ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻದಿ ರಾಜಾ ಸಾಬ್‌ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್‌ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ನೋಡಿ?

The Raja Saab Box Office Collection: 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಫಲಿತಾಂಶ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 112 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ ಭಾರತದಲ್ಲಿ ಶೇ.50ರಷ್ಟು ಕುಸಿತ ಕಂಡು ಕೇವಲ 27.85 ಕೋಟಿ ರೂ. ಗಳಿಸಿದೆ.

ನಟ ಪ್ರಭಾಸ್‌ ಅಭಿನಯದ 'ದಿ ರಾಜಾ ಸಾಬ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿತ್ತು. ಚಿತ್ರತಂಡ ನೀಡಿದ ಮಾಹಿತಿ ಪ್ರಕಾರ, ವಿಶ್ವಾದ್ಯಂತ 112 ಕೋಟಿ ರೂ. ಗಳಿಕೆ ಮಾಡಿತ್ತು. ಅತ್ತ ಭಾರತದಲ್ಲಿ ಈ ಸಿನಿಮಾದ ಒಟ್ಟಾರೆ ಗಳಿಕೆ ಮೊದಲ ದಿನ 64 ಕೋಟಿ ರೂ. ಎಂದು ಉದ್ಯಮದ ಟ್ರ್ಯಾಕರ್ Sacnilk ತಿಳಿಸಿತ್ತು. ಆದರೆ ಇದೀಗ ಎರಡನೇ ದಿನದ ಗಳಿಕೆಯೂ ಚಿತ್ರತಂಡಕ್ಕೆ ಕೊಂಚ ನಿರಾಸೆ ಮೂಡಿಸುವಂತಿದೆ.

ಶೇ. 50 ರಷ್ಟು ಕುಸಿತ

ಹೌದು, ಶನಿವಾರದ (ಜ.10) ಗಳಿಕೆಯಲ್ಲಿ ಸುಮಾರು ಶೇ. 50 ರಷ್ಟು ಕುಸಿತ ಕಂಡಿದ್ದು, ಎರಡನೇ ದಿನ ದಿ ರಾಜಾ ಸಾಬ್‌ ಚಿತ್ರವು ಭಾರತದಲ್ಲಿ 27.85 ಕೋಟಿ ರೂ. ಸಂಗ್ರಹಿಸಿದೆ ಎಂದು Sacnilk ವರದಿ ಮಾಡಿದೆ. 'ದಿ ರಾಜಾ ಸಾಬ್' ಚಿತ್ರವು ಮೊದಲ ದಿನವೇ ಜಾಗತಿಕವಾಗಿ 112 ಕೋಟಿ ರೂ. ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ ಹಾರರ್-ಫ್ಯಾಂಟಸಿ ಸಿನಿಮಾಗಳಿಗೆ ಈ ಚಿತ್ರವು ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಚಿತ್ರದ ಭರ್ಜರಿ ಯಶಸ್ಸನ್ನು ಸಂಭ್ರಮಿಸಿದ್ದ ಚಿತ್ರತಂಡ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು.

The Raja Saab Collection: ಮಿಶ್ರ ಪ್ರತಿಕ್ರಿಯೆ ನಡುವೆಯೂ 'ದಿ ರಾಜಾ ಸಾಬ್' ಅಬ್ಬರ; ಪ್ರಭಾಸ್‌ ಹಾರರ್ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

ಇನ್ನು, ಹಿಂದಿ ವರ್ಷನ್‌ಗೆ ಮೊದಲ ದಿನ 6+ ಕೋಟಿ ರೂ. ಕಮಾಯಿ ಆಗಿದ್ದರೆ, ಎರಡನೇ 5 ಕೋಟಿ ಕಮಾಯಿ ಆಗಿದೆ. ಮೂಲಗಳ ಪ್ರಕಾರ, ವಿಶ್ವಾದ್ಯಂತ ಈ ಚಿತ್ರದ ಗಳಿಕೆಯು 140+ ಕೋಟಿ ರೂ. ದಾಟಿದೆ ಎಂಬ ಮಾಹಿತಿ ಇದೆ. ಇನ್ನು, ಕರ್ನಾಟಕದಿಂದ ಈ ಸಿನಿಮಾಕ್ಕೆ ಸುಮಾರು 10 ಕೋಟಿ ರೂ. ಗಳಿಕೆ ಆಗಿದೆ. ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಗಳಿಕೆ 2.50 ಕೋಟಿ ರೂ. ಕೂಡ ದಾಟಿಲ್ಲ.

'ದಿ ರಾಜಾ ಸಾಬ್' ಒಂದು ಹಾರರ್‌ ಥ್ರಿಲ್ಲರ್‌ ಕಾಮಿಡಿ ಕಥಾಹಂದರವನ್ನು ಹೊಂದಿದೆ. ಮಾರುತಿ ದಾಸರಿ ನಿರ್ದೇಶನದ ಈ ಚಿತ್ರದಲ್ಲಿ ಬೋಮನ್ ಇರಾನಿ, ಸಂಜಯ್ ದತ್, ಜರೀನಾ ವಹಾಬ್, ಮಾಳವಿಕ ಮೋಹನನ್ ಮತ್ತು ನಿಧಿ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣದ ಈ ಚಿತ್ರಕ್ಕೆ ತಮನ್ ಎಸ್ ಸಂಗೀತ ಮತ್ತು ಕಾರ್ತಿಕ್ ಪಳನಿ ಛಾಯಾಗ್ರಹಣವಿದೆ. ‌

Prabhas: ಕರ್ನಾಟಕದಲ್ಲಿ ʻದಿ ರಾಜಾ ಸಾಬ್‌ʼ ಚಿತ್ರಕ್ಕೆ 300 ಥಿಯೇಟರ್‌ ಮೀಸಲು; ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್‌!

ವಿಶೇಷವೆಂದರೆ, ಈ ಚಿತ್ರದ ಎಂಡ್ ಕ್ರೆಡಿಟ್ಸ್‌ನಲ್ಲಿ ಸೀಕ್ವೆಲ್ ಬಗ್ಗೆ ಘೋಷಣೆ ಮಾಡಲಾಗಿದೆ. ಮುಂದಿನ ಭಾಗಕ್ಕೆ 'ದಿ ರಾಜಾ ಸಾಬ್ 2: ಸರ್ಕಸ್ 1935' ಎಂದು ಹೆಸರಿಡಲಾಗಿದ್ದು, ಮಾರುತಿ ದಾಸರಿ ಅವರೇ ನಿರ್ದೇಶನ ಮುಂದುವರಿಸಲಿದ್ದಾರೆ. ಆದರೆ ಈ ಸಿನಿಮಾ ನಿಜವಾಗಿಯೂ ಮೂಡಿಬರಲಿದೆಯಾ? ಅನ್ನೋ ಅನುಮಾನ ಫ್ಯಾನ್ಸ್‌ಗೆ ಇದೆ.