ಕಲರ್ಸ್ ಕನ್ನಡ ವಾಹಿನಿಯ ಹೆಮ್ಮೆಯ ಕೌಟುಂಬಿಕ ಧಾರಾವಾಹಿ ‘ನಂದಗೋಕುಲ’ ಇದೀಗ ರೋಚಕತೆ ಮತ್ತು ಹಾಸ್ಯದ ರಸದೌತಣದೊಂದಿಗೆ ವೀಕ್ಷಕರನ್ನು ರಂಜಿಸುತ್ತಿದೆ. ಪ್ರಸ್ತುತ ಈ ಧಾರಾವಾಹಿಯಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವುದು ಒಂದು ನಿಗೂಢ ವಿಷಯ; ಅದೇ ‘ಒಟಿಪಿ’! ಹೌದು, ನಂದಗೋಕುಲದ ಮನೆಯೊಳಗೆ ಈಗ ಈ ಒಟಿಪಿ ವಿಚಾರ ಸಖತ್ ಸದ್ದು ಮಾಡುತ್ತಿದ್ದು, ಇಡೀ ಕಥೆಗೆ ಹೊಸ ಆಯಾಮ ಮತ್ತು ಮಜವಾದ ತಿರುವು ನೀಡಿದೆ.
ಸದ್ದು ಮಾಡಿದ ಒನ್ ಟೈಮ್ ಪಪ್ಪಿ
ಸಾಮಾನ್ಯವಾಗಿ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಕೇಳಿಬರುವ ‘ಒಟಿಪಿ’ (OTP) ಪದವು ಈ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಭಿನ್ನ ರೂಪ ಪಡೆದುಕೊಂಡಿದೆ. ಮೀನಾ ಮತ್ತು ಕೇಶವ ಜೋಡಿಯ ನಡುವಿನ ಈ ಸೀಕ್ರೆಟ್ ಕೋಡ್ ಈಗ ಸಖತ್ ಸದ್ದು ಮಾಡುತ್ತಿದೆ. ಇದನ್ನು ಕೇಳಿದ ತಕ್ಷಣ ಎಲ್ಲರಿಗೂ ಇದು 'ಒನ್ ಟೈಮ್ ಪಾಸ್‌ವರ್ಡ್' ಇರಬಹುದೆಂಬ ಕುತೂಹಲ ಮೂಡುವುದು ಸಹಜ. ಆದರೆ, ಮೀನಾ ಮತ್ತು ಕೇಶವನ ಪ್ರೀತಿಯ ಭಾಷೆಯಲ್ಲಿ ಇದರ ಅಸಲಿ ಅರ್ಥ ‘ಒನ್ ಟೈಮ್ ಪಪ್ಪಿ’! ಈ ಕ್ಯೂಟ್ ಜೋಡಿಯ ರೊಮ್ಯಾನ್ಸ್‌ಗೆ ಈ ಸೀಕ್ರೆಟ್ ಕೋಡ್‌ವರ್ಡ್ ಈಗ ಹೊಸ ಮೆರುಗು ನೀಡಿದೆ.
ನಂದಗೋಕುಲಕ್ಕೆ ಹಿರಿ ಸೊಸೆಯಾಗಿ ಎಂಟ್ರಿ ಕೊಟ್ಟ ಪ್ರಿಯಾ; ನಂದಕುಮಾರ್ ಮನೆಯಲ್ಲಿ ಶುರುವಾಗುತ್ತಾ ವಾರಗಿತ್ತಿಯರ ವಾರ್?
ಒಟಿಪಿಯಿಂದಾಗಿ ಹರಿಯುತ್ತಿದೆ ಹಾಸ್ಯದ ಹೊಳೆ
ಈ ‘ಒಟಿಪಿ’ ವಿಚಾರ ಸದ್ಯಕ್ಕೆ ನಂದಕುಮಾರ್ ಮನೆಯವರ ನಿದ್ದೆಗೆಡಿಸಿದೆ. ಮೀನಾ ಮತ್ತು ಕೇಶವ ಪರಸ್ಪರ ‘ಒಟಿಪಿ’ ಕೊಡುವ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಮನೆಯವರಿಗೆ ದೊಡ್ಡ ರಹಸ್ಯವಾಗಿ ಪರಿಣಮಿಸಿದೆ. ಈ ಒಟಿಪಿ ಅಂದರೇನು ಎಂದು ತಿಳಿಯದ ಮನೆಯವರೆಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದು, ಒಬ್ಬೊಬ್ಬರಾಗಿ ಮುಂದೆ ಬಂದು ‘ನಾನು ಕೊಡ್ತೀನಿ, ನಾನು ಕೊಡ್ತೀನಿ’ ಎಂದು ಸ್ಪರ್ಧೆಗೆ ಇಳಿದಿದ್ದಾರೆ! ಅಸಲಿ ಅರ್ಥ ತಿಳಿಯದೆ ಎಲ್ಲರೂ 'ಒಟಿಪಿ' ನೀಡಲು ಮುಗಿಬೀಳುತ್ತಿರುವುದು ಧಾರಾವಾಹಿಯಲ್ಲಿ ಹಾಸ್ಯದ ಹೊಳೆಯನ್ನೇ ಹರಿಸುತ್ತಿದೆ.
Bhagya Lakshmi TRP: ನಂದಗೋಕುಲ ಹಿಂದಿಕ್ಕಿ ಟಿಆರ್ಪಿ ಕಿಂಗ್ ಆದ ಭಾಗ್ಯಲಕ್ಷ್ಮೀ
ಸೋಶಿಯಲ್ ಮೀಡಿಯಾದಲ್ಲೂ ಒಟಿಪಿ ಚರ್ಚೆ
ಧಾರಾವಾಹಿಯ ಕಥೆಯಲ್ಲಿ ಮೀನಾ ಮತ್ತು ಕೇಶವ ಪರಸ್ಪರ ಪ್ರೀತಿಯ ಸಂವಹನಕ್ಕಾಗಿ ಬಳಸುತ್ತಿರುವ ಈ 'ಒಟಿಪಿ' ಎಂಬ ರಹಸ್ಯ ಕೋಡ್‌ವರ್ಡ್, ಮನೆಯವರ ಮಟ್ಟಿಗೆ ಗುಟ್ಟಾಗಿಯೇ ಉಳಿದಿರುವುದು ಕಥೆಗೆ ಹೊಸ ಟ್ವಿಸ್ಟ್ ನೀಡಿದೆ. ಇಷ್ಟು ದಿನ ಕದ್ದುಮುಚ್ಚಿ ನಡೆಯುತ್ತಿದ್ದ ಈ ಜೋಡಿಯ ರೊಮ್ಯಾಂಟಿಕ್ ಆಟ ಈಗ ಮನೆಯವರ ಕುತೂಹಲವನ್ನು ಕೆರಳಿಸಿದ್ದು, ಕಥೆಗೆ ಹೊಸ ಟ್ವಿಸ್ಟ್ ನೀಡಿದೆ. ಇವರ ನಡುವಿನ ಈ ಕ್ಯೂಟ್ ತುಂಟಾಟ ಹಾಗೂ ಕಾಮಿಡಿ ಸನ್ನಿವೇಶಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ. ಈ ‘ಒಟಿಪಿ’ ಕ್ರೇಜ್ ಕೇವಲ ತೆರೆಯ ಮೇಲಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಿಗಳ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಾಸ್ಯಮಯ ಚರ್ಚೆಗಳಿಗೆ ವೇದಿಕೆಯಾಗಿದೆ.
ಹೊಸ ಆಟ ಆರಂಭಿಸಿದ ಪ್ರಿಯಾ
ಇನ್ನೊಂದೆಡೆ, ಕಥೆಯಲ್ಲಿ ಹೊಸ ಸೊಸೆ ಪ್ರಿಯಾಳ ಎಂಟ್ರಿ ಹಲವು ಸಂಚಲನಗಳಿಗೆ ಕಾರಣವಾಗಿದೆ. ಮನೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿರುವ ಅವಳು, ವಿಭಿನ್ನವಾಗಿ ವರ್ತಿಸುತ್ತಾ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಸಂಚು ರೂಪಿಸುತ್ತಿದ್ದಾಳೆ. ಅಮಾಯಕತೆಯ ಮುಖವಾಡ ಧರಿಸಿ, ಸದ್ದಿಲ್ಲದೆ ಮನೆಯವರ ಮಧ್ಯೆ ವೈಮನಸ್ಸಿನ ವಿಷಬೀಜ ಬಿತ್ತುತ್ತಿದ್ದಾಳೆ. ಇದರಿಂದ ನಂದಗೋಕುಲದ ಶಾಂತಿಯುತ ವಾತಾವರಣವು ಸಂಪೂರ್ಣವಾಗಿ ಹದಗೆಡುತ್ತಿದೆ. ಪ್ರಿಯಾಳ ಈ ಹೊಸ ಆಟ ಕಥೆಗೆ ಯಾವ ರೀತಿಯ ತಿರುವು ನೀಡಬಹುದು ಎಂಬ ಕುತೂಹಲ ಇದೀಗ ವೀಕ್ಷಕರಲ್ಲಿ ಮನೆಮಾಡಿದೆ.
ʻನಂದಗೋಕುಲʼ ಧಾರಾವಾಹಿಯು ಕೇವಲ ಮನರಂಜನೆಯನ್ನು ಮಾತ್ರವಲ್ಲದೆ, ಒಂದು ಫ್ಯಾಮಿಲಿ ಡ್ರಾಮಾದಲ್ಲಿ ಇರುವಂತಹ ಸಂಕೀರ್ಣ ಸಂಬಂಧಗಳನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನು ನೈಜವಾಗಿ ಚಿತ್ರಿಸುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಮ್ಮದೇ ಆದ ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ, ಒಟ್ಟಾಗಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಈ ಕಥೆ ಸಾರುತ್ತಿದೆ. ಈ ಧಾರಾವಾಹಿಯು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ.