ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Panchayat season 5: ಪಂಚಾಯತ್ ಸೀಸನ್ 5 ಯಾವಾಗ ರಿಲೀಸ್? ಇಲ್ಲಿದೆ ಬಿಗ್‌ ಅಪ್‌ಡೇಟ್‌!

Panchayat season 5: ಜನಪ್ರಿಯ ವೆಬ್ ಸರಣಿ 'ಪಂಚಾಯತ್' ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಬಹುನಿರೀಕ್ಷಿತ 'ಪಂಚಾಯತ್ ಸೀಸನ್ 5' ಬಿಡುಗಡೆ ದಿನಾಂಕದ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ. ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋ ಶೀಘ್ರದಲ್ಲೇ ಹೊಸ ಸೀಸನ್‌ನ ರಿಲೀಸ್ ಡೇಟ್ ಘೋಷಿಸುವ ಸುಳಿವು ನೀಡಿದೆ.

ಪಂಚಾಯತ್‌ ಸರಣಿ

ಜನಪ್ರಿಯ ವೆಬ್ ಸರಣಿ 'ಪಂಚಾಯತ್' (Panchayath web Series) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಬಹುನಿರೀಕ್ಷಿತ 'ಪಂಚಾಯತ್ ಸೀಸನ್ 5' ಬಿಡುಗಡೆ ದಿನಾಂಕದ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ. ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋ ಶೀಘ್ರದಲ್ಲೇ ಹೊಸ ಸೀಸನ್‌ನ ರಿಲೀಸ್ ಡೇಟ್ ಘೋಷಿಸುವ ಸುಳಿವು ನೀಡಿದೆ.

ನವೆಂಬರ್ 17ರ ಸೋಮವಾರ ರಾತ್ರಿ ಪ್ರೈಮ್ ವಿಡಿಯೋ ಇಂಡಿಯಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದರ ಜೊತೆಗೆ, ನೀವು ನಮಗೆ ಸಾಕಷ್ಟು ಪ್ರೀತಿ ನೀಡಿದ್ದೀರಿ, ಈಗ ನಾವು ಸೀಸನ್ 5ರ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ ಎಂಬ ಸಂದೇಶವನ್ನು ನೀಡಿದೆ.

ಈ ಪೋಸ್ಟ್ ಮೂಲಕ ಬುಧವಾರ ಅಂದರೆ ನವೆಂಬರ್ 18ರಂದು ಸರಣಿಯ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮೂಡಿದೆ. ಇದರಿಂದ ಪಂಚಾಯತ್ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ.

ಇದನ್ನೂ ಓದಿ: Bigg Boss Kannada 13: ಹೊಡೆದು ಸಾಯಿಸ್ತೀನಿ; ಸೌಂದರ್ಯಾ ವಿರುದ್ಧ ರೊಚ್ಚಿಗೆದ್ದ ಗಾನವಿ!

2026ರಲ್ಲಿ ಬಿಡುಗಡೆಯಾಗುವುದಿಲ್ಲ ಎಂದಿದ್ದ ಚಿತ್ರತಂಡ!

ಈ ಹಿಂದೆ ಪ್ರೈಮ್ ವಿಡಿಯೋ ಹಂಚಿಕೊಂಡಿದ್ದ ಪೋಸ್ಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಬನ್ರಾಕಸ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ದುರ್ಗೇಶ್ ಕುಮಾರ್ ಅವರ ಫೋಟೋ ಹಂಚಿಕೊಂಡಿದ್ದ ಚಿತ್ರತಂಡ, ಪಂಚಾಯತ್ ಹೊಸ ಸೀಸನ್ ಈ ವರ್ಷ ಬಿಡುಗಡೆಯಾಗುವುದಿಲ್ಲ ಎಂಬ ಸುಳಿವು ನೀಡಿತ್ತು. ಹೊಸ ಸೀಸನ್ ಅನ್ನು 'ಖೈದ್' (ಬಂಧನ) ಮಾಡಲಾಗಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿತ್ತು.

ಆದರೆ ಇದೀಗ ಪ್ರೈಮ್ ವಿಡಿಯೋ ಬಿಡುಗಡೆ ದಿನಾಂಕ ಘೋಷಿಸುವ ಸುಳಿವು ನೀಡಿರುವುದರಿಂದ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ.

ಪಂಚಾಯತ್ ಸೀಸನ್ 5ರಲ್ಲಿ ಏನೆಲ್ಲ ಇರಲಿದೆ?

ಪಂಚಾಯತ್ ನಾಲ್ಕನೇ ಸೀಸನ್ ಯಾವ ಹಂತದಲ್ಲಿ ಮುಕ್ತಾಯಗೊಂಡಿತ್ತೋ, ಐದನೇ ಸೀಸನ್ ಅಲ್ಲಿಂದಲೇ ಮುಂದುವರಿಯಲಿದೆ. ನಾಲ್ಕನೇ ಸೀಸನ್ ಅಂತ್ಯದಲ್ಲಿ ಫುಲೇರ್ ಗ್ರಾಮದಲ್ಲಿ ರಾಜಕೀಯ ಬದಲಾವಣೆ ಸಂಭವಿಸಿತ್ತು. ಮಂಜು ದೇವಿ (ನೀನಾ ಗುಪ್ತಾ) ಚುನಾವಣೆಯಲ್ಲಿ ಕ್ರಾಂತಿ ದೇವಿ (ಸುನೇತಾ ರಾಜ್ವರ್) ವಿರುದ್ಧ ಸೋಲು ಕಂಡಿದ್ದರು.

ಈ ಅಧಿಕಾರ ಬದಲಾವಣೆಯಿಂದ ಅಭಿಷೇಕ್ ತ್ರಿಪಾಠಿ (ಜಿತೇಂದ್ರ ಕುಮಾರ್) ಅವರ ಜೀವನದಲ್ಲಿ ಹೊಸ ಸವಾಲುಗಳು ಎದುರಾಗುವ ನಿರೀಕ್ಷೆಯಿದೆ.

ಪ್ರೈಮ್ ವಿಡಿಯೋ ಈ ಹಿಂದೆ ಹಂಚಿಕೊಂಡಿದ್ದ ಅಧಿಕೃತ ಸಾರಾಂಶದ ಪ್ರಕಾರ, ಹೊಸ ನಾಯಕತ್ವದ ಅಡಿಯಲ್ಲಿ ಅಭಿಷೇಕ್‌ಗೆ ಕೆಲಸದ ವಾತಾವರಣ ಪ್ರತಿಕೂಲವಾಗಿರಲಿದೆ. ಮತ್ತೊಂದೆಡೆ, ಎಂಬಿಎ ಓದುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಆತ ಸಿದ್ಧತೆ ನಡೆಸಲಿದ್ದಾನೆ. ಆದರೆ ಫುಲೇರ್ ಗ್ರಾಮದಲ್ಲಿ ಬಾಕಿ ಉಳಿದಿರುವ ಕೆಲವು ವಿಚಾರಗಳನ್ನು ಬಗೆಹರಿಸದೆ ಆತ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.

ಇದರ ಜೊತೆಗೆ ಅಭಿಷೇಕ್ ಮತ್ತು ರಿಂಕಿ ನಡುವಿನ ಪ್ರೀತಿಯ ಸಂಬಂಧವೂ ಮುಂದಿನ ಸೀಸನ್‌ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಿಂದಿನ ಸೀಸನ್‌ಗಳಲ್ಲಿ ಇವರಿಬ್ಬರ ನಡುವೆ ಪ್ರೀತಿ ನಿಧಾನವಾಗಿ ಬೆಳೆಯುತ್ತಾ ಬಂದಿದ್ದು, ಐದನೇ ಸೀಸನ್‌ನಲ್ಲಿ ಇವರ ಸಂಬಂಧ ಯಾವ ಹಂತ ತಲುಪಲಿದೆ ಎಂಬ ಕುತೂಹಲವಿದೆ.

ಹೊಸ ಸೀಸನ್‌ನಲ್ಲೂ ಪ್ರಮುಖ ಕಲಾವಿದರು ತಮ್ಮ ಹಿಂದಿನ ಪಾತ್ರಗಳೊಂದಿಗೆ ಮರಳಲಿದ್ದಾರೆ.ಜಿತೇಂದ್ರ ಕುಮಾರ್ – ಅಭಿಷೇಕ್ ತ್ರಿಪಾಠಿ,ನೀನಾ ಗುಪ್ತಾ – ಮಂಜು ದೇವಿ,ರಘುವೀರ್ ಯಾದವ್ – ಬ್ರಿಜ್ ಭೂಷಣ್ ದುಬೆ, ಫೈಸಲ್ ಮಲಿಕ್ – ಪ್ರಹ್ಲಾದ್ ಪಾಂಡೆ,ಚಂದನ್ ರಾಯ್ – ವಿಕಾಸ್ಸಾ,ನ್ವಿಕಾ – ರಿಂಕಿ,ದುರ್ಗೇಶ್ ಕುಮಾರ್ – ಬನ್ರಾಕಸ್ಸು,ನೀತಾ ರಾಜ್ವರ್ – ಕ್ರಾಂತಿ ದೇವಿ,ಅಶೋಕ್ ಪಾಠಕ್, ಬುಲ್ಲೂ ಕುಮಾರ್ ಮತ್ತು ಪಂಕಜ್ ಝಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



ದಿ ವೈರಲ್ ಫೀವರ್ (TVF) ನಿರ್ಮಿಸಿರುವ ಈ ಸರಣಿಗೆ ಚಂದನ್ ಕುಮಾರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಮೊದಲ ನಾಲ್ಕು ಸೀಸನ್‌ಗಳನ್ನು ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ್ದು, ನಾಲ್ಕನೇ ಸೀಸನ್‌ಗೆ ಅಕ್ಷತ್ ವಿಜಯವರ್ಗಿಯಾ ಕೂಡ ನಿರ್ದೇಶನ ನೀಡಿದ್ದಾರೆ.

ಪಂಚಾಯತ್ ಸೀಸನ್ 5 ಎಲ್ಲಿ ವೀಕ್ಷಿಸಬಹುದು?

ಹಿಂದಿನ ಸೀಸನ್‌ಗಳಂತೆ ಪಂಚಾಯತ್ ಐದನೇ ಸೀಸನ್ ಕೂಡ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಸರಣಿಯ ಮೊದಲ ನಾಲ್ಕು ಸೀಸನ್‌ಗಳು ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿವೆ.

ಇದನ್ನೂ ಓದಿ: Abhijna Bhat: ಹೊಸ ಮನೆಗೆ ಕಾಲಿಟ್ಟ 'ಆಸೆ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್

2020ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಪಂಚಾಯತ್ ಸರಣಿ, ಹಳ್ಳಿಯ ರಾಜಕೀಯ, ಗ್ರಾಮೀಣ ಬದುಕಿನ ಸಣ್ಣಪುಟ್ಟ ಸಮಸ್ಯೆಗಳು ಮತ್ತು ಫುಲೇರ್ ಗ್ರಾಮದ ಜನರ ನಡುವಿನ ಸಂಬಂಧಗಳನ್ನು ಹಾಸ್ಯಮಯವಾಗಿ ಕಟ್ಟಿಕೊಡುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದೆ.

Yashaswi Devadiga

View all posts by this author