ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhare Serial: ಅಮೃತಧಾರೆಯಲ್ಲಿ ಹೊಸ ಅಧ್ಯಾಯ: ಕ್ಯಾಬ್ ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್‌

ಅಮೃತಧಾರೆ ಧಾರಾವಾಹಿ ಸದ್ಯ ಯಾರು ಊಹಿಸದ ರಣ ರೋಚಕ ತಿರುವು ಪಡೆದಿದೆ. ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಾಳೆ ಭೂಮಿಕಾ. ಇಲ್ಲಿಂದ ತೆರೆದುಕೊಳ್ಳೋದೇ ಐದು ವರ್ಷಗಳ ಮುಂದಿನ ಕಥೆ. ಹೌದು, ಗೌತಮ್ ದೀವಾನ್ ಐದು ವರ್ಷಗಳ ಬಳಿಕ ಹೇಗಿದ್ದಾನೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.

ಅಮೃತಧಾರೆ ಹೊಸ ಅಧ್ಯಾಯ: ಗೌತಮ್‌ ಈಗ ಕ್ಯಾಬ್ ಡ್ರೈವರ್

Amruthadare Serial -

Profile Vinay Bhat Sep 5, 2025 3:44 PM

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಕೆಲವೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ಮಲತಾಯಿ ಶಕುಂತಲ ಕೆಟ್ಟವಳು. ಆದರೆ, ಆಕೆ ಒಳ್ಳೆಯವಳು ಎಂಬ ಮುಖವಾಡ ತೊಟ್ಟಿದ್ದಳು. ಎಲ್ಲರೂ ಅದನ್ನು ನಂಬಿದ್ದಾರೆ ಕೂಡ. ಬಳಿಕ ಹಂತ ಹಂತವಾಗಿ ಶಕುಂತಲಾಳ ನೈಜ್ಯ ಮುಖ ಬಯಲಾಗುತ್ತ ಬಂತು. ಮೊದಲನೆಯದಾಗಿ ಭೂಮಿಕಾಗೆ ಈ ವಿಷಯ ಗೊತ್ತಾಯಿತು. ಈಗ ಇದು ಗೌತಮ್​ಗು ತಿಳಿದು ಹೋಗಿದೆ. ಇಲ್ಲಿಂದ ಧಾರಾವಾಹಿಗೆ ಮಹಾ ತಿರುವು ನೀಡಲಾಗಿದ್ದು, ಹೊಸ ಅಧ್ಯಾಯ ಪ್ರಾರಂಭವಾಗಲಿದೆ.

ಸದ್ಯ ತನಗೆ ಎರಡು ಮಕ್ಕಳಿದ್ದ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಒಂದು ಮಗುವನ್ನು ಶಕುಂತಲಾ ಕಿಡ್ನಾಪ್ ಮಾಡಿರುವ ಕಹಿ ಸತ್ಯ ಕೂಡ ಗೊತ್ತಾಗಿದೆ. ಈ ಕಾರಣದಿಂದಲೇ ಗೌತಮ್ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟಿದ್ದ. ಆದರೆ, ಶಕುಂತಲಾ ಪತಿ ಹಾಗೂ ಪತ್ನಿ ಮಧ್ಯೆ ಕಲಹ ತರಬೇಕು ಎಂಬ ಕಾರಣಕ್ಕೆ ಭೂಮಿಕಾಗೆ ಈ ವಿಚಾರವನ್ನು ಹೇಳಿದಳು.. ಆದರೆ ಭೂಮಿಕಾ ಇದನ್ನು ನಂಬಲಿಲ್ಲ. ಆ ಬಳಿಕ ಸಾಕಷ್ಟು ಸಾಕ್ಷಿ ಕೊಟ್ಟ ಬಳಿಕ ಭೂಮಿಕಾ ವಿಚಾರವನ್ನು ನಂಬಿದ್ದಾಳೆ.

ಇದರ ಮಧ್ಯೆ ಅಮೃತಧಾರೆ ಧಾರಾವಾಹಿ ಸದ್ಯ ಯಾರು ಊಹಿಸದ ರಣ ರೋಚಕ ತಿರುವು ಪಡೆದಿದೆ. ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಾಳೆ ಭೂಮಿಕಾ. ಇನ್ನೊಂದು ಮಗುವನ್ನು ನಿನ್ನ ಕಣ್ಮುಂದೆಯೇ ಸಾಯಿಸಬೇಕೆಂದುಕೊಂಡಿದ್ದೇನೆ, ನಿನಗೆ ಈ ಮಗು ಮೇಲೆ ಆಸೆ ಇದ್ದರೆ ಮನೆ ಬಿಟ್ಟು ತೊಲಗು ಎಂದು ಶಕುಂತಲಾ ಹೇಳಿದ್ದು, ಭೂಮಿಕಾ ಕಣ್ಣೀರು ಹಾಕುತ್ತಾ ಮನೆಯ ಹೊಸಿಲು ದಾಟಿದ್ದಾಳೆ. ಮನೆಯಾಚೆ ಹೋಗುವ ಮುನ್ನ ಮಗು ಮತ್ತು ಗೌತಮ್ ಅವರ ಜವಾಬ್ಧಾರಿ ನಿಮ್ಮದು ಎಂದು ದೇವರಲ್ಲಿ ಕೇಳಿಕೊಂಡಿದ್ದಾಳೆ.

ಇನ್ನೊಂದೆಡೆ ಇನ್ನೇನು ಗೌತಮ್ ದಿವಾನ್ ಮನೆಗೆ ಎಂಟ್ರಿ ಕೊಡಬೇಕು ಎನ್ನುವಷ್ಟರಲ್ಲಿ ಶಕುಂತಲಾ, ದಿಯಾ ಮತ್ತು ಜೈದೇವ್ ಜೊತೆ ಮಾತನಾಡುತ್ತಾ, ಭೂಮಿಕಾ ಮನೆ ಬಿಟ್ಟು ಹೊರಗೆ ಹೋಗಾಯ್ತು, ಇನ್ನು ಆ ಗೌತಮ್ ದಿನಾನ್ ನಾನು ಹಾಕೋ ತಾಳಕ್ಕೆ ಕುಣಿಬೇಕು ಎನ್ನುತ್ತಾಳೆ. ಇದನ್ನು ಕೇಳಿ ಗೌತಮ್ ಶಾಕ್ ಆಗಿ, ಆತನಿಗೆ ನಿಜರೂಪದ ದರ್ಶನವಾಗಿದೆ. ಮಲತಾಯಿಯ ನಿಜವಾದ ಸ್ವರೂಪ ಗೊತ್ತಾದ ಬಳಿಕ ಆತ ಕೂಡ ಮನೆ ಬಿಟ್ಟು ಹೋಗಿದ್ದಾನೆ. ಹೋಗುವಾಗ ಎಲ್ಲಾ ಆಸ್ತಿಯನ್ನು ಶಕುಂತಲಾ ಹೆಸರಿಗೆ ಬರೆದಿಟ್ಟಿದ್ದಾನೆ. ಆ ಬಳಿಕ ನೇರವಾಗಿ ಪತ್ನಿ ಹುಡುಕಾಟವನ್ನು ಆರಂಭಿಸಿದ್ದಾನೆ.

ಇಲ್ಲಿಂದ ತೆರೆದುಕೊಳ್ಳೋದೇ ಐದು ವರ್ಷಗಳ ಮುಂದಿನ ಕಥೆ. ಹೌದು, ಗೌತಮ್ ದೀವಾನ್ ಐದು ವರ್ಷಗಳ ಬಳಿಕ ಹೇಗಿದ್ದಾನೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಕೋಟ್ಯಾಧಿಪತಿಯಾಗಿದ್ದ ಗೌತಮ್‌ನ ಕ್ಯಾಬ್ ಡ್ರೈವರ್‌ನಂತೆ ಬಿಡುಗಡೆಯಾದ ಪ್ರೋಮೊದಲ್ಲಿ ತೋರಿಸಲಾಗಿದೆ. ಭೂಮಿಕಾ ನಿಮಗೋಸ್ಕರ ನಾನು ಹುಡುಕದಿರೋ ಜಾಗ ಇಲ್ಲ. ಬೇಡದೇ ಇರುವ ದೇವರಿಲ್ಲ. ಆದಷ್ಟು ಬೇಗ ಅವರು ನನಗೆ ಸಿಗೋ ಹಾಗೇ ಮಾಡು ಎನ್ನುತ್ತಾ ಬುದ್ಧನ ಮುಂದೆ ಕೈ ಮುಗಿಯುತ್ತಿರುತ್ತಾನೆ.

ಬಳಿಕ ಗೌತಮ್ ತನ್ನ ಕ್ಯಾಬ್​ನಲ್ಲಿ ಬರುತ್ತಿರುವಾಗ, ಎದುರಿಗೆ ಒಂದು ಮಗು ಅಡ್ಡ ಬರುತ್ತದೆ. ಆ ಮಗುವನ್ನು ಗೌತಮ್ ತಡೆದು ಎಬ್ಬಿಸಿ ವಿಚಾರಿಸುವಾಗ, ಭೂಮಿಕಾ ಆ ಮಗುವನ್ನು ಕರೆದು ಆಕಾಶ್ ನಿನಗೆ ಏನು ಆಗಿಲ್ಲ ತಾನೆ ಎನ್ನುತ್ತಾಳೆ. ಭೂಮಿಕಾಳನ್ನು ನೋಡಿ ಗೌತಮ್​ಗೆ ಆಘಾತ ಹಾಗೂ ಸಂತೋಷ ಆಗುತ್ತದೆ. ಆದರೆ, ತನಗೆ ಪರಿಚಯವೇ ಇಲ್ಲವೆನ್ನುವಂತೆ ಯಾವ ಭಾವನೆಯನ್ನು ವ್ಯಕ್ತಪಡಿಸದೇ ಭೂಮಿಕಾ ತನ್ನ ಮಗ ಆಕಾಶನ ಕರೆದುಕೊಂಡು ಹೋಗಿದ್ದಾಳೆ. ಸದ್ಯ ಈ ರೀತಿಯ ಟ್ವಿಸ್ಟ್ ರೋಚಕತೆ ಸೃಷ್ಟಿಸಿದ್ದು ಮುಂದೇನಾಗುತ್ತದೆ ಎಂಬ ಕುತೂಹಲ ಅನೇಕರಿಗೆ ಇದೆ.

Bhagya Lakshmi Serial: ರಾಮ್​ದಾಸ್​ಗೆ ಗೊತ್ತಾಯಿತು ಆದೀಶ್ವರ್ ಭಾಗ್ಯ ಮನೆಯಲ್ಲಿದ್ದ ಸತ್ಯ