ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mike Tyson: ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ನೀವು ಯಾರೂ ಊಹಿಸಿರದ ಈ ದಿಗ್ಗಜ ವ್ಯಕ್ತಿ

ಈಗಾಗಲೇ ಕೆಲ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ನೀವು ಯಾರೂ ಊಹಿಸಿರದ ದಿಗ್ಗಜರೊಬ್ಬರು ಈ ಬಾರಿ ದೊಡ್ಮನೆಯೊಳಗೆ ಪ್ರವೇಶ ಪಡೆಯಲಿದ್ದಾರಂತೆ. ಅವರು ಬೇರೆ ಯಾರೂ ಅಲ್ಲ ವಿಶ್ವದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್. ಹೌದು, ವಿಶ್ವ ಶ್ರೇಷ್ಠ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರನ್ನು ಹಿಂದಿ ಬಿಗ್ ಬಾಸ್ 19 ಶೋಗೆ ಕರೆತರಲು ತಯಾರಿ ನಡೆದಿವೆಯಂತೆ.

ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಯಾರೂ ಊಹಿಸಿರದ ವ್ಯಕ್ತಿ

Bigg Boss

Profile Vinay Bhat Aug 22, 2025 3:35 PM

ಪ್ರತಿ ವರ್ಷದಂತೆ, ಈ ವರ್ಷವೂ ಸಲ್ಮಾನ್ ಖಾನ್ (Salma Khan) ಅವರ ಕಾರ್ಯಕ್ರಮ ಬಿಗ್ ಬಾಸ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಬಾರಿಯ ಬಿಗ್ ಬಾಸ್​ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಅದೇ ಸಮಯದಲ್ಲಿ, ಈ ವರ್ಷ ಯಾರೆಲ್ಲ ಬಿಗ್ ಬಾಸ್ 19 ರ ಸ್ಪರ್ಧಿಗಳಾಗಿರುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಈಗಾಗಲೇ ಕೆಲ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ನೀವು ಯಾರೂ ಊಹಿಸಿರದ ದಿಗ್ಗಜರೊಬ್ಬರು ಈ ಬಾರಿ ದೊಡ್ಮನೆಯೊಳಗೆ ಪ್ರವೇಶ ಪಡೆಯಲಿದ್ದಾರಂತೆ. ಅವರು ಬೇರೆ ಯಾರೂ ಅಲ್ಲ ವಿಶ್ವದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್. ಹೌದು, ವಿಶ್ವ ಶ್ರೇಷ್ಠ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರನ್ನು ಹಿಂದಿ ಬಿಗ್ ಬಾಸ್ 19 ಶೋಗೆ ಕರೆತರಲು ತಯಾರಿ ನಡೆದಿವೆಯಂತೆ. ತಮ್ಮ 20 ನೇ ವಯಸ್ಸಿನಲ್ಲಿಯೇ ವಿಶ್ವದ ಹೆವಿವೇಯ್ಟ್ ಬಾಕ್ಸರ್ ಚಾಂಪಿಯನ್ ಎನಿಸಿಕೊಂಡಿದ್ದ ಮೈಕ್ ಟೈಸನ್, ಬಾಕ್ಸಿಂಗ್ ಲೋಕದ ದಂತಕಥೆ ಎನ್ನಬಹುದು.

ಇಂತಹ ವ್ಯಕ್ತಿಯನ್ನು ಈಗ ಬಿಗ್ ಬಾಸ್ ಮನೆಯೊಳಗೆ ಕರೆತಂದು ಹೊಸ ರೀತಿಯಲ್ಲಿ ಮನರಂಜನೆ ನೀಡುವುದಕ್ಕೆ ಸಲ್ಮಾನ್ ಖಾನ್‌ನಲ್ಲಿ ಶೋನಲ್ಲಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ನಿಕಟ ಮೂಲಗಳ ಪ್ರಕಾರ, ಅವರ 60 ಪ್ರತಿಶತದಷ್ಟು ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರಂತೆ. ಅವರು ಈ ಕಾರ್ಯಕ್ರಮದ ಭಾಗವಾದರೆ, ಬಿಗ್ ಬಾಸ್ ನೋಡುವುದು ಅಭಿಮಾನಿಗಳಿಗೆ ಒಂದು ಸಂತೋಷದ ಸಂಗತಿಯಾಗಿದೆ. ಅವರು ಕೆಲವು ದಿನಗಳವರೆಗೆ ಅತಿಥಿಯಾಗಿ ಕಾರ್ಯಕ್ರಮಕ್ಕೆ ಪ್ರವೇಶಿಸಲಿದ್ದಾರೆ. ಅಂದರೆ ಅವರ ಪ್ರವೇಶವು ವೈಲ್ಡ್‌ಕಾರ್ಡ್ ಆಗಿರುತ್ತದೆ.

Bhagya Lakshmi Serial: ಕೋಟ್-ಟೈ ಇಲ್ಲದೆ ಆಫೀಸ್ ಬಂದ ಆದೀ: ತಾಂಡವ್​ಗೆ ಶಾಕ್

ಇದರ ಹೊರತಾಗಿ, WWE ಸ್ಟಾರ್ ಅಂಡರ್‌ಟೇಕರ್ ಅವರನ್ನು ಸಹ ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಬಹುದು. ಇಬ್ಬರು ದಿಗ್ಗಜರೊಂದಿಗೆ ತಯಾರಕರು ಮಾತುಕತೆ ನಡೆಸುತ್ತಿದ್ದಾರೆ. ಅಂಡರ್‌ಟೇಕರ್ ನವೆಂಬರ್‌ನಲ್ಲಿ ಬಿಗ್ ಬಾಸ್ 19 ಗೆ ಪ್ರವೇಶಿಸಬಹುದು ಎನ್ನಲಾಗಿದೆ. "ನಾವು ಪ್ರಸ್ತುತ ಮೈಕ್ ಟೈಸನ್ ಮತ್ತು ಅವರ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಪ್ರಸ್ತುತ ಅವರ ಶುಲ್ಕದ ಕುರಿತು ಚರ್ಚೆಗಳು ನಡೆಯುತ್ತಿವೆ. ಒಪ್ಪಂದ ಅಂತಿಮಗೊಂಡರೆ, ಟೈಸನ್ ಅಕ್ಟೋಬರ್‌ನಲ್ಲಿ ಒಂದು ವಾರ ಅಥವಾ 10 ದಿನಗಳವರೆಗೆ ಪ್ರವೇಶಿಸುತ್ತಾರೆ. ಆದಾಗ್ಯೂ, ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ" ಎಂದು ಮೂಲಗಳು ತಿಳಿಸಿವೆ.