ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

The Raja Saab Collection: ಮಿಶ್ರ ಪ್ರತಿಕ್ರಿಯೆ ನಡುವೆಯೂ 'ದಿ ರಾಜಾ ಸಾಬ್' ಅಬ್ಬರ; ಪ್ರಭಾಸ್‌ ಹಾರರ್ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

The Raja Saab Box Office: ಪ್ರಭಾಸ್ ಮತ್ತು ಮಾರುತಿ ಕಾಂಬಿನೇಷನ್‌ನ 'ದಿ ರಾಜಾ ಸಾಬ್' ಸಿನಿಮಾ ಜನವರಿ 9ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

ʻದಿ ರಾಜಾ ಸಾಬ್ʼ ಕಲೆಕ್ಷನ್; ಪ್ರಭಾಸ್ ಸಿನಿಮಾ ಮೊದಲ ದಿನದ ಗಳಿಕೆ ಎಷ್ಟು?

-

Avinash GR
Avinash GR Jan 10, 2026 11:11 AM

ನಟ ಪ್ರಭಾಸ್‌ ಅಭಿನಯದ ʻದಿ ರಾಜಾ ಸಾಬ್‌ʼ ಹಾರರ್‌ ಫ್ಯಾಂಟಸಿ ಸಿನಿಮಾವು ಜನವರಿ 9ರಂದು ಅದ್ದೂರಿಯಾಗಿ ತೆರೆಕಂಡಿದೆ. ದೊಡ್ಡಮಟ್ಟದ ಓಪನಿಂಗ್‌ ಪಡೆದುಕೊಂಡಿದೆ. ಆದರೆ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ʻದಿ ರಾಜಾ ಸಾಬ್‌ʼ ಮೊದಲ ದಿನ ಉತ್ತಮ ಕಮಾಯಿ ಮಾಡುವಲ್ಲಿ ಸಫಲವಾಗಿದೆ ಎಂದೇ ಹೇಳಬಹುದು. ಆದರೆ ಪ್ರಭಾಸ್‌ ಜನಪ್ರಿಯತೆಗೆ ಈ ಮೊತ್ತ ಕಮ್ಮಿ ಎನ್ನಲಾಗುತ್ತಿದೆ.

ರಾಜಾ ಸಾಬ್‌ ಮೊದಲ ದಿನದ ಗಳಿಕೆ ಎಷ್ಟು?

ಸ್ಯಾಕ್ನಿಲ್ಕ್ ವರದಿ ಪ್ರಕಾರ, ದಿ ರಾಜಾ ಸಾಬ್‌ ಸಿನಿಮಾವು ವಿಶ್ವಾದ್ಯಂತ ಮೊದಲ ದಿನ ಸುಮಾರು 112 ಕೋಟಿ ರೂ. ಕಮಾಯಿ ಮಾಡಿದೆ. ಇದರಲ್ಲಿ ಹಿಂದಿನ ದಿನ ಪೇಯ್ಡ್‌ ಪ್ರೀಮಿಯರ್‌ ಶೋಗಳ ಗಳಿಕೆಯೂ ಸೇರಿಕೊಂಡಿದೆ. ದಿ ರಾಜಾ ಸಾಬ್‌ ಪ್ಯಾನ್‌ ಇಂಡಿಯಾ ಸಿನಿಮಾವಾದರೂ, ಭಾರತದಲ್ಲಿ ತೆಲುಗು ವರ್ಷನ್‌ನಿಂದಲೇ ಸುಮಾರು 56 ಕೋಟಿ ರೂ. ಕಮಾಯಿ ಆಗಿದೆ. ಹಿಂದಿ ವರ್ಷನ್‌ನಿಂದ 6+ ಕೋಟಿ ರೂ. ಗಳಿಕೆಯಾದರೆ, ಕನ್ನಡ, ತಮಿಳು ಮತ್ತು ಮಲಯಾಳಂ ವರ್ಷನ್‌ ಒಟ್ಟು ಗಳಿಕೆ 1 ಕೋಟಿ ರೂ. ಕೂಡ ದಾಟಿಲ್ಲ! ವಿಶ್ವಾದ್ಯಂತ ಎಲ್ಲಾ ಗಳಿಕೆಯನ್ನು ಲೆಕ್ಕ ಹಾಕಿದರೆ, ಆ ಮೊತ್ತ 112 ಕೋಟಿ ರೂ. ದಾಟಲಿದೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.

Prabhas: ಕರ್ನಾಟಕದಲ್ಲಿ ʻದಿ ರಾಜಾ ಸಾಬ್‌ʼ ಚಿತ್ರಕ್ಕೆ 300 ಥಿಯೇಟರ್‌ ಮೀಸಲು; ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್‌!

ಪ್ರಭಾಸ್‌ ಅವರ ಬಾಹುಬಲಿ 2 ಸಿನಿಮಾದ ಗಳಿಕೆ 120 ಕೋಟಿ ರೂ. ದಾಟಿದ್ದರೆ, ಸಲಾರ್‌, ಕಲ್ಕಿ, ಆದಿಪುರುಷ್‌, ಸಾಹೋ ಸಿನಿಮಾಗಳು ಕೂಡ ಮೊದಲ ದಿನ ಅದ್ದೂರಿ ಕಮಾಯಿ ಮಾಡಿದ್ದವು. ಆ ಲೆಕ್ಕಕ್ಕೆ ಹೋಲಿಸಿದರೆ, ರಾಜಾ ಸಾಬ್‌ ಕಲೆಕ್ಷನ್‌ ಕೊಂಚ ಡಲ್‌ ಎನ್ನಬಹುದು.

ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಶೋಗಳು

ಇನ್ನು, ದಿ ರಾಜಾ ಸಾಬ್‌ ಸಿನಿಮಾಗೆ ಭರ್ಜರಿ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ಸಿಕ್ಕಿವೆ. ಬರೀ ತೆಲುಗು ವರ್ಷನ್‌ಗೆ ಸುಮಾರು 980+ ಶೋಗಳು ಸಿಕ್ಕಿದ್ದರೆ, ಉಳಿದ ವರ್ಷನ್‌ಗಳ ಶೋಗಳ ಒಟ್ಟು ಸಂಖ್ಯೆ 50+ ದಾಟುತ್ತದೆ. ಹಾಗ್ನೋಡಿದ್ರೆ, ಹೈದರಾಬಾದ್‌ನಲ್ಲೂ ಸರಿಸುಮಾರು ಇಷ್ಟೇ ಶೋಗಳನ್ನು ನೀಡಲಾಗಿದೆ. ‌

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

ಸಿನಿಮಾ ಹೇಗಿದೆ?

ಪ್ರಭಾಸ್‌ ಮತ್ತು ಮಾರುತಿ ಕಾಂಬಿನೇಷನ್‌ನ ಈ ಸಿನಿಮಾವು ದೊಡ್ಡಮಟ್ಟದ ಮ್ಯಾಜಿಕ್‌ ಮಾಡುವಲ್ಲಿ ಸೋತಿರುವುದು ಸ್ಪಷ್ಟ. ಯಾಕೆಂದರೆ, ಚಿತ್ರ ನೋಡಿದ ಬಹುತೇಕರು ನೆಗೆಟಿವ್‌ ಪ್ರತಿಕ್ರಿಯೆ ನೀಡಿದ್ದಾರೆ. ವಿರ್ಮಶಕರಿಂದಲೂ ಕೂಡ ಉತ್ತಮ ರೇಟಿಂಗ್ಸ್‌ ಸಿಕ್ಕಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ರಾಜಾ ಸಾಬ್‌ ಗಳಿಕೆ ಉತ್ತಮವಾಗಿರಲಿದೆ ಎಂಬ ಬಗ್ಗೆ ಅನುಮಾನಗಳಿವೆ. ಸುಮಾರು 400 ಕೋಟಿ ರೂ. ಮೊತ್ತದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಈ ಸಿನಿಮಾವು ಚಿತ್ರಮಂದಿರಗಳಲ್ಲಿಯೇ ಸುಮಾರು 700 ಕೋಟಿ ರೂ.ಗಳನ್ನಾದರೂ ಕಮಾಯಿ ಮಾಡಬೇಕಾದ ಅನಿವಾರ್ಯತೆ ಇದೆ.