ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OTT Movies: ಈ ವಾರ ಒಟಿಟಿಗೆ ಬಂದಿವೆ 4 ಕನ್ನಡ ಸಿನಿಮಾಗಳು: ಯಾವುವು?

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶಿಸಿ ನಟಿಸಿರುವ X & Y ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್ ಆರಂಭಿಸಿದೆ. ಜೂನ್ 28ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಬೃಂದಾ ಆಚಾರ್ಯ, ಅಯಾನಾ, ಸುಂದರ್ ವೀಣಾ ಚಿತ್ರದ ತಾರಾಗಣದಲ್ಲಿದ್ದಾರೆ.

Kannada OTT Movies

ಒಟಿಟಿಯಲ್ಲಿ ಹೊಸ ಸಿನಿಮಾಗಳನ್ನು (OTT New Movies) ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಸಿನಿಮಾಗಳು- ವೆಬ್ ಸೀರಿಸ್​ಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ವೇದಿಕೆಗಳಲ್ಲಿ ಇವುಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಕಾಮಿಡಿ ಜತೆಗೆ ಸಸ್ಪೆನ್ಸ್‌ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಿವೆ. ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಒಟಿಟಿಯಲ್ಲಿಯೂ ಈ ವಾರ ರಿಲೀಸ್ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶಿಸಿ ನಟಿಸಿರುವ X & Y ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್ ಆರಂಭಿಸಿದೆ. ಜೂನ್ 28ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಬೃಂದಾ ಆಚಾರ್ಯ, ಅಯಾನಾ, ಸುಂದರ್ ವೀಣಾ ಚಿತ್ರದ ತಾರಾಗಣದಲ್ಲಿದ್ದಾರೆ.

ದಿಗಂತ್ ನಟನೆಯ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಕೂಡ ಈಗ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಟೈಟಲ್‌ನಿಂದಲೇ ಕುತೂಹಲ ಹುಟ್ಟಾಕ್ಕಿದ್ದ ಸಿನಿಮಾ ಜೂನ್ 13ರಂದು ತೆರೆಗೆ ಬಂದಿತ್ತು. ಸಮರ್ಥ್ ಕೊಡ್ಕಲ್ ನಿರ್ದೇಶನದ ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್ ನಟಿಸಿದ್ದಾರೆ.

Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್ ಇವರೇ?: ವೈರಲ್ ಆಗ್ತಿದೆ ಹೆಸರು

ಸಹದೇವ್ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಹೊಸ ಪ್ರತಿಭೆಗಳಿಂದ ಕೂಡಿದ ಚಿತ್ರ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು 99 ರೂಪಾಯಿ ಪಾವತಿಸಿ ಅಮೆಜಾನ್ ಪ್ರೈಮ್ ಚಂದಾದಾರರು ಸಿನಿಮಾ ವೀಕ್ಷಿಸಬಹುದು.

ರವಿಚಂದ್ರನ್, ದಿಗಂತ್ ಹಾಗೂ ಧನ್ಯಾ ರಾಮ್‌ಕುಮಾರ್ ನಟನೆಯ ದಿ ಜಡ್ಜ್‌ಮೆಂಟ್ ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಕೆಲ ಕಾರಣದಿಂದ ಇದು ಓಟಿಟಿ ಪ್ರವೇಶ ಪಡೆದಿರಲಿಲ್ಲ. ಆದರೀಗ ಈ ಸಿನಿಮಾ ಪ್ರೈಮ್ ಚಂದಾದಾರರು ಹಣ ಪಾವತಿಸಿ ನೋಡಬಹುದು. ಒಂದು ಅತ್ಯಾಚಾರ, ಕೊಲೆ ಪ್ರಕರಣದ ಸುತ್ತಾ ನಡೆಯುವ ಕೋರ್ಟ್ ಡ್ರಾಮಾ ಸಿನಿಮಾ ಇದಾಗಿದೆ.