ಬೆಂಗಳೂರು: ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arunkumar) ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಛನದಲ್ಲಿ ತಮ್ಮ ಮೊದಲ ಚಿತ್ರವಾಗಿ ʼಕೊತ್ತಲವಾಡಿʼ ಚಿತ್ರವನ್ನು (Kothalavadi Movie) ನಿರ್ಮಿಸಿದ್ದರು. ಆ ಚಿತ್ರ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗ ವಿಜಯ ದಶಮಿಯ ಶುಭದಿನದಂದು PA ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಈ ಚಿತ್ರವನ್ನೂ ʼಕೊತ್ತಲವಾಡಿʼ ನಿರ್ದೇಶಕ ಶ್ರೀರಾಜ್ ಅವರೇ ನಿರ್ದೇಶಿಸಲಿದ್ದಾರೆ. ಬಹುತೇಕ ʼಕೊತ್ತಲವಾಡಿʼ ಚಿತ್ರದ ತಂತ್ರಜ್ಞರ ತಂಡವೇ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎಂದು ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.
PA ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಅವರು, ನೂತನ ಚಿತ್ರವನ್ನೂ ʼಕೊತ್ತಲವಾಡಿʼ ನಿರ್ದೇಶಕ ಶ್ರೀರಾಜ್ ಅವರೇ ನಿರ್ದೇಶಿಸಲಿದ್ದಾರೆ ಎಂದು ಹೇಳಿದರು. ಸದ್ಯದಲ್ಲೇ ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Rocking Star Yash: ಟಾಕ್ಸಿಕ್ ಸಿನಿಮಾ ಪ್ರಚಾರಕ್ಕಾಗಿ ಲಂಡನ್‌ಗೆ ತೆರಳಿದ್ರಾ ರಾಕಿಂಗ್ ಸ್ಟಾರ್ ಯಶ್!