45 Movie: '45' ಚಿತ್ರದ ಪ್ರಚಾರ ಶುರು; ಖಾಸಗಿ ವಿಮಾನ ಏರಿ ಪಕ್ಕದ ರಾಜ್ಯಕ್ಕೆ ಹೊರಟ ಸ್ಟಾರ್ಸ್
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼ45ʼ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರತಂಡವು ಪ್ರಚಾರಕ್ಕಾಗಿ ಬೇರೆ ರಾಜ್ಯ ಗಳಿಗೂ ತೆರಳಲು ಸಜ್ಜಾಗಿದೆ. ಇದೀಗ ಚಿತ್ರತಂಡ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಖಾಸಗಿ ಜೆಟ್ನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದಿದೆ.

45 Movie

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಅರ್ಜುನ್ ಜನ್ಯ ನಿರ್ದೇಶನದ ʼ45ʼ (45 Movie) ಕೂಡ ಒಂದು. ಶಿವ ರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅವರಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರತಂಡವು ಇದೀಗ ಪ್ರಚಾರಕ್ಕಾಗಿ ಬೇರೆ ರಾಜ್ಯಗಳಿಗೂ ತೆರಳಲು ಸಜ್ಜಾಗಿದೆ. ಇದೀಗ ಚಿತ್ರತಂಡ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಖಾಸಗಿ ಜೆಟ್ನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದಿದೆ. ತಮ್ಮ ʼ45ʼ ಚಿತ್ರದ ಪ್ರಚಾರಕ್ಕಾಗಿಯೇ ಏ. 15 ಮತ್ತು ಏ. 16 ರಂದು ಮುಂಬೈ, ಹೈದರಾಬಾದ್, ಚೆನ್ನೈ, ಕೇರಳ ಹೀಗೆ ನಾಲ್ಕು ರಾಜ್ಯಗಳಿಗೂ ಚಿತ್ರತಂಡ ಪ್ರಯಾಣ ಬೆಳೆಸಲಿದೆ.
ಹ್ಯಾಟ್ರಿಕ್ ಹೀರೋ ಶಿ ವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಅರ್ಜನ್ ಜನ್ಯ, ನಿರ್ಮಾಪಕ ರಮೇಶ್ ರೆಡ್ಡಿ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಖಾಸಗಿ ವಿಮಾನದ ಮೂಲಕವೇ ಮುಂಬೈಗೆ ತೆರಳಿದ್ದು ಆಯಾ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಪ್ರಚಾರ ಮಾಡಲಿದ್ದಾರೆ. ಶಿವ ರಾಜ್‌ಕುಮಾರ್ ಜತೆಗೆ ಗೀತಾ ಶಿವ ರಾಜ್‌ಕುಮಾರ್ ಅವರೂ ಭಾಗಿಯಾಗಿದ್ದಾರೆ. ಏ. 15ರಂದು ಎರಡು ರಾಜ್ಯದಲ್ಲಿ ಸಿನಿಮಾ ತಂಡ ಪ್ರಚಾರ ಮಾಡಲಿದೆ. ಮೊದಲು ಬೆಂಗಳೂರಿನಿಂದ ಮುಂಬೈಗೆ ತೆರಳಿ PVR Juhuನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ಆ ಬಳಿಕ ಹೈದರಾಬಾದ್‌ಗೂ ಪ್ರಯಾಣ ಬೆಳೆಸಿ ಸಂಜೆ 7 ಗಂಟೆಗೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ PVR RK ಸಿನಿಫ್ಲೆಕ್ಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.
'45' ಚಿತ್ರದ ಟೀಸರ್ ಇಲ್ಲಿದೆ:
ಏ. 16ರಂದು ಸಿನಿಮಾ ತಂಡ ಚೆನ್ನೈಗೆ ಆಗಮಿಸಿ ಬೆಳಗ್ಗೆ 11 ಗಂಟೆಗೆ ಸತ್ಯಂ ಸಿನಿಮಾಸ್‌ನಲ್ಲಿ ಸಂವಾದ ನಡೆಸಲು ನಿರ್ಧರಿಸಿದೆ. ಸಂಜೆ 7 ಗಂಟೆಗೆ ಕೇರಳದ ಕೊಚ್ಚಿ PVR forumನಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಮಾಡಲಿದೆ. ಮಲ್ಟಿ ಸ್ಟಾರರ್ ನಟಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಯಾಗಿದ್ದು ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಕನ್ನಡ ಸೇರಿದಂತೆ ಇತರ ಭಾಷೆಯ ಪ್ರೇಕ್ಷಕರೂ ಕೊಂಡಾಡಿದ್ದು ಹೀಗಾಗಿ ಪಕ್ಕದ ರಾಜ್ಯದಲ್ಲೂ ಚಿತ್ರತಂಡ ಪ್ರಚಾರಕ್ಕೆ ಮುಂದಾಗಿದೆ.
ಇದನ್ನು ಓದಿ: Actor Shivarajkumar: ಮಂತ್ರಾಲಯಕ್ಕೆ ನಟ ಶಿವರಾಜ್‌ಕುಮಾರ್ ಕುಟುಂಬ ಭೇಟಿ; ರಾಯರಿಗೆ ವಿಶೇಷ ಪೂಜೆ
ಯುಗಾದಿ ಹಬ್ಬದಂದು ಈ ಚಿತ್ರದ ಟೀಸರ್ ಎಲ್ಲ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಈ ಝಲಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಶಿವಣ್ಣ, ಉಪ್ಪಿ, ರಾಜ್, ಲುಕ್, ಡೈಲಾಗ್ಸ್, ಕಿಕ್ ನೀಡಿದೆ. ಸದ್ಯ ಟೀಸರ್‌ನ ಸಣ್ಣ ಝಲಕ್ ನೋಡಿರುವ ಅಭಿಮಾನಿಗಳು ಚಿತ್ರಕ್ಕಾಗಿ ಮೋಸ್ಟ್ ವೈಟಿಂಗ್‌ನಲ್ಲಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ವಿಶೇಷಗಳ ನ್ನೊಳಗೊಂಡಿರುವ ʼ45ʼ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವ ರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಜತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ. ಆ. 15ರಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.