ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಸೂರಜ್ ಸಿಂಗ್‌ಗೆ ಒಲಿದ 'ಪವಿತ್ರ ಬಂಧನ'; ಇನ್ಮೇಲೆ ಪ್ರತಿದಿನ ಕಲರ್ಸ್‌ ಕನ್ನಡದಲ್ಲಿ ಬರ್ತಾರೆ ವೈಲ್ಡ್ ಕಾರ್ಡ್ ಹೀರೋ!

Bigg Boss Suraj Singh: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಸೂರಜ್‌ ಸಿಂಗ್‌ ಅವರಿಗೆ ಬಂಪರ್ ಆಫರ್ ಪಡೆದಿದ್ದಾರೆ. ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಧಾರಾವಾಹಿಗೆ ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

Pavitra bandhana: ‌ಬಿಗ್ ಬಾಸ್ ಮುಗಿಯುವ ಮುನ್ನವೇ ಸೂರಜ್‌ಗೆ ಜಾಕ್‌ಪಾಟ್

-

Avinash GR
Avinash GR Jan 11, 2026 1:07 PM

‘ಬಿಗ್‌ ಬಾಸ್‌ ಸೀಸನ್‌ 12’ ಶೋಗೆ ವೈಲ್ಡ್‌ ಕಾರ್ಡ್ ಮೂಲಕ ಎಂಟ್ರಿ ಹೋದವರು ಸೂರಜ್‌ ಸಿಂಗ್.‌ ಸೋಶಿಯಲ್‌ ಮೀಡಿಯಾದಿಂದಲೇ ಗುರುತಿಸಿಕೊಂಡಿದ್ದ ಸೂರಜ್‌ ಅವರನ್ನು ಬಿಗ್‌ ಬಾಸ್‌ ಮನೆಮಾತಾಗಿಸಿದೆ. ಹೌದು, ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ತಮಗೆ ಸಿಕ್ಕಿರುವ ಜನಪ್ರಿಯತೆ ಎಂಥದ್ದು ಎಂಬ ಬಗ್ಗೆ ಸೂರಜ್‌ಗೆ ಗೊತ್ತಾಗಿದೆ. ಜೊತೆಗೆ ಈಗ ಬೋನಸ್‌ ಎಂಬಂತೆ ದೊಡ್ಡ ಆಫರ್‌ ವೊಂದು ಅವರಿಗೆ ಸಿಕ್ಕಿದೆ. ಏನದು? ಮುಂದೆ ಓದಿ.

ಕಲರ್ಸ್‌ ಕನ್ನಡ ಸೀರಿಯಲ್‌ಗೆ ಸೂರಜ್‌ ಹೀರೋ

ಸಾಮಾನ್ಯವಾಗಿ ಬಿಗ್ ಬಾಸ್‌ ಮನೆಗೆ ಹೋಗಿಬರುವ ಸ್ಪರ್ಧಿಗಳಿಗೆ ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ಅವಕಾಶ ಸಿಗುವುದು ಮಾಮೂಲು. ಇದೀಗ ಅಂಥದ್ದೇ ಒಂದು ಅವಕಾಶ ಸೂರಜ್‌ ಪಾಲಿಗೆ ಬಂದಿದೆ. ಕಲರ್ಸ್‌ ಕನ್ನಡದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಹೊಸ ಧಾರಾವಾಹಿ ಪವಿತ್ರ ಬಂಧನಕ್ಕೆ ಸೂರಜ್‌ ಸಿಂಗ್‌ ಹೀರೋ ಆಗಿ ಸೆಲೆಕ್ಟ್‌ ಆಗಿದ್ಧಾರೆ. ಈಗಾಗಲೇ ಆ ಸೀರಿಯಲ್‌ನ ಪ್ರೋಮೋ ಕೂಡ ರಿಲೀಸ್‌ ಆಗಿದೆ.

Bigg Boss 12: ಗಿಲ್ಲಿ ನಟನ ಬಗ್ಗೆ ಒಬ್ಬರಿಗೆ ಅಸಮಾಧಾನ, ಮತ್ತೊಬ್ಬರಿಗೆ ಅಭಿಮಾನ; ವೈರಲ್‌ ಆಗ್ತಿದೆ ಎಲಿಮಿನೇಟ್‌ ಆದ ಮಾಳು - ಸೂರಜ್‌ ಹೇಳಿಕೆ

ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆಯೇ ಕಲರ್ಸ್‌ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗಲಿವೆ. ಈಗಾಗಲೇ ಸೀರಿಯಲ್‌ಗಳ ಪ್ರೋಮೋಗಳು ಎಲ್ಲರ ಗಮನಸೆಳೆದಿವೆ. 'ರಾಮಾಚಾರಿ' ಸೀರಿಯಲ್‌ ಮುಗಿದಿದ್ದು, 'ಯಜಮಾನ' ಸೀರಿಯಲ್‌ ಕೂಡ ಶೀಘ್ರದಲ್ಲೇ ಅಂತ್ಯವಾಗಲಿದೆ. ಮುಂದಿನ ವಾರ ಬಿಗ್‌ ಬಾಸ್‌ ಮುಗಿಯಲಿದ್ದು, ಆನಂತರ ಹೊಸ ಸೀರಿಯಲ್‌ಗಳದ್ದೇ ಸದ್ದು. ಸದ್ಯ ಗೌರಿ ಕಲ್ಯಾಣ, ರಾಣಿ ಧಾರಾವಾಹಿಗಳ ಸಾಲಿಗೆ ಈಗ ಪವಿತ್ರ ಬಂಧನ ಸೀರಿಯಲ್‌ ಕೂಡ ಸೇರಿಕೊಂಡಿದೆ. ಅದರಲ್ಲಿ ಸೂರಜ್‌ಗೆ ಏನು ಪಾತ್ರ ಇರಬಹುದು ಎಂಬುದಕ್ಕೆ ಈಗಾಗಲೇ ಸಾಕ್ಷಿ ಕೂಡ ಲಭ್ಯವಾಗಿದೆ.

Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್‌!

‘ಪವಿತ್ರ ಬಂಧನ’ ಸೀರಿಯಲ್‌ ಬಗ್ಗೆ..

‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್‌ ಸಿಂಗ್‌ ಜೊತೆಗೆ ಯಶಸ್‌ ಕೆ. ಗೌಡ ಕೂಡ ಇದ್ದಾರೆ. ನಾಯಕಿಯಾಗಿ ‘ದಾಸ ಪುರಂದರ’, ‘ಬೃಂದಾವನ’ ಖ್ಯಾತಿಯ ಅಮೂಲ್ಯ ಭಾರದ್ವಾಜ್‌ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಸೂರಜ್‌ಗೆ ದೇವದತ್‌ ದೇಶಮುಖ್‌ ಎಂಬ ಪಾತ್ರವಿದ್ದರೆ, ಅವರ ತಮ್ಮ ತಿಲಕ್‌ ದೇಶಮುಖ್‌ ಪಾತ್ರವನ್ನು ಯಶಸ್‌ ಮಾಡುತ್ತಿದ್ದಾರೆ. ಪ್ರೋಮೋದಲ್ಲೇ ಸಾಕಷ್ಟು ಟ್ವಿಸ್ಟ್‌ ಇದ್ದು, ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಇದರ ಪ್ರಸಾರ ದಿನಾಂಕ ಘೋಷಣೆ ಆಗಲಿದೆ.