Priyanka Chopra: ಹಾಲಿವುಡ್‌ನಲ್ಲಿ ಮತ್ತೊಂದು ಚಾನ್ಸ್ ಗಿಟ್ಟಿಸಿಕೊಂಡ ಪ್ರಿಯಾಂಕಾ ಚೋಪ್ರಾ
ನಿಕೋಲಸ್ ಸ್ಟೋಲರ್ ಅವರ ʼಜಡ್ಜ್‌ಮೆಂಟ್ ಡೇʼ ಎನ್ನುವ ಹಾಲಿವುಡ್ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಿದ್ದುʼ ಬೇವಾಚ್ʼ ಸಿನಿಮಾದ ಸಹನಟ ಝಾಕ್ ಎಫ್ರಾನ್ ಅವರೊಂದಿಗೆ ಪ್ರಿಯಾಂಕಾ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜತೆಗೆ ಬಾಲಿವುಡ್, ಟಾಲಿವುಡ್ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Priyanka Chopra

ನವದೆಹಲಿ: ʼಭಾಜಿರಾವ್ ರಾವ್ ಮಸ್ತಾನಿʼ, ʼಡಾನ್ʼ, ʼಕ್ರಿಶ್ʼ ಮುಂತಾದ ಹಿಂದಿಯ ಹಿಟ್ ಚಿತ್ರಗಳಲ್ಲಿ ನಟಿಸಿದ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಬಾಲಿವುಡ್ ಸಿನಿಮಾದಿಂದ ದೂರ ಉಳಿದಿದ್ದಾರೆ. ಸದ್ಯ ನಟಿ ಹಾಲಿವುಡ್ ಸಿನಿಮಾ, ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ಗೆ ಹೃತಿಕ್ ರೋಷನ್ (Hrithik Roshan) ಜತೆ ʼಕ್ರಿಶ್ 4ʼ ಚಿತ್ರ ಮಾಡುವ ಮೂಲಕ ರೀ ಎಂಟ್ರಿ ಕೊಡುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೆ ಹಾಲಿವುಡ್ ಕಾಮಿಡಿ ಸಸ್ಪೆನ್ಸ್ ಸಿನಿಮಾವೊಂದರ ಅವಕಾಶವನ್ನು ಪ್ರಿಯಾಂಕ ಚೋಪ್ರಾ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ಗೆ ರೀ ಎಂಟ್ರಿ ನೀಡ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಹಾಲಿವುಡ್ ಸಿನಿಮಾ ಬೋನಸ್ ಸಿಕ್ಕಂತಾಗಿದೆ.
ನಿಕೋಲಸ್ ಸ್ಟೋಲರ್ ಅವರ ʼಜಡ್ಜ್‌ಮೆಂಟ್ ಡೇʼ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಿದ್ದು ʼಬೇವಾಚ್ʼ ಸಿನಿಮಾದ ಸಹನಟ ಝಾಕ್ ಎಫ್ರಾನ್ ಅವರೊಂದಿಗೆ ತೆರೆ ಹಂಚಲಿದ್ದಾರೆ. ಈಗಾಗಲೇ ಚಿತ್ರದ ಹೆಸರು ಮಾತ್ರವೇ ರಿವೀಲ್ ಆಗಿದ್ದು ಹೆಚ್ಚಿನ ವಿವರ ಬಹಿರಂಗಗೊಂಡಿಲ್ಲ. ʼಜಡ್ಜ್‌ಮೆಂಟ್ ಡೇʼ ಚಿತ್ರವನ್ನು ವಿಲ್ ಫೆರೆಲ್, ಜೆಸ್ಸಿಕಾ ಎಲ್ಬಾಮ್, ನಿಕೋಲಸ್ ಸೇರಿ ಸ್ಯಾಂಚೆಜ್ ಪ್ರೊಡಕ್ಷನ್ಸ್‌ನಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಇದು ಹಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡೊದೆ.
ಇದನ್ನು ಓದಿ: 45 Movie: '45' ಚಿತ್ರದ ಪ್ರಚಾರ ಶುರು; ಖಾಸಗಿ ವಿಮಾನ ಏರಿ ಪಕ್ಕದ ರಾಜ್ಯಕ್ಕೆ ಹೊರಟ ಸ್ಟಾರ್ಸ್
ʼಜಡ್ಜ್‌ಮೆಂಟ್ ಡೇʼ ಚಿತ್ರವು ಜೈಲಿನಿಂದ ಬಿಡುಗಡೆಯಾಗುವ ಅಪರಾಧಿಯ ಜೀವನದ ಸುತ್ತ ಕಥೆ ಸಾಗಲಿದೆ. ಪ್ರಿಯಾಂಕ ಈ ಸಿನೆಮಾದಲ್ಲಿ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಲಿದ್ದಾರೆ. ಝಾಕ್ ಎಫ್ರಾನ್ ಮತ್ತು ನಟಿ ಪ್ರಿಯಾಂಕಾ ಈ ಕಥೆಯ ಕೇಂದ್ರ ಬಿಂದುವಾಗಲಿದ್ದಾರೆ. ನ್ಯಾಯಾಧೀಶರಾಗಿ ವಿಲ್ ಫೆರೆಲ್ ಅಭಿನಯಿಸಲಿದ್ದಾರೆ. ನ್ಯಾಯಾಧೀಶರ ಒಂದು ತೀರ್ಪಿನಿಂದ ಜೀವನವೇ ನಾಶವಾಗುತ್ತೆ ಎಂದು ಮನವರಿಕೆ ಮಾಡಿಸುವ ಕಾಮಿಡಿ ಥ್ರಿಲ್ಲಿಂಗ್ ಸಿನೆಮಾವೇ ʼಜಡ್ಜ್‌ಮೆಂಟ್ ಡೇʼ.
ಬಾಲಿವುಡ್‌ನಲ್ಲೂ ಮಿಂಚಿಂಗ್
ಹಾಲಿವುಡ್ ಜತೆಗೆ ಬಾಲಿವುಡ್‌ನ ಸಿನಿಮಾದಲ್ಲೂ ಪ್ರಿಯಾಂಕಾ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಸಿನಿಮಾದಲ್ಲಿ ಪ್ರಿಯಾಂಕ ಚೊಪ್ರಾ ಅಭಿನಯಿಸಲಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ʼಎಸ್ಎಸ್ಎಂಬಿ 29ʼ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ ಎನ್ನಲಾಗಿದೆ. ಹೃತಿಕ್ ರೋಷನ್ ಜತೆ ʼಕ್ರಿಶ್ 4ʼ ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸುವುದು ಬಹುತೇಕ ಫಿಕ್ಸ್ ಆಗಿದೆ. ಈ ನಡುವೆ ʼಸಿಟಾಡೆಲ್ 2ʼ ಎಂಬ ವೆಬ್ ಸರಣಿಯಲ್ಲಿಯೂ ಪ್ರಿಯಾಂಕ ಹೈಲೈಟ್ ಆಗಲಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ನಟಿ ಪ್ರಿಯಾಂಕಾ ಮಿಂಚಲಿದ್ದಾರೆ.