ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಪರೂಪದ ಸಾಧನೆ ಮಾಡಿದ ಚಿರಂಜೀವಿ - ರಾಮ್‌ ಚರಣ್‌; 2026ರಲ್ಲಿ ಅಪ್ಪ-ಮಗನಿಂದ ಭರ್ಜರಿ ದಾಖಲೆ ಸೃಷ್ಟಿ!

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ʻಮೆಗಾ ಸ್ಟಾರ್ʼ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಒಂದೇ ವರ್ಷದಲ್ಲಿ ತಲಾ 300 ಕೋಟಿಗೂ ಅಧಿಕ ಗಳಿಕೆಯ ಸಿನಿಮಾಗಳನ್ನು ನೀಡಿ ಜಾಗತಿಕ ದಾಖಲೆ ಬರೆದಿದ್ದಾರೆ. ಸಂಕ್ರಾಂತಿಗೆ ಬಿಡುಗಡೆಯಾದ ಚಿರು ಅವರ ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತು ಜೂನ್ 4 ರಂದು ತೆರೆಕಂಡ ರಾಮ್‌ ಚರಣ್ ಅವರ ‘ಪೆದ್ದಿ’ ಚಿತ್ರಗಳು ಈ ಸಾಧನೆ ಮಾಡಿವೆ.

ಚಿರು - ಚರಣ್‌ ಅಬ್ಬರಕ್ಕೆ ನಡುಗಿದ ಬಾಕ್ಸ್ ಆಫೀಸ್; ಅಪ್ಪ-ಮಗನ ಹೊಸ ದಾಖಲೆ

-

Avinash GR
Avinash GR Jun 15, 2026 6:59 PM

‘ಮೆಗಾ ಫ್ಯಾಮಿಲಿ’ ಪಾಲಿಗೆ ಈ ವರ್ಷ ಅತ್ಯಂತ ಸಕ್ಸಸ್‌ಫುಲ್‌ ಎನಿಸಿಕೊಂಡಿದೆ. ಏಕೆಂದರೆ, ಕೇವಲ ಆರು ತಿಂಗಳ ಅಂತರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ನಟನೆಯ ಸಿನಿಮಾಗಳು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿ ಹೊಸ ಇತಿಹಾಸ ಸೃಷ್ಟಿಸಿವೆ. ಇಂತಹ ಸಾಧನೆಯನ್ನು ಚಿತ್ರರಂಗದಲ್ಲಿರುವ ಬೇರೆ ಯಾವ ಅಪ್ಪ- ಮಗನೂ ಮಾಡಿಲ್ಲ ಎಂಬುದು ವಿಶೇಷ.

ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ʻಮನ ಶಂಕರ ವರ ಪ್ರಸಾದ್ ಗಾರುʼ ಹಾಗೂ ರಾಮ್ ಚರಣ್ ನಟನೆಯ ಸ್ಪೋರ್ಟ್ಸ್ ಡ್ರಾಮಾ 'ಪೆದ್ದಿ' ಚಿತ್ರಗಳು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿವೆ. ಸಿನಿಮಾರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಒಂದೇ ವರ್ಷದಲ್ಲಿ ತಂದೆ ಮತ್ತು ಮಗ ಇಬ್ಬರೂ ವೈಯಕ್ತಿಕವಾಗಿ 300 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳನ್ನು ನೀಡಿ ದಾಖಲೆ ಮಾಡಿದ್ದಾರೆ.

ಇಂತಹ ಅಪರೂಪದ ಹಾಗೂ ಅದ್ಭುತ ಮೈಲಿಗಲ್ಲು ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ, ಇಡೀ ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಇದುವರೆಗೂ ಯಾರೂ ಮಾಡದ ಅಪ್ರತಿಮ ಸಾಧನೆಯಾಗಿದೆ. ಸಹಜವಾಗಿಯೇ ಇದು ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ದೊಡ್ಡ ಖುಷಿಯನ್ನ ನೀಡಿವೆ.

Chiranjeevi: ಮೆಗಾಸ್ಟಾರ್ ಅಬ್ಬರ ಇನ್ನು ಒಟಿಟಿಯಲ್ಲಿ! ‘ಮನ ಶಂಕರ ವರಪ್ರಸಾದ್ ಗಾರು’ ಸ್ಟ್ರೀಮಿಂಗ್‌ ಎಲ್ಲಿ?

ʻಮನ ಶಂಕರ ವರ ಪ್ರಸಾದ್ ಗಾರುʼ ಸಿನಿಮಾದ ಬಗ್ಗೆ...

ಅನಿಲ್‌ ರವಿಪುಡಿ ನಿರ್ದೇಶನದ ʻಮನ ಶಂಕರ ವರ ಪ್ರಸಾದ್ ಗಾರುʼ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ನಯನತಾರಾ ನಟಿಸಿದ್ದರು. 200 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 375 ಕೋಟಿ ರೂ. ಗಳಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿತ್ತು. ಚಿರಂಜೀವಿ ಅವರಿಗೆ ದೊಡ್ಡ ಸಕ್ಸಸ್‌ ತಂದುಕೊಟ್ಟಿತ್ತು. 2026ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ʻಮನ ಶಂಕರ ವರ ಪ್ರಸಾದ್ ಗಾರುʼ ಸಿನಿಮಾವು ತೆರೆಕಂಡಿತ್ತು.

Peddi Box Office Collection: ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್! ರಾಮ್ ಚರಣ್ ಮಾಸ್ ಕ್ರೇಜ್‌

ʻಪೆದ್ದಿʼ ಸಿನಿಮಾದ ಬಗ್ಗೆ..

ಜೂನ್‌ 4ರಂದು ತೆರೆಕಂಡಿದ್ದ ರಾಮ್‌ ಚರಣ್‌ ನಟನೆಯ ʻಪೆದ್ದಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. 13 ದಿನಗಳಿಗೆ ಈ ಚಿತ್ರದ ಒಟ್ಟು ಗಳಿಕೆಯು ಆಗಲೇ 390+ ಕೋಟಿ ರೂ. ದಾಟಿದೆ. ಮೂರನೇ ವಾರ ಮುಕ್ತಾಯ ಆಗೋದ್ರಲ್ಲಿ ಈ ಗಳಿಕೆಯು 400 ಕೋಟಿ ರೂ. ದಾಟಲಿದೆ. ರಾಮ್‌ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್‌ ಕಾಣಿಸಿಕೊಂಡಿದ್ದಾರೆ. ಸದ್ಯ ಅಪ್ಪ - ಮಗನ ದಾಖಲೆಯು ಮೆಗಾ ಫ್ಯಾನ್ಸ್‌ಗೆ ದೊಡ್ಡ ಖುಷಿಯನ್ನು ನೀಡಿದೆ.