ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಲೋ ನವೀನ’ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ; ದೊಡ್ಮನೆಯಿಂದ ಸಿಕ್ಕ ಪ್ರಶಂಸೆಗೆ ಚಿತ್ರತಂಡ ಫುಲ್ ಖುಷ್!

ವಿಶಿಷ್ಟ ಕಥಾಹಂದರದ ಮೂಲಕ ಗಮನಸೆಳೆಯುತ್ತಿರುವ 'ಲೋ ನವೀನ' ಸಿನಿಮಾಗೆ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಅವರು, ನೈಜ ಜಗತ್ತಿನ ಸರಳ ಕಥೆ ಹಾಗೂ ಮಂಡ್ಯ ಶೈಲಿಯ ಭಾಷಾ ಸೊಗಡಿಗೆ ಫಿದಾ ಆಗಿ ತಂಡದ ನಿರೂಪಣೆಯನ್ನು ಕೊಂಡಾಡಿದ್ದಾರೆ.

ವಿಶಿಷ್ಟ ಕಥಾಹಂದರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ‘ಲೋ ನವೀನ’ ಸಿನಿಮಾಗೆ ಇದೀಗ ಸ್ಯಾಂಡಲ್‌ವುಡ್‌ನ ದೊಡ್ಮನೆ ಕುಟುಂಬದಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿದ ಪಿಆರ್‌ಕೆ ಪ್ರೊಡಕ್ಷನ್ಸ್‌ನ‌ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ಸಿನಿಮಾ ಮುಗಿದ ಬಳಿಕ ಇಡೀ ಚಿತ್ರತಂಡವನ್ನು ಭೇಟಿಯಾಗಿ ದೀರ್ಘಕಾಲ ಚರ್ಚೆ ನಡೆಸಿ ತಮ್ಮ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ.‌

ನಿರೂಪಣೆಯನ್ನು ಕೊಂಡಾಡಿದ ಅಶ್ವಿನಿ

ಈ ಚಿತ್ರದ ಕಥೆ, ಕಲಾವಿದರ ಸಹಜ ಅಭಿನಯ ಹಾಗೂ ಇಡೀ ಸಿನಿಮಾವನ್ನು ಎಲ್ಲೂ ಬೋರ್ ಹೊಡೆಸದಂತೆ ಕೊಂಡೊಯ್ದಿರುವ ಮನರಂಜನಾತ್ಮಕ ನಿರೂಪಣೆಯ ಬಗ್ಗೆ ಅಶ್ವಿನಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. "ಸುತ್ತಮುತ್ತಲಿನ ನೈಜ ಜಗತ್ತಿನ ಸರಳ ಕಥೆಯನ್ನು ಎತ್ತಿಕೊಂಡು, ಅದನ್ನು ಸಾಮಾನ್ಯ ಜನರ ಮನಸ್ಸಿಗೆ ನೇರವಾಗಿ ತಲುಪುವ ರೀತಿಯಲ್ಲಿ ತೆರೆಯ ಮೇಲೆ ತಂದಿರುವುದೇ ‘ಲೋ ನವೀನ’ ಚಿತ್ರದ ಅತಿ ದೊಡ್ಡ ಶಕ್ತಿ" ಎಂದು ಚಿತ್ರದ ಮೇಕಿಂಗ್ ಅನ್ನು ಶ್ಲಾಘಿಸಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್.

Appu Cup Season 3: ಅಪ್ಪು ಕಪ್ ಸೀಸನ್ 3ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಮಂಡ್ಯ ಶೈಲಿಯ ಸೊಗಡಿಗೆ ಫಿದಾ

ಗಾಯಕ ಹಾಗೂ ನಟ ನವೀನ್ ಸಜ್ಜು ಅವರ ಅದ್ಭುತ ನಟನೆ ಮತ್ತು ಇಡೀ ಚಿತ್ರತಂಡದ ಕಠಿಣ ಪರಿಶ್ರಮವನ್ನು ಕೊಂಡಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೇವಲ ಪ್ರಶಂಸೆಗಷ್ಟೇ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಚಾರ ಹೇಗಿರಬೇಕು, ಜನರಿಗೆ ತಲುಪಿಸಲು ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಕುರಿತು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

ಮುಖ್ಯವಾಗಿ ಚಿತ್ರದಲ್ಲಿ ಬಳಕೆಯಾಗಿರುವ ಮಂಡ್ಯ ಶೈಲಿಯ ಭಾಷಾ ಸೊಗಡು ಮತ್ತು ನೈಜ ಜೀವನಕ್ಕೆ ಅತ್ಯಂತ ಹತ್ತಿರವಾಗಿರುವ ಪಾತ್ರಗಳ ಸೃಷ್ಟಿಯನ್ನು ಮೆಚ್ಚಿಕೊಂಡ ಅವರು, "ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಗೆ ಇಂಥ ಪ್ರತಿಭಾವಂತ ಯುವ ಕಲಾವಿದರು ಮತ್ತು ತಂತ್ರಜ್ಞರ ಅಗತ್ಯ ತುಂಬಾ ಇದೆ" ಎಂದು ಹೇಳಿ ಲೋ ನವೀನ ಟೀಮ್‌ಗೆ ಹಾರೈಸಿದ್ದಾರೆ.

‘ಲೋ ನವೀನ’ ಟೀಮ್‌ಗೆ ದೊಡ್ಡಮಟ್ಟದ ಪ್ರೋತ್ಸಾಹ

ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಪ್ರೇಕ್ಷಕರ ಹಾಗೂ ವಿಮರ್ಶಕರ ವಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ, ದಿನದಿಂದ ದಿನಕ್ಕೆ ಥಿಯೇಟರ್‌ಗಳಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿರುವ ಬೆನ್ನಲ್ಲೇ, ದೊಡ್ಮನೆಯಿಂದ ಸಿಕ್ಕ ಈ ದೊಡ್ಡ ಮಟ್ಟದ ಪ್ರೋತ್ಸಾಹ ‘ಲೋ ನವೀನ’ ಚಿತ್ರತಂಡಕ್ಕೆ ಆನೆಬಲ ಸಿಕ್ಕಂತಾಗಿದೆ. ಹೊಸಬರ ಪ್ರಯತ್ನಕ್ಕೆ ಈ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಿದೆ.