ಟಾಲಿವುಡ್ ಸ್ಟಾರ್ ಹೀರೋ ನಾಗ ಚೈತನ್ಯ (Naga Chaitanya) ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಹೆಸರು ಮತ್ತು ಚಿತ್ರದ ಅನಧಿಕೃತ ಬಳಕೆ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅಶ್ಲೀಲ ವಿಷಯವನ್ನು ಸೃಷ್ಟಿಸುವ ವಿರುದ್ಧ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಮಂತಾ (Samantha) ಜೊತೆಗೆ ವಿಚ್ಚೇದನವಾದ ದಿನದಿಂದ ನಾಗಚೈತನ್ಯ ವಿರುದ್ಧ ಆನ್‌ಲೈನ್‌ನಲ್ಲಿ ನೆಗೆಟಿವ್ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾಗ ಚೈತನ್ಯ ತನ್ನ ಮಾಜಿ ಪತ್ನಿ ಸಮಂತಾಗೆ ಮೋಸ ಮಾಡಿ, ಅವರ ಜೀವನವನ್ನೇ ಹಾಳು ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ನಾಗ ಚೈತನ್ಯ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ನಾಗಚೈತನ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ವೈಭವ್ ಕಕ್ಕರ್, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠದ ಮುಂದೆ ವಾದ ಮಂಡಿಸಿದರು. ವೆಬ್‌ಸೈಟ್‌ಗಳಿಗೆ ಟ್ರಾಫಿಕ್ ಹೆಚ್ಚಿಸಲು ಕೆಲವರು ಚೈತನ್ಯ ಅವರ ಹೆಸರಿನೊಂದಿಗೆ ಅಶ್ಲೀಲ ಪದಗಳನ್ನು ಬಳಸುತ್ತಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಎಐ ಡೀಪ್‌ಫೇಕ್ ವೀಡಿಯೊಗಳು ಚೈತನ್ಯ ಅವರನ್ನು ಆಕ್ಷೇಪಾರ್ಹ ಸ್ಥಾನದಲ್ಲಿ ತಪ್ಪಾಗಿ ತೋರಿಸುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Siddu Moolimani: ಸದ್ದಿಲ್ಲದೇ ಒಟಿಟಿಗೆ ಬಂತು ಕನ್ನಡ ಹಾರರ್ ಕಾಮಿಡಿ ಸಿನಿಮಾ ; ಸ್ಟ್ರೀಮಿಂಗ್ ಎಲ್ಲಿ?
ವಿಚ್ಛೇದನ ಪ್ರಕರಣದಲ್ಲಿ ಚೈತನ್ಯ ಸಮಂತಾಗೆ ಮೋಸ ಮಾಡಿದ್ದಾರೆ ಎಂದು ಹರಡುತ್ತಿರುವ ವಿಷಯವನ್ನು ವಕೀಲರು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯಕ್ಕೆ ಮನವಿ
ಸೋಶಿಯಲ್ ಮೀಡಿಯಾದಲ್ಲಿ ನಾಗ ಚೈತನ್ಯ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸಮಂತಾಗೆ ವಿಚ್ಚೇದನ ನೀಡಿ ನಾಗ ಚೈತನ್ಯ ವಂಚಿಸಿದ್ದಾರೆ. ಅವರ ವೃತ್ತಿಜೀವನವನ್ನೇ ಹಾಳು ಮಾಡಿದ್ದಾರೆ ಎನ್ನುವ ರೀತಿ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಇದರಿಂದ ಅವರ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಾಗ ಚೈತನ್ಯ ಪರವಾಗಿ ಡೈನಾಮಿಕ್ ಇಂಜೆಕ್ಷನ್ ನೀಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಾದಗಳನ್ನು ಆಲಿಸಿದ ನಂತರ, ನ್ಯಾಯಾಧೀಶರು "ನೀವು ಸಾರ್ವಜನಿಕ ಜೀವನದಲ್ಲಿದ್ದಾಗ, ನೀವು ಸಾಮಾನ್ಯ ಜನರಿಗಿಂತ ಹೆಚ್ಚಿನ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅದಕ್ಕೂ ಮಿತಿಗಳಿವೆ." ಎಂದು ನ್ಯಾಯಾಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸಮನ್ಸ್ ಜಾರಿ ಮಾಡಿ, ನಾಗ ಚೈತನ್ಯ ಅವರ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕೆ ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆಂದು ವರದಿಯಾಗಿದೆ.ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: Ranbir Kapoor: ಈ ಎಲ್ಲ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್!
ಸಮಂತಾ ವಿಚ್ಛೇದನದ ನಂತರ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾದರು ಎಂಬುದು ಗೊತ್ತೇ ಇದೆ. ಸಮಂತಾ ಸಹ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. ಅವರು ಪ್ರಸ್ತುತ ತಮ್ಮ ಮುಂದಿನ ಚಿತ್ರ ಮಾ ಇಂಟಿ ಬಂಗಾರಂ ಪ್ರಚಾರದಲ್ಲಿ ನಿರತರಾಗಿದ್ದಾರೆ.