ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ram Charan: ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್‌

Yash: ರಾಮ್ ಚರಣ್ ಅವರ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಜಗಪತಿ ಬಾಬು ಅವರನ್ನು ಅಪ್ಪಲ ಸೂರಿಯಾಗಿ ಪರಿಚಯಿಸಲಾಗಿದೆ,ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ (Direction)ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಪಾಪರಾಜಿಗಳು ರಾಮ್‌ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ಎಂ ದು ಭಾವಿಸಿದ್ದಾರೆ.‌

ನಟ ರಾಮ್‌ ಚರಣ್‌

ರಾಮ್ ಚರಣ್ (Ram charan) ಅವರ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಜಗಪತಿ ಬಾಬು ಅವರನ್ನು ಅಪ್ಪಲ ಸೂರಿಯಾಗಿ ಪರಿಚಯಿಸಲಾಗಿದೆ,ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ (Direction)ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಪಾಪರಾಜಿಗಳು ರಾಮ್‌ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ (Yash) ಎಂದು ಭಾವಿಸಿದ್ದಾರೆ.‌

ಯಶ್ ಎಂದು ಕಮೆಂಟ್‌

ಯಶ್ ಹಾಗೂ ರಾಮ್ ಚರಣ್ ಮಧ್ಯೆ ಹೋಲಿಕೆ ಕಂಡು ಬಂದಿದೆ. ರಾಮ್ ಚರಣ್ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದಾರೆ. ರಾಮ್ ಚರಣ್ ಅವರನ್ನು ಕೆಲವರು ಯಶ್ ಎಂದು ಕಮೆಂಟ್‌ ಕೂಡ ಮಾಡಿದ್ದಾರೆ.
ತಮ್ಮ ಕಾರಿನಲ್ಲಿ ಚರಣ್‌ ಕುಳಿತಿದ್ದನ್ನು ಕಂಡು ಅಲ್ಲಿದ್ದ ಕ್ಯಾಮರಾಮನ್‌ಗಳು ಹಾಗೂ ಕೆಲವರು ಯಶ್‌ ಎಂದು ಭಾವಿಸಿ ಆ ಕಾರನ್ನು ಆವರಿಸಿಕೊಂಡಿದ್ದಾರೆ ರಾಮ್‌ಚರಣ್‌ ತುಸು ಮುಜುಗರಕ್ಕೀಡಾದರೂ ನಗುತ್ತಲೇ ಎಲ್ಲರತ್ತ ಕೈಬೀಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ. ಕೆಲವರು ‘ಇಬ್ಬರ ಮಧ್ಯೆ ಸಾಮ್ಯತೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ: Ram Charan: ಲಂಡನ್‌ ಮ್ಯೂಸಿಯಂನಲ್ಲಿ ರಾಮ್‌ ಚರಣ್‌ ಮೇಣದ ಪ್ರತಿಮೆ-ಫೋಟೋ ವೈರಲ್‌

ರಾಮ್ ಚರಣ್ ಇತ್ತೀಚೆಗೆ ದೆಹಲಿಯಲ್ಲಿ ಒಂದು ಪ್ರಮುಖ ಚಿತ್ರೀಕರಣದ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದರು,ಬುಚಿ ಬಾಬು ಸನಾ ನಿರ್ದೇಶನದ ಪೆಡ್ಡಿ ಚಿತ್ರವು ಗ್ರಾಮೀಣ ಹಿನ್ನೆಲೆಯ ಕ್ರೀಡಾ ಆಕ್ಷನ್ ನಾಟಕವಾಗಿದ್ದು, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಶಿವಾಜಿ ರಾಜ್‌ಕುಮಾರ್, ದಿವ್ಯೇಂದು ಶರ್ಮಾ ಮತ್ತು ಸತ್ಯ ಸೇರಿದಂತೆ ಅನೇಕ ತಾರಾಗಣವನ್ನು ಹೊಂದಿದೆ.

ಇತ್ತೀಚೆಗೆ ನಿರ್ಮಾಪಕರು ಚಿತ್ರದ ಮೊದಲ ಸಿಂಗಲ್ 'ಚಿಕಿರಿ'ಯನ್ನು ಬಿಡುಗಡೆ ಮಾಡಿದರು , ಇದನ್ನು ಎ.ಆರ್. ರೆಹಮಾನ್ ಸಂಯೋಜಿಸಿದ್ದಾರೆ, ಇದು ಮಣ್ಣಿನ ಸ್ವರ ಮತ್ತು ಸಾಮೂಹಿಕ ಆಕರ್ಷಣೆಗಾಗಿ ಗಮನ ಸೆಳೆದಿದೆ. ವೃದ್ಧಿ ಸಿನಿಮಾಸ್ ನಿರ್ಮಿಸಿದ ಮತ್ತು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ 'ಪೆಡ್ಡಿ' ಮಾರ್ಚ್ 27, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವೈರಲ್‌ ವಿಡಿಯೋ



ರಾಮ್ ಚರಣ್ ಗೆ ಜೋಡಿಯಾಗಿ ʼಪೆದ್ದಿʼಯಲ್ಲಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾ ಬಳಗದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ಚಿತ್ರ ತಯಾರಾಗು ತ್ತಿದ್ದು, ಎ.ಆರ್.ರೆಹಮಾನ್ ಸಂಗೀತ, ನವೀನ್ ನೂಲಿ‌ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ: Peddi Movie: 40 ವರ್ಷದ ರಾಮ್‌ ಚರಣ್‌ ತಾಯಿ ಪಾತ್ರಕ್ಕೆ 33 ವರ್ಷದ ಸ್ವಾಸಿಕಾಗೆ ಆಫರ್‌; ʼಪೆದ್ದಿʼ ಚಿತ್ರದ ಬಗ್ಗೆ ನಟಿ ಹೇಳಿದ್ದೇನು?

ಮೊದಲ ಬಾರಿಗೆ ರಾಮ್‌ ಚರಣ್‌ ಮತ್ತು ಶಿವಣ್ಣ ತೆರೆ ಹಂಚಿಕೊಳ್ಳುತ್ತಿರುವ ಕಾರಣದಿಂದಲೇ ಈಗಾಗಲೇ ಸಿನಿಮಾ ಕುತೂಹಲ ಕೆರಳಿಸಿದೆ. ಕಥೆಗೆ ತಿರುವು ನೀಡುವ ಬಹುಮುಖ್ಯ ಪಾತ್ರದಲ್ಲಿ ಶಿವ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ ಬೆಡಗಿ ಜಾಹ್ನವಿ ಕಪೂರ್‌ ಅವರಿಗೆ ಇದು 2ನೇ ತೆಲುಗು ಚಿತ್ರ.

Yashaswi Devadiga

View all posts by this author