ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಲ್ಲೂ ‘ರಾಮಾಯಣ’ ಸಿನಿಮಾ ಟ್ರೇಲರ್ ಧಮಾಕ; ರಣಬೀರ್‌ - ಯಶ್‌ ಹವಾ ಕಂಡು ಪಾಕ್ ಯೂಟ್ಯೂಬರ್‌ಗಳು ಫಿದಾ!

ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಟ್ರೇಲರ್ ಜುಲೈ 30 ರಂದು ಬಿಡುಗಡೆ ಆಗಿದ್ದು, ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಜೊತೆಗೆ ಪಾಕಿಸ್ತಾನದಲ್ಲೂ ಭಾರಿ ಸಂಚಲನ ಮೂಡಿಸಿದೆ. ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್, ಸಿಜಿಐ ಇದೆ ಎಂದು ಪಾಕಿಸ್ತಾನಿ ಯೂಟ್ಯೂಬರ್‌ಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನಿತೀಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಮಾಯಣ' (Ramayana) ಸಿನಿಮಾದ ಟ್ರೇಲರ್ ಜುಲೈ 30 ರಂದು ಬಿಡುಗಡೆಯಾಗಿದ್ದು, ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಟ್ರೇಲರ್ ಭಾರತೀಯ ಪ್ರೇಕ್ಷಕರನ್ನಷ್ಟೇ ಅಲ್ಲದೆ, ಗಡಿ ದಾಟಿ ಪಾಕಿಸ್ತಾನಿ ವೀಕ್ಷಕರ ಹಾಗೂ ಕಂಟೆಂಟ್ ಕ್ರಿಯೇಟರ್‌ಗಳ ಗಮನವನ್ನೂ ಸೆಳೆದು ಭಾರಿ ಮೆಚ್ಚುಗೆ ಗಳಿಸುತ್ತಿದೆ.

ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್‌ಗಳ ಪ್ರತಿಕ್ರಿಯೆ

ಮಾವಿಯಾ ಉಮರ್ ಫಾರೂಕಿ ಎಂಬುವವರು, "ಒಬ್ಬ ಪಾಕಿಸ್ತಾನಿ ವೀಕ್ಷಕನಾಗಿ ಹೇಳುವುದಾದರೆ, ಭಾರತೀಯ ಚಿತ್ರರಂಗದ ಈ ಅದ್ದೂರಿತನ ಮತ್ತು ವಿಎಫ್‌ಎಕ್ಸ್ (VFX) ನೋಡಿ ಆಶ್ಚರ್ಯವಾಯಿತು. ಹಾಲಿವುಡ್ ಮಟ್ಟದ ತಂತ್ರಜ್ಞಾನ ಬಳಸಿ ತಯಾರಿಸಿದ ಈ ಟ್ರೇಲರ್ ಅತ್ಯಂತ ಎಕ್ಸೈಟಿಂಗ್ ಆಗಿದೆ. ರಣ್‌ಬೀರ್ ಕಪೂರ್ ಮತ್ತು ಯಶ್ ನಡುವಿನ ನಟನಾ ಸವಾಲನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದಾರೆ.

ಪಾಕ್‌ ಯೂಟ್ಯೂಬರ್‌ ರಿಯಾಕ್ಷನ್



ಹಸ್ನಾತ್ ಖಾನ್ ಎಂಬ ಮತ್ತೋರ್ವ ಯೂಟ್ಯೂಬರ್‌, "ರಾವಣನಾಗಿ ಯಶ್ ಅವರ ಲುಕ್ ಕ್ರೇಜಿಯಾಗಿದೆ. ಅನಿಮೇಷನ್, ಸಿಜಿಐ ಮತ್ತು ಆಕ್ಷನ್ ದೃಶ್ಯಗಳು ಮೈ ನವಿರೇಳಿಸುವಂತಿವೆ. ವೀಡಿಯೋವನ್ನು ಪದೇಪದೇ ನೋಡಿ ಆನಂದಿಸಿದೆ" ಎಂದು ಶ್ಲಾಘಿಸಿದ್ದಾರೆ. 'ಪಾಕಿಸ್ತಾನಿ ರಿಯಾಕ್ಷನ್ ಬಾಯ್' ಯೂಟ್ಯೂಬ್‌ ಚಾನೆಲ್‌ನಲ್ಲಿ, "ರಾವಣ ಮತ್ತು ರಣ್‌ಬೀರ್ ಕಪೂರ್ ಅವರ ಎಂಟ್ರಿ ಸೀನ್‌ಗಳು ಹಾಗೂ ಸೀತೆಯ ದೈವಿಕ ಲುಕ್ ಅದ್ಭುತವಾಗಿ ಮೂಡಿಬಂದಿದೆ. ಟ್ರೇಲರ್ ಪ್ರತಿಯೊಂದು ವಿಭಾಗದಲ್ಲೂ ಶ್ರೇಷ್ಠವಾಗಿದೆ" ಎಂದು ಹೇಳಲಾಗಿದೆ.

Yash: ಬ್ರಹ್ಮ ಮುಹೂರ್ತದಲ್ಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ? ಏನಿದರ ವಿಶೇಷತೆ?

'ಇಮಾನ್ ಮೊಅಜ್ಜಮ್ ಎಂಟರ್‌ಟೈನ್‌ಮೆಂಟ್' ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ, "ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಸಾಂಪ್ರದಾಯಿಕ ಸರಳತೆ ಎದ್ದು ಕಾಣುತ್ತಿದೆ. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮತ್ತು ವಿಎಫ್‌ಎಕ್ಸ್ ಅದ್ಭುತವಾಗಿದೆ," ಎಂದು ರಿವ್ಯೂ ಮಾಡಲಾಗಿದೆ.

Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

2026ರ ದೀಪಾವಳಿಗೆ ಪಾರ್ಟ್‌ 1 ರಿಲೀಸ್

ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಸಿನಿಮಾವನ್ನು ಬೃಹತ್ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ರಣ್‌ಬೀರ್ ಕಪೂರ್ (ಶ್ರೀರಾಮ ಮತ್ತು ಪರಶುರಾಮನಾಗಿ ದ್ವಿಪಾತ್ರ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಹಾಗೂ ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ) ಮುಂತಾದವರ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ. ವಿಶ್ವದಾದ್ಯಂತ ಭಾರಿ ಕುತೂಹಲ ಹುಟ್ಟುಹಾಕಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.