ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರು ನಟ ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡುತಿದ್ದಾರೆ ಎಂಬ ನ್ಯೂಸ್ ಸದ್ಯ ಟಾಪ್ ಟ್ರೆಂಡಿಂಗ್‌ನಲ್ಲಿದೆ. ಇವರಿಬ್ಬರು ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿರುವುದಂತೂ ನಿಜ. ಇವರಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಹುಟ್ಟುಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ರೋಹನ್ ಮೆಹ್ರಾ ಯಾರು?
ಯಾವಾಗ ರೋಹನ್ ಜೊತೆ ಪೂಜಾ ಹೆಸರು ಕೇಳಿಬಂತೋ, ಎಲ್ಲರ ಕಣ್ಣು ರೋಹನ್ ಮೇಲೆ ಬಿದ್ದಿದೆ. ಕರಾವಳಿ ಚೆಲುವೆಯನ್ನು ಪ್ರೀತಿ ಮಾಡ್ತಿರುವ ಈ ರೋಹನ್ ಯಾರು ಅನ್ನೋದು ಎಲ್ಲರ ಪ್ರಶ್ನೆ ಆಗಿದೆ. ಅದಕ್ಕುತ್ತರ ಇಲ್ಲಿದೆ. ಈ ರೋಹನ್ ಮೆಹ್ರಾ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ದಂತಕಥೆ, ದಿವಂಗತ ನಟ ವಿನೋದ್ ಮೆಹ್ರಾ ಅವರ ಪುತ್ರ. ವಿನೋದ್ ಅವರ ಮೂರನೇ ಪತ್ನಿ ಕಿರಣ್ ಮೆಹ್ರಾ ಅವರಿಗೆ ಜನಿಸಿದ ರೋಹನ್ ಚಿಕ್ಕ ಹುಡುಗನಾಗಿದ್ದಲೇ ವಿನೋದ್ ಇಹಲೋಕ ತ್ಯಜಿಸಿದ್ದರು. ಆನಂತರ ತಾಯಿ ಜೊತೆ ಕೀನ್ಯಾದ ಮೊಂಬಾಸಾಗೆ ರೋಹನ್ ತೆರಳಿದ್ದರು. ಅಲ್ಲಿ ಅವರ ತಾಯಿ ಮತ್ತು ತಾಯಿಯ ಕಡೆಯ ಅಜ್ಜ-ಅಜ್ಜಿಯ ಆರೈಕೆಯಲ್ಲಿ ರೋಹನ್ ಬೆಳೆದರು.
Pooja Hegde: ಟಾಲಿವುಡ್‌ಗೆ ಮತ್ತೆ ಎಂಟ್ರಿ ಕೊಟ್ಟ ಸೌತ್ ಬ್ಯೂಟಿ: ದುಲ್ಖರ್ ಸಲ್ಮಾನ್ ಜತೆ ಪೂಜಾ ಹೆಗ್ಡೆ ರೊಮ್ಯಾನ್ಸ್
ರೋಹನ್ ಸಹೋದರಿ ಕೂಟ ನಟಿ
ನಂತರ ಯುಕೆಯಲ್ಲಿ ವ್ಯಾಸಂಗ ಮಾಡಿದ ರೋಹನ್ ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ಮರಳಿದರು. ರೋಹನ್ ಅವರಿಗೆ ಸೋನಿಯಾ ಮೆಹ್ರಾ ಎಂಬ ಹಿರಿಯ ಸಹೋದರಿ ಇದ್ದಾರೆ, ಅವರು ಕೂಡ ನಟಿಯಾಗಿದ್ದು 2007ರಲ್ಲಿ 'ವಿಕ್ಟೋರಿಯಾ ನಂ. 203' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ
ಆರಂಭದಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರೋಹನ್, ಆನಂತರ 2018ರಲ್ಲಿ ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ನಟನೆಯ 'ಬಜಾರ್' ಚಿತ್ರದ ಮೂಲಕ ನಟನೆಯನ್ನು ಆರಂಭಿಸಿದರು. ಷೇರು ಮಾರುಕಟ್ಟೆಯ ಹಿನ್ನೆಲೆಯ ಈ ಚಿತ್ರದಲ್ಲಿ ರಿಜ್ವಾನ್ ಅಹ್ಮದ್ ಎಂಬ ಪಾತ್ರ ನಿರ್ವಹಿಸಿದ ಅವರು ಫಿಲ್ಮ್‌ಫೇರ್‌ನ 'ಅತ್ಯುತ್ತಮ ಚೊಚ್ಚಲ ನಟ' ಪ್ರಶಸ್ತಿಯನ್ನು ಪಡೆದುಕೊಂಡರು.
2021ರಲ್ಲಿ ರಿಲೀಸ್ ಆದ '420 IPC' ಎಂಬ ಲೀಗಲ್ ಡ್ರಾಮಾದಲ್ಲಿ ವಕೀಲನ ಪಾತ್ರ ಮಾಡಿದ್ದ ರೋಹನ್, 2023ರಲ್ಲಿ ಬಂದ 'ಕಾಲಾ' (Kaala) ಎಂಬ ಥ್ರಿಲ್ಲರ್ ವೆಬ್ ಸರಣಿಯಲ್ಲೂ ಅವರು ಕಾಣಿಸಿಕೊಂಡರು. ಕೇವಲ ರೊಮ್ಯಾಂಟಿಕ್ ಮಾತ್ರವಲ್ಲದೆ, ಹೆಚ್ಚಾಗಿ ಕಂಟೆಂಟ್ ಆಧಾರಿತ ಕಥೆಗಳನ್ನು ರೋಹನ್ ಇಷ್ಟಪಡುತ್ತಾರೆ. 'ಅದ್ಭುತ್', 'ಫೋರ್ ಮೋರ್ ಶಾಟ್ಸ್ ಪ್ಲೀಸ್' ನಂತಹ ಪ್ರಾಜೆಕ್ಟ್‌ಗಳಲ್ಲೂ ರೋಹನ್ ಭಾಗಿಯಾಗಿದ್ದಾರೆ.
Pooja Hegde: ಕಾಂಜೀವರಂ ಸೀರೆಯುಟ್ಟ ಮಸ್ತಾಗಿ ಪೋಸ್ ಕೊಟ್ಟ ನಟಿ ಪೂಜಾ ಹೆಗ್ಡೆ
ತಾರಾ ಸುತಾರಿಯಾ ಜೊತೆ ಬ್ರೇಕಪ್
ಅಂದಹಾಗೆ, ನಟಿ ತಾರಾ ಸುತಾರಿಯಾ ಅವರು ಚಿತ್ರರಂಗಕ್ಕೆ ಬರುವ ಮೊದಲು ರೋಹನ್ ಅವರೊಂದಿಗೆ ಸುದೀರ್ಘ ಸಂಬಂಧದಲ್ಲಿದ್ದರು. ಅವರಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು, ಆದರೆ ನಂತರ ಇಬ್ಬರ ಮಧ್ಯೆ ಬ್ರೇಕಪ್ ಆಯಿತಂತೆ. ಇದೀಗ ಪೂಜಾ ಹೆಗ್ಡೆ ಜೊತೆ ರೋಹನ್ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಡೇಟಿಂಗ್ ವದಂತಿಗಳಿಗೆ ಕಾರಣವಾಗಿದೆ.