕಾ - ಸೂರಜ್‌ಗೆ ಕಿಚ್ಚನ ನೇರ ಪ್ರಶ್ನೆ!

ಅಷ್ಟಾಗಿ ಆಕ್ಟಿವ್‌ ಇರಲಿಲ್ಲ

ಬಳಿಕ ಇದೇ ಕಾರಣ ಇಟ್ಟುಮಕೊಂಡು ಮನೆಮಂದಿ ಕೂಡ ಸಾಕಷ್ಟು ಬಾರಿ ಮಲ್ಲಮ್ಮ ಕುರಿತು ಕಾರಣ ಹೇಳಿದ್ದುಇದೆ. ಆದರೆ ಕಳೆದ ಒಂದು ವಾರದಿಂದ ಮಲ್ಲಮ್ಮ ಅವರು ಟಾಸ್ಕ್‌ನಲ್ಲಿಯೂ ಅಷ್ಟಾಗಿ ಆಕ್ಟಿವ್‌ ಇರಲಿಲ್ಲ. ಅಷ್ಟೇ ಅಲ್ಲ ರಘು ಅವರು ಕೂಡ ಮೊದಲಿಗೆ ಮಲ್ಲಮ್ಮ ಅವರಿಗೆ ಸುಮ್ಮನೆ ಇರಲು ಹೇಳಿದ್ದರು. ಬಳಿಕ ಕಿಚ್ಚ ಕೂಡ ಮಲ್ಲಮ್ಮ ಅವರಿಗೆ ಟಾಸ್ಕ್‌ನಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದ್ದರು.

ಮಲ್ಲಮ್ಮ ಮುಗ್ಧೆ ಇರಬಹುದು, ಆದರೆ ಒಳ್ಳೆಯ ಆಟಗಾರ್ತಿ. ನಾನು ಟಿಫನ್‌ ಮಾಡಲು ಚಮಚ ಬೇಕು ಎಂದರೆ ಧ್ರುವಂತ್‌ಗೆ ಯಾರೋ ಚಮಚ ಎಂದು ಅನಿಸುತ್ತದೆ. ಮಲ್ಲಮ್ಮ ಇಲ್ಲಿ ಇಲ್ಲ ಅಂದ್ರೆ, ಮಲ್ಲಮ್ಮ ಇಲ್ಲ, ನಾನು ಆಟ ಆಡಲ್ಲ, ಹೊರಗಡೆ ಹೋಗ್ತೀನಿ ಅಂತ ಹೇಳ್ತಾರೆ, ಧ್ರುವಂತ್‌ ಎಮೋಶನಲ್‌ ಡ್ರಾಮಾ ಅನಿಸ್ತಿದೆ, ನಾಟಕ ಅನಿಸ್ತಿದೆ. ಆಚೆ ಮಲ್ಲಮ್ಮ, ಧ್ರುವಂತ್‌ ಸಿಕ್ಕಿದ್ರೆ ಈ ರೇಂಜ್‌ಗೆ ಆಡ್ತಿರಲಿಲ್ಲ ಅನಿಸುತ್ತದೆ ಎಂದಯ ಈ ಹಿಂದೆ ಸುಧಿ ಕೂಡ ಹೇಳಿದ್ದರು.

ಯಾರು ಈ ಮಲ್ಲಮ್ಮ?

ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಫ್ಯಾಶನ್ ಡಿಸೈನ್‌ ಶಾಪ್‌ನಲ್ಲಿ ಸಹಾಯಕಿಯಾಗಿ ಮಲ್ಲಮ್ಮ ಕೆಲಸ ಮಾಡುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಇವರು, ರೀಲ್ಸ್‌ ಮೂಲಕ ಇನ್ನೊಸೆಂಟ್‌ ಇನ್‌ಫ್ಲುಯೆನ್ಸರ್‌ ಎಂದು ಫೇಮಸ್. ತಮ್ಮ ಸರಳ ಜೀವನಶೈಲಿ, ಹಾಸ್ಯಮಯ ರೀಲ್ಸ್‌ ಮತ್ತು ಹಳ್ಳಿ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಫೇಮಸ್‌ ಆದವರು.

ಆದರೆ, ದೊಡ್ಮನೆ ಇವರಿಗೆ ಹೇಳಿಮಾಡಿಸಿದಂತಿರಲಿಲ್ಲ.ಮಲ್ಲಮ್ಮ ಅವರಿಗೆ ಕೆಲವು ನಿಯಮಗಳು, ಆಟದ ವಿಚಾರಗಳು ಅರ್ಥ ಆಗುತ್ತಿರಲಿಲ್ಲ. ಆದರೆ, ಇವರು ಅನೇಕರ ಫೇವರಿಟ್ ಸ್ಪರ್ಧಿ ಆಗಿದ್ದರು. ವಯಸ್ಸಾಗಿದ್ದರೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಠಕ್ಕರ್ ಕೊಡೋ ರೀತಿಯಲ್ಲಿ ಮಲ್ಲಮ್ಮ ಆಟ ಆಡುತ್ತಿದ್ದರು. ಕೆಲವು ಬಾರಿ ಇತರೆ ಸ್ಪರ್ಧಿಗಳು ಮನೆಯವರನ್ನು ನೆನೆದು ಕಣ್ಣೀರಿಟ್ಟಿದ್ದರೆ ಮಲ್ಲಮ್ಮ ಮಾತ್ರ ಗಟ್ಟಿತನ ತೋರಿಸುತ್ತಿದ್ದರು. ಭಾವನಾತ್ಮಕ ವಿಚಾರಕ್ಕೆ ಕುಗ್ಗಿರಲಿಲ್ಲ.

ಮಲ್ಲಮ್ಮ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದವರಾಗಿದ್ದು, ಕೆಲಸನವನ್ನು ಅರಸಿ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ, ತಮ್ಮೂರಿನಲ್ಲಿ ಸರಳ ಜೀವನ ನಡೆಸುತ್ತಾ ತುಂಬು ಕುಟುಂಬದೊಂದಿಗೆ ಬೆಳೆದವರು. ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಹಾಗೂ ಹಳ್ಳಿ ಜೀವನದ ಶೈಲಿ ಹಾಗೂ ಇವರ ಸರಳತೆಯೇ ಮತ್ತು ಮುಗ್ಧತೆ ಇವರನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ.

ಇದನ್ನೂ ಓದಿ:BBK 12: ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್‌ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ

ಮಲ್ಲಮ್ಮ ಕನ್ನೆಳ್ಳಿ ಗ್ರಾಮದ ಮಾನಪ್ಪನವರೊಂದಿಗೆ ವಿವಾಹವಾಗಿದ್ದರು. ಇಬ್ಬರ ಮಕ್ಕಳ ತಾಯಿಯಾಗಿರುವ ಇವರು ಜೀವನದ ಬಂಡಿ ಸಾಗಿಸಲು ಸದ್ಯ ಬೆಂಗಳೂರಿನಲ್ಲಿ ಫ್ಯಾಷನ್‌ ಬೋಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಗಾರೆ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಅವರ ಲಕ್ ಬದಲಾಯಿಸಿದ್ದು, ಮಾತ್ರ ಫ್ಯಾಷನ್‌ ಬೋಟಿಕ್‌.