Vastu Tips: ಮಹಡಿ ಮೆಟ್ಟಿಲುಗಳ ಕೆಳಗೆ ಇವು ಇರಲೇಬಾರದು
ಇತ್ತೀಚಿನ ದಿನಗಳಲ್ಲಿ ಮನೆ ಎಷ್ಟೇ ದೊಡ್ಡದಾಗಿದ್ದರೂ ವಸ್ತುಗಳನ್ನು ಸಂಗ್ರಹಿಸಿಡಲು ಅತ್ಯಂತ ಗುಪ್ತ ಜಾಗಗಳು ಬೇಕೆನಿಸುತ್ತವೆ. ಉದಾಹರಣೆಗೆ ಬೆಡ್ ಕೆಳಗೆ, ಮೆಟ್ಟಿಲಿನ ಕೆಳಗೆ, ಕಪಾಟು ಪಕ್ಕದಲ್ಲಿ.. ಹೀಗೆ ನಾನಾ ತೆರನಾದ ಗುಪ್ತ ಜಾಗಗಳಲ್ಲಿ ನಾವು ವಸ್ತುಗಳನ್ನು ಸಂಗ್ರಹಿಸಿ ಇಡುತ್ತೇವೆ. ಹೀಗೆ ಇಡುವಾಗ ವಾಸ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾಗಿ ಮೆಟ್ಟಿಲಿನ ಕೆಳ ಭಾಗದಲ್ಲಿ ಏನಾದರೂ ಸಂಗ್ರಹಿಸಿಡುವುದಾದರೆ ವಾಸ್ತು ನಿಯಮಗಳ ಪಾಲನೆ ಬಹಳ ಅಗತ್ಯ ಎನ್ನುತ್ತದೆ ವಾಸ್ತು ಶಾಸ್ತ್ರ. ಯಾಕೆಂದರೆ ಮೆಟ್ಟಿಲಿನ ಕೆಳ ಭಾಗದಲ್ಲಿ ನಾವು ಸಂಗ್ರಹಿಸಿಡುವ ವಸ್ತುಗಳು ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಇದರಿಂದ ಮನೆಯಲ್ಲಿ ನಾನಾ ತೆರನಾದ ಸಮಸ್ಯೆಗಳು ಉದ್ಭವವಾಗುತ್ತದೆ.
-
ವಿದ್ಯಾ ಇರ್ವತ್ತೂರು
Nov 3, 2025 7:02 AM
ಬೆಂಗಳೂರು: ಮನೆಯಲ್ಲಿ (Vastu for home) ಕೆಲವೊಂದು ವಸ್ತುಗಳು ಎಲ್ಲರಿಗೂ ಕಾಣುವಂತೆ ಇರಬಾರದು ಎನ್ನುವ ಕಾರಣಕ್ಕೆ ಕೆಲವೊಂದು ಗುಪ್ತ ಜಾಗಗಳಲ್ಲಿ ವಸ್ತುಗಳನ್ನು ಸಂಗ್ರಹಿಸಿ ಇಡುತ್ತೇವೆ. ಹೀಗೆ ಇಡುವ ವಸ್ತುಗಳಿಂದ ಏನಾದರೂ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸುವುದು ತಪ್ಪು. ಯಾಕೆಂದರೆ ಇಂತಹ ವಸ್ತುಗಳು ಕೆಲವೊಮ್ಮೆ ವಾಸ್ತು ದೋಷಗಳನ್ನು ಉಂಟು ಮಾಡಬಹುದು ಎನ್ನುತ್ತಾರೆ ವಾಸ್ತು (vastu tips) ತಜ್ಞರು. ಮನೆಯ ಒಳಾಂಗಣ, ಹೊರಾಂಗಣದಲ್ಲಿ ಮೆಟ್ಟಿಲುಗಳ (vastu for stairs) ಕೆಳಗಿನ ಜಾಗ ಖಾಲಿ ಇದೆ ಎಂದು ನಾವು ಸ್ಟೋರೇಜ್ ಸ್ಥಳವನ್ನಾಗಿ ಮಾಡಿಡುತ್ತೇವೆ. ಆದರೆ ಇವು ದುರದೃಷ್ಟವನ್ನು ತರಬಹುದು ಎಚ್ಚರ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಮನೆಯಲ್ಲಿ ಮೆಟ್ಟಿಲುಗಳ ಕೆಳಗಿರುವ ಜಾಗವನ್ನು ಬಳಸುವುದು ಒಳ್ಳೆಯದು. ಆದರೆ ಇದರಲ್ಲಿ ಯಾವ ವಸ್ತುಗಳನ್ನು ಇರಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಸಾಮಾನ್ಯವಾಗಿ ಮೆಟ್ಟಿಲುಗಳು ವಕ್ರವಾಗಿರುತ್ತವೆ. ಹೀಗಾಗಿ ಅವುಗಳ ಕೆಳಗೆ ಕೆಲವು ವಸ್ತುಗಳನ್ನು ಇರಿಸಲೇಬಾರದು.
ಇದನ್ನೂ ಓದಿ: Vastu Tips: ಮನೆ ಸ್ವಚ್ಛಗೊಳಿಸುವಾಗ ಪಾಲಿಸಬೇಕು ಕೆಲವು ನಿಯಮ
ಸಾಕುಪ್ರಾಣಿಗಳು
ಸಾಮಾನ್ಯವಾಗಿ ಸಾಕುಪ್ರಾಣಿಗಳನ್ನು ಇಡಲು ಅಥವಾ ಇರಿಸಲು ಮೆಟ್ಟಿಲುಗಳ ಕೆಳಗಿನ ಜಾಗವನ್ನು ಬಳಸಲಾಗುತ್ತದೆ. ಇದರಿಂದ ಅಲ್ಲಿನ ಶಕ್ತಿಯು ನಕಾರಾತ್ಮಕವಾಗುತ್ತದೆ. ಇದು ಸಾಕುಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವುಗಳ ನಡವಳಿಕೆಯು ಆಕ್ರಮಣಕಾರಿಯಾಗಬಹುದು.
ಅಧ್ಯಯನ ಸ್ಥಳ
ಮೆಟ್ಟಿಲುಗಳ ಕೆಳಗಿರುವ ಜಾಗವನ್ನು ಎಂದಿಗೂ ಅಧ್ಯಯನ ಸ್ಥಳವಾಗಿ ಮಾಡಬಾರದು. ಇಲ್ಲಿ ಪುಸ್ತಕಗಳ ಕಪಾಟು, ಅಧ್ಯಯನ ಮಾಡುವ ಟೇಬಲ್ ಅನ್ನು ಇರಿಸಬಾರದು. ಯಾಕೆಂದರೆ ಇದರಿಂದ ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ.
ದೇವರ ಕೋಣೆ
ಮೆಟ್ಟಿಲುಗಳ ಕೆಳಗೆ ಎಂದಿಗೂ ದೇವರ ಕೋಣೆಯನ್ನು ನಿರ್ಮಿಸಬಾರದು. ಯಾಕೆಂದರೆ ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಇದು ಮನೆಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ.
ಹಣದ ಕಪಾಟು
ಎಂದಿಗೂ ಮೆಟ್ಟಿಲುಗಳ ಕೆಳಗೆ ಹಣದ ಕಪಾಟುಗಳನ್ನು ನಿರ್ಮಿಸಬಾರದು. ಯಾಕೆಂದರೆ ಇದು ಆದಾಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ.
ಕಸದ ಬುಟ್ಟಿಗಳು
ಮೆಟ್ಟಿಲುಗಳ ಕೆಳಗೆ ಎಂದಿಗೂ ಕಸದ ಬುಟ್ಟಿಯನ್ನು ಇರಿಸಬೇಡಿ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ನಕಾರಾತ್ಮಕತೆಗೆ ಅಹ್ವಾನ ನೀಡಿದಂತಾಗುತ್ತದೆ.
ವಾಶ್ ಬೇಸಿನ್
ಮಹಡಿಯ ಮೆಟ್ಟಿಲುಗಳ ಕೆಳಗೆ ವಾಶ್ ಬೇಸಿನ್ ಕೂಡ ಇಡಕೂಡದು. ಇದರಿಂದ ಮನೆಯಲ್ಲಿ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಕುಟುಂಬದ ಫೋಟೋಗಳು
ಮೆಟ್ಟಿಲುಗಳ ಕೆಳಗೆ ಎಂದಿಗೂ ಕುಟುಂಬದ ಫೋಟೋಗಳನ್ನು ಇರಿಸಬೇಡಿ. ಇದರಿಂದ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯವನ್ನು ಉಂಟಾಗುತ್ತದೆ.
ಇದನ್ನೂ ಓದಿ: Vastu Tips: ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಈ ವಸ್ತುಗಳು
ಬೇಡವಾದ ವಸ್ತುಗಳು
ಎಂದಿಗೂ ಬೇಡವಾದ, ಭಾರವಾದ ಅಥವಾ ಮುರಿದ ವಸ್ತುಗಳನ್ನು ಇಲ್ಲಿ ಇರಿಸಬೇಡಿ. ಯಾಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದ ಧನಾತ್ಮಕ ಶಕ್ತಿಯ ಹರಿವಿಗೆ ನಿರ್ಬಂಧ ಉಂಟಾಗುತ್ತದೆ.
ಏನು ಇಡಬಹುದು?
ಮೆಟ್ಟಿಲುಗಳ ಕೆಳಗಿನ ಜಾಗವನ್ನು ಖಾಲಿ ಬಿಡುವುದು ಯಾವಾಗಲೂ ಉತ್ತಮ. ಒಂದು ವೇಳೆ ಮನೆಯಲ್ಲಿ ಜಾಗದ ಕೊರತೆ ಇದ್ದರೆ ಇಲ್ಲಿ ಶೇಖರಣಾ ಕೊಠಡಿಯಾಗಿ ಬಳಸಬಹುದು. ಶೂ, ಚಪ್ಪಲಿಗಳನ್ನು ಇಡಬಹುದು. ಸಣ್ಣ ಸಸ್ಯಗಳು ಅಥವಾ ಮಡಕೆಗಳನ್ನುಸಂಗ್ರಹ ಮಾಡಿ ಇಲ್ಲಿ ಇರಿಸಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.