ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pavithra Bandhana: ಪವಿತ್ರ ಬಂಧನಕ್ಕೆ ಹೊಸ ಸಮಯ! ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Pavithra Bandhana: ಕಲರ್ಸ್ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿ, ಇನ್ನು ಮುಂದೆ ಹೊಸ ಸಮಯದಲ್ಲಿ ವೀಕ್ಷಕರನ್ನು ರಂಜಿಸಲಿದೆ. ಸೋಮವಾರದಿಂದ ‘ಪವಿತ್ರ ಬಂಧನ’ ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಪ್ರೀತಿಯ ಕನಸುಗಳ ನಡುವೆ, ಪರಿಸ್ಥಿತಿಯ ಒತ್ತಡದಿಂದಾಗಿ ಆಕೆ ದೇವದತ್‌ನನ್ನು ಮದುವೆಯಾಗುವ ಅನಿವಾರ್ಯತೆಗೆ ಸಿಲುಕುತ್ತಾಳೆ.

ಪವಿತ್ರ ಬಂಧನ

ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ತ್ಯಾಗ ಮತ್ತು ಕುಟುಂಬದ ಭಾವನಾತ್ಮಕ ಸಂಘರ್ಷವನ್ನು ಕಟ್ಟಿಕೊಡುತ್ತಿರುವ ಕಲರ್ಸ್ ಕನ್ನಡದ ‘ಪವಿತ್ರ ಬಂಧನ’ (Pavithra Bandhana) ಧಾರಾವಾಹಿ, ಇನ್ನು ಮುಂದೆ ಹೊಸ ಸಮಯದಲ್ಲಿ ವೀಕ್ಷಕರನ್ನು ರಂಜಿಸಲಿದೆ. ಸೋಮವಾರದಿಂದ ‘ಪವಿತ್ರ ಬಂಧನ’ ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಪ್ರೀತಿಯ ಕನಸುಗಳ ನಡುವೆ, ಪರಿಸ್ಥಿತಿಯ ಒತ್ತಡದಿಂದಾಗಿ ಆಕೆ ದೇವದತ್‌ನನ್ನು ಮದುವೆಯಾಗುವ ಅನಿವಾರ್ಯತೆಗೆ ಸಿಲುಕುತ್ತಾಳೆ.

ಮತ್ತಷ್ಟು ಗೊಂದಲ

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮುನ್ನವೇ ದಾಂಪತ್ಯದ ಬಂಧಕ್ಕೆ ಸಿಲುಕುವ ಪವಿತ್ರಾ ಮತ್ತು ದೇವದತ್‌ರ ಬದುಕು ಮುಂದೆ ಯಾವ ತಿರುವು ಪಡೆಯಲಿದೆ? ಈ ಅನಿರೀಕ್ಷಿತ ಬಂಧ ಪ್ರೀತಿಯಾಗಿ ಬದಲಾಗುತ್ತದೆಯೇ? ಅಥವಾ ಹಳೆಯ ಭಾವನೆಗಳು ಅವರ ಬದುಕಿನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಲಿವೆಯೇ? ಎಂಬುದು ಕುತೂಹಲ.

ಇದನ್ನೂ ಓದಿ: Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಟ; ಟೀಕಿಸಿದ ಪತ್ನಿ

ಪವಿತ್ರಾ ಮತ್ತು ದೇವದತ್ ನಡುವಿನ ಸಂಬಂಧದ ಏರಿಳಿತಗಳು, ಕುಟುಂಬದ ಭಾವನೆಗಳು ಹಾಗೂ ವಿಧಿ ಅವರ ಬದುಕಿನಲ್ಲಿ ಬರೆಯುವ ಹೊಸ ಅಧ್ಯಾಯಗಳು ಪವಿತ್ರ ಬಂಧನವನ್ನು ಮತ್ತಷ್ಟು ಕುತೂಹಲಕರವಾಗಿಸಿವೆ.

ಬಿಗ್ ಬಾಸ್ ಸೀಸನ್-13' ಕಾರ್ಯಕ್ರಮ ಇದೇ ಭಾನುವಾರದ ಅಂದು ಆಗಸ್ಟ್ 16ರಿಂದ ಪ್ರಾರಂಭವಾಗುತ್ತಿದೆ. ಹೀಗಾಗಿ 'ಭಾರ್ಗವಿ ಎಲ್‌ಎಲ್‌ಬಿ' ಮತ್ತು 'ಪ್ರೇಮಕಾವ್ಯ' ಧಾರಾವಾಹಿ ಮುಕ್ತಾಯಗೊಂಡಿವೆ.



ಉತ್ತಮ ಮಧು ಅವರು 'ಪವಿತ್ರ ಬಂಧನ' ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಮಹೇಶ್ ಎಂಬುವವರ ಜೊತೆ ಸೇರಿ ಉತ್ತಮ್ ಮಧು ಜಂಟಿಯಾಗಿ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ.

ಸೂರಜ್ ಸಿಂಗ್(ದೇವ್‌ದತ್ ದೇಶ್‌ಮುಖ್), ಅಮೂಲ್ಯಾ ಭಾರದ್ವಾಜ್ (ಪವಿತ್ರಾ),ಅನುಷಾ ರಾವ್ (ರಾಧಿಕಾ ಪಾತ್ರ), ರುಹಾನಿ ಶೆಟ್ಟಿ (ನಮ್ರತಾ), ವಿಜಯ್ ಕಾಶಿ (ಗೋವರ್ಧನ್), ಅಂಬರೀಶ್ ಸಾರಂಗಿ(ರಂಗ) ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದೆ ಪವಿತ್ರ ಬಂಧನ.

ಪವಿತ್ರಾ ಮತ್ತು ದೇವ್.. ಒಬ್ಬರಿಗೊಬ್ಬರು ಇಷ್ಟವಿಲ್ಲದಿದ್ದರೂ, ಸನ್ನಿವೇಶಗಳ ಒತ್ತಡದಿಂದಾಗಿ ಮದುವೆಯಾಗಬೇಕಾಗುತ್ತದೆ. ದ್ವೇಷಿಸುವ ವ್ಯಕ್ತಿಯ ಜೊತೆಯೇ ಬದುಕಬೇಕಾದ ಅನಿವಾರ್ಯತೆ ಬಂದಾಗ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ವಿಧಿ ಹೇಗೆ ಮನುಷ್ಯನ ಜೀವನವನ್ನು ಬದಲಿಸುತ್ತದೆ ಎಂಬುದೇ ಈ ಕಥೆಯ ಸಾರ.

ಇದನ್ನೂ ಓದಿ: Bigg Boss Kannada 13: ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

ಹಿರಿಯ ನಟರಾದ ವಿಜಯ್ ಕಾಶಿ ಅವರು ಗೋವರ್ಧನ್ ಪಾತ್ರಕ್ಕೆ ಹಾಗೂ ಅಂಬರೀಶ್ ಸಾರಂಗಿ ಅವರು ರಂಗ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.‌

Yashaswi Devadiga

View all posts by this author