ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಹೊಡೆದು ಸಾಯಿಸ್ತೀನಿ; ಸೌಂದರ್ಯಾ ವಿರುದ್ಧ ರೊಚ್ಚಿಗೆದ್ದ ಗಾನವಿ!

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಜಗಳ, ವಾಗ್ವಾದ ಹಾಗೂ ತಂತ್ರಗಾರಿಕೆ ಹೆಚ್ಚಾಗುತ್ತಿದೆ. ಇದೀಗ ಆಸಿಯಾ ಹಾಗೂ ಗಾನವಿ (Asia Ganavi) ಒಟ್ಟಾಗಿ ಆಟವಾಡಿರುವುದು ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಆಟದ ಪರಿಣಾಮವಾಗಿ ಸೌಂದರ್ಯಾ ಅವರು ನಾಮಿನೇಟ್ ಆಗಿದ್ದು, ಇದಾದ ಬಳಿಕ ಮನೆಯಲ್ಲಿ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿದೆ.

ಹೊಡೆದು ಸಾಯಿಸ್ತೀನಿ; ಸೌಂದರ್ಯಾ ವಿರುದ್ಧ ರೊಚ್ಚಿಗೆದ್ದ ಗಾನವಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 18, 2026 8:44 AM

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಜಗಳ, ವಾಗ್ವಾದ ಹಾಗೂ ತಂತ್ರಗಾರಿಕೆ ಹೆಚ್ಚಾಗುತ್ತಿದೆ. ಇದೀಗ ಆಸಿಯಾ ಹಾಗೂ ಗಾನವಿ (Asia Ganavi) ಒಟ್ಟಾಗಿ ಆಟವಾಡಿರುವುದು ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಆಟದ ಪರಿಣಾಮವಾಗಿ ಸೌಂದರ್ಯಾ (Soundarya Nominate) ಅವರು ನಾಮಿನೇಟ್ ಆಗಿದ್ದು, ಇದಾದ ಬಳಿಕ ಮನೆಯಲ್ಲಿ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿದೆ.

ನಾಮಿನೇಷನ್ ವಿಚಾರವಾಗಿ ಆರಂಭವಾದ ಈ ಜಗಳ ನಂತರ ವೈಯಕ್ತಿಕ ವಿಚಾರಗಳತ್ತ ತಿರುಗಿದೆ. ಅದರಲ್ಲೂ ಗಾನವಿ ಅವರು ಸೌಂದರ್ಯಾ ಅವರ ಕನ್ನಡ ಭಾಷೆಯ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೌಂದರ್ಯಾ ಅವರ ಕನ್ನಡ ಮಾತನಾಡುವ ಶೈಲಿಯನ್ನು ಪ್ರಶ್ನಿಸಿದ ಗಾನವಿ, ಮೊದಲು ನೀನು ಸರಿಯಾಗಿ ಕನ್ನಡ ಮಾತನಾಡುವುದನ್ನು ಕಲಿತುಕೋ ಎಂಬರ್ಥದಲ್ಲಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, 'ನೀನು ಮೊದಲು ನೆಟ್ಟಗೆ ಕನ್ನಡ ಮಾತನಾಡು. ದುಬೈಗೆ ಕಳಿಸಿಬಿಡ್ತೀನಿ' ಎಂದು ಆವಾಜ್ ಹಾಕಿದ್ದಾರೆ. ಗಾನವಿ ಅವರ ಈ ಮಾತುಗಳಿಂದ ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

ಇದನ್ನೂ ಓದಿ: Bigg Boss Kannada 13: ದೊಡ್ಮನೆಯಿಂದ ಎಲಿಮಿನೇಟ್ ಆದ ಸೋನಿಕಾ ಗೌಡ ಫಸ್ಟ್ ರಿಯಾಕ್ಷನ್ ಏನು? ಫಿನಾಲೆ ತಲುಪೋದು ಯಾರಂತೆ ಗೊತ್ತಾ?

ಇತ್ತ ಗಾನವಿ ಅವರ ಮಾತಿಗೆ ಸುಮ್ಮನಿರದ ಸೌಂದರ್ಯಾ ಕೂಡ ತಿರುಗೇಟು ನೀಡಿದ್ದಾರೆ. ಗಾನವಿ ಅವರ ವೈಯಕ್ತಿಕ ಜೀವನದ ವಿಚಾರವನ್ನು ಪ್ರಸ್ತಾಪಿಸಿ, 'ನೀನು 8 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದು ಇಲ್ಲಿ ಬಂದು ಗುಳಗುಳು ಮಾಡ್ತೀಯಲ್ಲ' ಎಂದು ಹೇಳಿದ್ದಾರೆ.

ಇದರಿಂದ ಜಗಳ ಮತ್ತಷ್ಟು ವೈಯಕ್ತಿಕ ಸ್ವರೂಪ ಪಡೆದುಕೊಂಡಿದೆ. ಆಟದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ, ಇದೀಗ ಸ್ಪರ್ಧಿಗಳ ವೈಯಕ್ತಿಕ ಬದುಕಿನ ವಿಚಾರಗಳವರೆಗೂ ತಲುಪಿರುವುದು ವೀಕ್ಷಕರ ಗಮನ ಸೆಳೆದಿದೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಚಿಗುರುತ್ತಿದೆಯಾ ಹೊಸ ಲವ್ ಸ್ಟೋರಿ? ಯಶಸ್‌ ಕವನ ಕೇಳಿ ಸೌಂದರ್ಯ ಫಿದಾ!

ಬಿಗ್ ಬಾಸ್ ಮನೆಯಲ್ಲಿ ಆಟದ ತಂತ್ರಗಾರಿಕೆ, ನಾಮಿನೇಷನ್ ಹಾಗೂ ವೈಯಕ್ತಿಕ ಟೀಕೆಗಳು ಹೊಸದೇನಲ್ಲ. ಆದರೆ ಕನ್ನಡ ಭಾಷೆಯ ವಿಚಾರ ಮತ್ತು ರಿಲೇಶನ್‌ಶಿಪ್‌ನಂತಹ ಖಾಸಗಿ ವಿಷಯಗಳನ್ನು ಜಗಳದ ನಡುವೆ ಪ್ರಸ್ತಾಪಿಸಿರುವುದು ಈ ಘಟನೆಯನ್ನು ಮತ್ತಷ್ಟು ಚರ್ಚೆಗೆ ತಂದಿದೆ.