BBK 12: ಕಾವುಗೆ ಗಿಲ್ಲಿನೇ ಟಾರ್ಗೆಟ್ ಅಂತೆ! ಊಸರವಳ್ಳಿ ಅಂತಿದ್ದಾರೆ ಪ್ರೇಕ್ಷಕರು
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ಜೋಡಿಯೇ ಪ್ರಮುಖ ಹೈಲೈಟ್. ಸದಾ ಈ ಜೋಡಿ ಟಿವಿ ಮುಂದೆ ಬರಲಿ ಅಂತ ಕಾಯುತ್ತಿರೋ ವೀಕ್ಷಕರಿಗೆ ಈ ಪ್ರೋಮೋ ನೋಡಿ ಬೇಸರ ತರಿಸಿದೆ. ಇನ್ನು ಧನುಷ್ ಕೂಡ ಮಾತನಾಡಿ, ಗಿಲ್ಲಿ ತುಂಬಾ ಕಾಮಿಡಿ ಮಾಡ್ತಾ ಇರ್ತಾನೆ. ಆದರೆ ನಾವು ಕಾಮಿಡಿ ಮಾಡಿದ್ರೆ ಅವನು ಸೀರಿಯಸ್ ಆಗ್ತಾನೆ ಎಂದರು. ಇನ್ನು ಅಶ್ವಿನಿ ಗೌಡ ಅವರು ಗಿಲ್ಲಿ ಅವರು ಡೇ 1 ಇಂದ ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದರು. ಅಷ್ಟೇ ಅಲ್ಲ ಕಾವ್ಯ ಅವರಿಗೆ ಊಸರವಳ್ಳಿ ಎಂಬ ಪಟ್ಟ ವೀಕ್ಷಕರು ನೀಡಿದ್ದಾರೆ. ಹಾಗಾದ್ರೆ ಗಿಲ್ಲಿನ ಟಾರ್ಗೆಟ್ ಮಾಡಿದ್ಯಾರು? ಯಾಕೆ?
bigg boss kannada -
Yashaswi Devadiga
Nov 2, 2025 6:10 PM
ಬಿಗ್ ಬಾಸ್ ಸೀಸನ್ (Bigg Boss Kannada 12) ವೀಕೆಂಡ್ ಸಂಚಿಕೆಯಲ್ಲಿ ಇವರು ನನ್ನ ಟಾರ್ಗೆಟ್ ಎಂಬ ಟಾಸ್ಕ್‌ವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ್ದರು. ಅದರಂತೆ ಮೊದಲಿಗೆ ರಿಷಾ ಅವರು ಕಾರಣ ಕೊಟ್ಟಿದ್ದು ಹೀಗೆ. ಮೋಸ ಮಾಡೋದ್ರಲ್ಲಿ ಗಿಲ್ಲಿ ಎತ್ತಿದ ಕೈ ಎಂದರು.
ಇನ್ನು ಧನುಷ್ ಕೂಡ ಮಾತನಾಡಿ, ಗಿಲ್ಲಿ ತುಂಬಾ ಕಾಮಿಡಿ ಮಾಡ್ತಾ ಇರ್ತಾನೆ. ಆದರೆ ನಾವು ಕಾಮಿಡಿ ಮಾಡಿದ್ರೆ ಅವನು ಸೀರಿಯಸ್ ಆಗ್ತಾನೆ ಎಂದರು. ಇನ್ನು ಅಶ್ವಿನಿ ಗೌಡ ಅವರು ಗಿಲ್ಲಿ ಅವರು ಡೇ 1 ಇಂದ ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾ ಇದ್ದಾರೆ. ಗೇಮ್ ಅಂತ ಬಂದಾಗಲೂ ತುಂಬಾ ಸ್ವಾರ್ಥಿ ಎಂದರು. ಇನ್ನು ಕಾವ್ಯ ಗೌಡ ಮಾತನಾಡಿ. ಜಂಟಿ ಆಗಿ ಒಳಗೆ ಬಂದಾಗ ಅವರು ತುಂಬಾ ಸೂಪರ್ ಆಕ್ಟಿವ್ ಇದ್ದರು. ನನ್ನ ಸ್ಟ್ಯಾಂಡ್ ಕಾಣಿಸ್ತಾ ಇರಲಿಲ್ಲ. ಹಾಗಾಗಿ ನಾನು ಅವರನ್ನ ಟಾರ್ಗೆಟ್ ಮಾಡ್ತೇನೆ ಎಂದರು.
ಇದನ್ನೂ ಓದಿ: BBK 12: ಕಾವು ಜೊತೆ ಸೂರಜ್ ಡ್ಯಾನ್ಸ್ ಹೇಗಿತ್ತು ಗೊತ್ತಾ? ಕಿಚ್ಚನ ಮುಂದೆ ಅಸಲಿ ಕಹಾನಿ ಬಿಚ್ಚಿಟ್ಟ ಗಿಲ್ಲಿ
ಗಿಲ್ಲಿ ಕಾಮಿಡಿ
ಕಳೆದ ವಾರ ಸೂರಜ್ ಮತ್ತು ಕಾವ್ಯ ಡ್ಯಾನ್ಸ್ ಪ್ರ್ಯಾಕ್ಟಿಸ್ ಕಂಡು ಗಿಲ್ಲಿ ಸಖತ್ ಉರಿದುಕೊಂಡಿದ್ದರು. ಸೈಡ್‌ನಲ್ಲಿ ನಿಂತು ಹಾಗೇ ನೋಡ್ತಾ ನಿಂತಿದ್ದರು. ಈ ಬಗ್ಗೆ ಕಿಚ್ಚ ಇದೀಗ ಕಾಲೆಳೆದಿದ್ದಾರೆ. ಈ ನಡುವೆ ಅಶ್ವಿನಿ ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟು ʻಅಶ್ವಿನಿ ಗೌಡ ಅವರು, ನನ್ನ ಹಿಂದೆ ಇವರು ಯಾಕೆ ಬಿದ್ದಿದ್ದಾರೆ ಗೊತ್ತಿಲ್ಲ. ನಾನು ಈಗಾಗಲೇ ಕಮಿಟ್ ಆಗಿರುವೆʼ ಎಂದು ಕಾಲೆಳೆದಿದ್ದಾರೆ.
ಕಾವ್ಯ ಮತ್ತು ಸೂರಜ್ ಡ್ಯಾನ್ಸ್ ಮಾಡುವಾಗ ಗಿಲ್ಲಿಗೆ ʻಸ್ವಲ್ಪ ಹಾಗೇ ಹೀಗೆ ಆಗಿತ್ತು ಅಲ್ವ?ʼ ಅಂತ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದಾರೆ. ಆಗ ಗಿಲ್ಲಿ ಈ ಬಗ್ಗೆ ಕಾಮಿಡಿ ಮಾಡುತ್ತ, ʻಸತ್ಯ ಅವರಿಬ್ಬರು ಡ್ಯಾನ್ಸ್ ಹೇಗಿತ್ತು ಅಂದರೆ ರೊಮ್ಯಾಂಟಿಕ್ ಸಾಂಗ್ ತರ ಇರಲಿಲ್ಲ. ಅದು ಜಲ್ಲಿ ಕಟ್ಟು ಗೂಳಿ ಹಿಡಿಯುತ್ತಾರಲ್ಲ ಹಾಗೇ ಹಾಗೆ ಇತ್ತುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK 12: ಸುದೀಪ್ ತೀರ್ಮಾನವೇ ಸರಿ ಇಲ್ವಾ? ಕಿಚ್ಚನ ಪಂಚಾಯ್ತಿ ಬಗ್ಗೆ ಕೇಳಿ ಬರ್ತಿದೆ ಅಪಸ್ವರ
ಗಿಲ್ಲಿ ಕೌಂಟರ್
ಕಾವ್ಯ ಕೂಡ ಪ್ರ್ಯಾಕ್ಟಿಸ್ ಮಾಡಿದ್ದು ಎಲ್ಲ ಹಾಳಾಗಿ ಹೋಯ್ತು ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್ ಅವರು ಗಿಲ್ಲಿಯ ಬಳಿ ʻಏನಾದರೂ ಸಹಾಯ ಇದ್ದರೆ ನೀವು ಮಾಡಬೇಕು ತಾನೆʼ? ಎಂದು ಹೇಳಿದ್ದಾರೆ. ಅದಕ್ಕೆ ಗಿಲ್ಲಿ ಕೂಡ ನನ್ನ ಗುಂಡಿ ನಾನೇ ತೋಡಿಕೊಳ್ಳಾ?ʼ ಎಂದು ಹೇಳಿದ್ದಾರೆ. ಇನ್ನು ಅಶ್ವಿನಿ ಅವರು ಕೂಡ ಗಿಲ್ಲಿ ಹೊಟ್ಟೆ ಉರಿದುಕೊಂಡು ನೋಡಿ ನನಗೂ ತುಂಬಾ ಖುಷಿʼ ಆಯ್ತು ಅಂದಿದ್ದಾರೆ.
ಅಶ್ವಿನಿ ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟು ʻಅಶ್ವಿನಿ ಗೌಡ ಅವರು, ನನ್ನ ಹಿಂದೆ ಇವರು ಯಾಕೆ ಬಿದ್ದಿದ್ದಾರೆ ಗೊತ್ತಿಲ್ಲ. ನಾನು ಈಗಾಗಲೇ ಕಮಿಟ್ ಆಗಿರುವೆʼ ಎಂದು ಕಾಲೆಳೆದಿದ್ದಾರೆ.