Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ
ಇತ್ತೀಚೆಗಷ್ಟೆ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅದ್ಧೂರಿಯಾದ ಬ್ರಹ್ಮ ಕಲಶೋತ್ಸವ ಜರುಗಿತ್ತು. ಬ್ರಹ್ಮ ಕಲಶೋತ್ಸವದ ಬಳಿಕ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಮಾರಿಯಮ್ಮ ದೇಗುಲಕ್ಕೆ ಹಲವರು ಭೇಟಿ ನೀಡುತ್ತಿದ್ದಾರೆ. ಇದೀಗ ನಿರ್ಮಾಪಕಿ ಆಶ್ವಿನಿ ಪುನೀತ್ ಕಾಪು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Ashwini Puneethrajkumar

ಉಡುಪಿ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೆ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅದ್ಧೂರಿಯಾದ ಬ್ರಹ್ಮ ಕಲಶೋತ್ಸವ ಜರುಗಿತ್ತು. ಬ್ರಹ್ಮ ಕಲಶೋತ್ಸವದ ಬಳಿಕ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಮಾರಿಯಮ್ಮ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ನಿರ್ಮಾಪಕಿ ಆಶ್ವಿನಿ ಪುನೀತ್ ಕಾಪು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇಗುಲದಲ್ಲಿ ವಿಶೇಷ ಪೂಜೆ, ಪುನಸ್ಕಾರ, ಸೇವೆಗಳು ದಿನ ನಿತ್ಯ ನಡೆಯುತ್ತಿದ್ದು ನಿರ್ಮಾಪಕಿ ಅಶ್ವಿನಿ ಪುನೀತ್ ಹೊಸ ಮಾರಿಗುಡಿ ದೇಗುಲದಲ್ಲಿ ಮಾರಿಯಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಇದೇ ವೇಳೆ ಮಾರಿಯಮ್ಮನ ದೇಗುಲದಲ್ಲಿ ದೇವರಿಗೆ ವಿಶೇಷ ಸೇವೆಗಳನ್ನು ಸಮ ರ್ಪಿಸಿದರು. ಅದರೊಂದಿಗೆ ನವದುರ್ಗಾ ಲೇಖನ ಯಜ್ಞ ಪುಸ್ತಕವನ್ನು ಪಡೆದು ಶ್ಲೋಕಗಳನ್ನು ಬರೆಯುವ ಸಂಕಲ್ಪ ಕೂಡ ಮಾಡಿದ್ದಾರೆ. ಮಾರಿಯಮ್ಮ ದೇಗುಲದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನ ಮಂಡಳಿ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಇದನ್ನು ಓದಿ: Kangana Ranaut: ಉಡುಪಿಯ ಮಾರಿಯಮ್ಮ ದೇವಾಲಯಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ಭೇಟಿ
ಮಾರಿಯಮ್ಮ ದೇಗುಲ ದರ್ಶನವನ್ನು ಮಾಡುವ ಜತೆಗೆ ಉಚ್ಚಂಗಿ ದೇವಿಯ ದರ್ಶನವನ್ನು ಸಹ ಪಡೆದಿದ್ದಾರೆ. ಉಚ್ಚಂಗಿಯಲ್ಲಿ ಕೂಡ ವಿಶೇಷ ಪೂಜೆ, ಸೇವೆಗಳನ್ನು ದೇವರಿಗೆ ಸಮರ್ಪಿಸಿದ್ದಾರೆ. ಅಶ್ವಿನಿ ಕಾಪು ಸನ್ನಿಧಾನಗಳಿಗೆ ಭೇಟಿ ನೀಡಿದ್ದ ಕಾರಣ ಹಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಶ್ವಿನಿ ಪುನೀತ್ ಫ್ಲೋರಲ್ ವಿನ್ಯಾಸದ ಸಾಂಪ್ರದಾಯಿಕ ಸೀರೆ ಉಟ್ಟಿದ್ದು, ತಲೆ ತುಂಬ ಮಲ್ಲಿಗೆ ಮುಡಿದು ಸಿಂಪಲ್ ಆಗಿ ಕಾಣಿಸಿಕೊಂಡರು.

ಇಳಕಲ್ ಕೆಂಪು ಶಿಲೆಗಳಿಂದ ನಿರ್ಮಿತವಾದ ಮಾರಿಯಮ್ಮನ ದೇಗುಲವು ಇಂದು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಹರಕೆಯ ಸೇವೆಗಳು, ಅಶ್ವತ್ಥ ಪೂಜೆ, ಹೋಮ ಇತ್ಯಾದಿ ಸೇವೆಗಳು ನಡೆಯುತ್ತಿದ್ದು, ಈ ಹಿಂದೆ ಮಾರಿಯಮ್ಮನ ಸನ್ನಿಧಿಗೆ ಪೂಜಾ ಹೆಗ್ಡೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಕೂಡ ಭೇಟಿ ನೀಡಿದ್ದರು.