ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Siddu Moolimani: ಸದ್ದಿಲ್ಲದೇ ಒಟಿಟಿಗೆ ಬಂತು ಕನ್ನಡ ಹಾರರ್ ಕಾಮಿಡಿ ಸಿನಿಮಾ ; ಸ್ಟ್ರೀಮಿಂಗ್‌ ಎಲ್ಲಿ?

Siddu Moolimani: ಎನ್ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಗಿರಿಧರ ಟಿ ವಸಂತಪುರ ನಿರ್ಮಿಸಿದ್ದಾರೆ. ಸುಜಾತಾ ಗಿರಿಧರ ಸಹ-ನಿರ್ಮಾಪಕರಾಗಿದ್ದಾರೆ. ಲವ್ ಯು ಮುದ್ದು ನಂತರ ಸಿದ್ದು ಮೂಲಿಮನಿ ಸೀಟ್ ಎಡ್ಜ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಇದೀಗ ಈ ಸಿನಿಮಾ ಒಟಿಟಿಗೆ (OTT) ಎಂಟ್ರಿ ಕೊಡುತ್ತಿದೆ.

ಸದ್ದಿಲ್ಲದೇ ಒಟಿಟಿಗೆ ಬಂತು ಕನ್ನಡ ಹಾರರ್ ಕಾಮಿಡಿ ಸಿನಿಮಾ

ಸೀಟ್ ಎಡ್ಜ್ -

Yashaswi Devadiga
Yashaswi Devadiga May 30, 2026 9:41 AM

ಸಿದ್ದು ಮೂಲಿಮನಿ (siddu moolimani) ನಟನೆಯ 'ಸೀಟ್ ಎಡ್ಜ್' (seat edge kannada movie) ಚಿತ್ರ ಜನವರಿ 30 ರಂದು ರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿತ್ತು. ಚಿತ್ರವು ಕಾಮಿಡಿ, ಹಾರರ್ ಮತ್ತು ಸಸ್ಪೆನ್ಸ್ ಮಿಶ್ರಣವಾಗಿದೆ. ಎನ್ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಗಿರಿಧರ ಟಿ ವಸಂತಪುರ ನಿರ್ಮಿಸಿದ್ದಾರೆ. ಸುಜಾತಾ ಗಿರಿಧರ ಸಹ-ನಿರ್ಮಾಪಕರಾಗಿದ್ದಾರೆ. ಲವ್ ಯು ಮುದ್ದು ನಂತರ ಸಿದ್ದು ಮೂಲಿಮನಿ ಸೀಟ್ ಎಡ್ಜ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಇದೀಗ ಈ ಸಿನಿಮಾ ಒಟಿಟಿಗೆ (OTT) ಎಂಟ್ರಿ ಕೊಡುತ್ತಿದೆ.

ಸ್ಟ್ರೀಮಿಂಗ್‌ ಎಲ್ಲಿ?

ಸಿನಿಮಾ ಈಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿದ್ದು ಮೂಲಿಮನಿ ಹಾಗೂ ರವೀಕ್ಷಾ ಶೆಟ್ಟಿ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್, ಪುನೀತ್ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ:Kiara Advani: ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ

ಚೇತನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು, ಘೋಸ್ಟ್ ಹಂಟಿಂಗ್‌ಗೆ ಹೋಗುವ ವ್ಲಾಗರ್ ಒಬ್ಬನ ಕಥೆಯನ್ನು ಅನುಸರಿಸುತ್ತದೆ. ಆದರೆ, ಅನಿರೀಕ್ಷಿತ ಮತ್ತು ಆಘಾತಕಾರಿ ಸನ್ನಿವೇಶಗಳ ಸರಣಿಯಲ್ಲಿ ಅವನು ಸಿಲುಕಿಕೊಳ್ಳುತ್ತಾನೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಕುದುರೆಮುಖದಲ್ಲಿ 45 ದಿನಗಳ ಕಾಲ ಚಿತ್ರೀಕರಣಗೊಂಡ ಈ ಚಿತ್ರಕ್ಕೆ ದೀಪಕ್ ಕುಮಾರ್ ಜೆಕೆ ಅವರ ಛಾಯಾಗ್ರಾಹಕ, ನಾಗೇಂದ್ರ ಕೆ ಉಜ್ಜನಿ ಅವರ ಸಂಕಲನ, ಆಕಾಶ್ ಪರ್ವ ಅವರ ಸಂಗೀತ ಸಂಯೋಜನೆ ಇದೆ ಮತ್ತು ರಘು ಆರ್‌ಜೆ ನೃತ್ಯ ಸಂಯೋಜಕರಾಗಿದ್ದಾರೆ.

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಆಕಾಶ್ ಪರ್ವ ಸಂಗೀತದಲ್ಲಿ 'ಹಂಗೋ ಹಿಂಗೋ' ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಿರ್ದೇಶಕ ಚೇತನ್‌ ಶೆಟ್ಟಿ ಇದಕ್ಕೂ ಮುಂಚೆ ಮಾತನಾಡಿ, ''ಇತ್ತೀಚಿನ ದಿನಗಳಲ್ಲಿ ಯು-ಟ್ಯೂಬ್‌ ಮತ್ತು ಸೋಶಿಯಲ್‌ ಮೀಡಿಯಾಗಳಲ್ಲಿ ಅತಿ ಹೆಚ್ಚು ವೀವ್ಸ್‌ ಪಡೆಯಲು, ಜನಪ್ರಿಯರಾಗಲು ಯು-ಟ್ಯೂಬರ್ಸ್‌ ಮತ್ತು ವ್ಲಾಗರ್ಸ್‌ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇವೆ.

ನಿರ್ದೇಶಕ ಚೇತನ್‌ ಶೆಟ್ಟಿ ಇದಕ್ಕೂ ಮುಂಚೆ ಮಾತನಾಡಿ, ''ಇತ್ತೀಚಿನ ದಿನಗಳಲ್ಲಿ ಯು-ಟ್ಯೂಬ್‌ ಮತ್ತು ಸೋಶಿಯಲ್‌ ಮೀಡಿ ಯಾಗಳಲ್ಲಿ ಅತಿ ಹೆಚ್ಚು ವೀವ್ಸ್‌ ಪಡೆಯಲು, ಜನಪ್ರಿಯರಾಗಲು ಯು-ಟ್ಯೂಬರ್ಸ್‌ ಮತ್ತು ವ್ಲಾಗರ್ಸ್‌ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇವೆ.

ಇದನ್ನೂ ಓದಿ: Ranbir Kapoor: ಈ ಎಲ್ಲ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್!

ಇದು ಎಲ್ಲ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ, ಏನೇನು ಆಗಬಹುದು ಎಂಬುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಡಾರ್ಕ್‌ ಕಾಮಿಡಿಯ ಜತೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿಗೋದು ಗ್ಯಾರೆಂಟಿ'' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.