ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rocking Star Yash: ಟಾಕ್ಸಿಕ್ ಸಿನಿಮಾ ಪ್ರಚಾರಕ್ಕಾಗಿ ಲಂಡನ್‌ಗೆ ತೆರಳಿದ್ರಾ ರಾಕಿಂಗ್ ಸ್ಟಾರ್ ಯಶ್!

Toxic movie: 'ಟಾಕ್ಸಿಕ್' ಸಿನಿಮಾದ ಆ್ಯಕ್ಷನ್ ಸೀನ್‌ಗಳನ್ನು ಮುಂಬೈನಲ್ಲಿ ಚಿತ್ರೀಕರಿಸಿದ ಬಳಿಕ ಟಾಕ್ಸಿಕ್ ಸಿನಿಮಾ ತಂಡದ ಜೊತೆಗೆ ನಟ ಯಶ್ ಅವರು ಲಂಡನ್ ಗೆ ತೆರಳಿದ್ದಾರೆ. ಹಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತರಾದಂತಹ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರು ಟಾಕ್ಸಿಕ್ ಸಿನಿಮಾದ ಆ್ಯಕ್ಷನ್ ಸಿಕ್ವೆನ್ಸ್ ನಲ್ಲಿ ಭಾಗಿಯಾಗಿದ್ದು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಟಾಕ್ಸಿಕ್ ಸಿನಿಮಾಕ್ಕಾಗಿ ಲಂಡನ್‌ಗೆ ತೆರಳಿದ ನಟ ರಾಕಿಂಗ್ ಸ್ಟಾರ್ ಯಶ್!

ಯಶ್ -

Profile Pushpa Kumari Sep 19, 2025 6:37 PM

ಬೆಂಗಳೂರು: ಕಿರಾತಕ, ಗೂಗ್ಲಿ, ಮಾಸ್ಟರ್ ಪೀಸ್, ಮೊಗ್ಗಿನ ಮನಸ್ಸು, ರಾಜಧಾನಿ, ರಾಮಾಚಾರಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಅವರ ನಟನೆಯ ಕೆಜಿಎಫ್ ಸಿನಿಮಾವು ಎರಡು ಭಾಗಗಳಲ್ಲಿ ತೆರೆ ಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡಮಟ್ಟಿಗೆ ಸದ್ದು ಮಾಡಿ ಬಾಕ್ಸ್ ಆಫೀಸ್ ಹಿಟ್ ಲಿಸ್ಟ್ ಸೇರಿದ್ದ ಸಿನಿಮಾ ಆಗಿತ್ತು. ‌ಈ ಸಿನಿಮಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು , ಕೀರ್ತಿ ತಂದುಕೊಟ್ಟಿದ್ದು ಇದಾದ ಬಳಿಕ ಯಾವ ಸಿನಿಮಾದಲ್ಲಿಯೂ ಅವರು ತೆರೆ ಮೇಲೆ ಬಂದಿಲ್ಲ. ಸದ್ಯ ಅವರ ನಟನೆಯ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾ ಶೂಟಿಂಗ್ ಹಂತದಲ್ಲಿದೆ.

ಈ ಎರಡು ಸಿನಿಮಾಗಳು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಯಶ್ ಅವರು ನಟಿಸಿ ನಿರ್ಮಾಣ ಮಾಡುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಹುದೊಡ್ಡ ತಾರಾ ಗಣ ಇದ್ದು ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಹೊಸ ದಾಖಲೆ ಮಾಡುತ್ತದೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ 45 ದಿನಗಳಿಂದ ಮುಂಬೈನಲ್ಲಿ ಶೂಟಿಂಗ್ ಮುಗಿಸಿ, ಬಳಿಕ ಲಂಡನ್‌ಗೆ ತೆರಳಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ತೆರೆ ಮೇಲೆ ತರಲು ಈಗಾಗಲೇ ನಟ ಯಶ್ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

'ಟಾಕ್ಸಿಕ್' ಸಿನಿಮಾದ ಆ್ಯಕ್ಷನ್ ಸೀನ್‌ಗಳನ್ನು ಮುಂಬೈನಲ್ಲಿ ಚಿತ್ರೀಕರಿಸಿದ ಬಳಿಕ ಟಾಕ್ಸಿಕ್ ಸಿನಿಮಾ ತಂಡದ ಜೊತೆಗೆ ನಟ ಯಶ್ ಅವರು ಲಂಡನ್ ಗೆ ತೆರಳಿದ್ದಾರೆ. ಹಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ಖ್ಯಾತರಾದಂತಹ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರು ಟಾಕ್ಸಿಕ್ ಸಿನಿಮಾದ ಆ್ಯಕ್ಷನ್ ಸಿಕ್ವೆನ್ಸ್ ನಲ್ಲಿ ಭಾಗಿ ಯಾಗಿದ್ದು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಚಿತ್ರದ ಬಹುಭಾಗದ ಶೂಟಿಂಗ್ ಮುಂಬೈನಲ್ಲಿ ಚಿತ್ರೀಕರಿಸಿದ್ದ ಬಳಿಕ ಟಾಕ್ಸಿಕ್ ಸಿನಿಮಾ ತಂಡವು ವಿದೇಶದಲ್ಲಿ ಶೂಟಿಂಗ್ ಮುಂದುವರೆಸಿದೆ. ಆ ಬಳಿಕ ಕೊನೆ ಹಂತದ ಶೂಟಿಂಗ್ ಗಾಗಿ ಮತ್ತೆ ಬೆಂಗಳೂರಿನಲ್ಲಿ ಶೂಟಿಂಗ್ ಕಾರ್ಯ ಮುಂದುವರಿಯಲಿದೆ ಎಂಬ ಬಗ್ಗೆ ಚಿತ್ರತಂಡದ ಮೂಲದಿಂದ ಮಾಹಿತಿ ಬಂದಿದೆ.

ಟಾಕ್ಸಿಕ್ ಸಿನಿಮಾದ ಕೊನೆ ಹಂತದ ಶೂಟಿಂಗ್ ಗಳು ಮುಕ್ತಾಯವಾಗಿ ಆ ಬಳಿಕ ಪೋಸ್ಟ್ ಪ್ರೊಡ ಕ್ಷನ್ ಕೆಲಸ ಕಾರ್ಯ, ಎಡಿಟಿಂಗ್ ಎಲ್ಲವೂ ಮಾಡಲಾಗುವುದು. ಇದೇ ಸೆಪ್ಟೆಂಬರ್ ಕೊನೆಯ ವಾರದಲ್ಲಿ 'ಟಾಕ್ಸಿಕ್' ತಂಡ ಬೆಂಗಳೂರಿಗೆ ಬರುತ್ತಿದ್ದು, ಅಕ್ಟೋಬರ್ ಒಳಗೆ ಶೂಟಿಂಗ್ ಪೂರ್ಣ ಗೊಳಿಸಲು ಯೋಜನೆ ರೂಪಿಸಿದೆಯಂತೆ. ಆ ಮೂಲಕ ಅಧಿಕೃತವಾಗಿ ಶೂಟಿಂಗ್ ಮುಕ್ತಾಯ ವಾದಂತೆ ಆಗಲಿದೆ.

ಲಂಡನ್‌ಗೆ ಹೋಗಿದ್ಯಾಕೆ?

ನಟ ಯಶ್ ಅವರು ತಮ್ಮ ಟಾಕ್ಸಿಕ್ ಸಿನಿಮಾಕ್ಕಾಗಿ ಲಂಡನ್ ಗೆ ಯಾಕೆ ಹೋಗಿದ್ದಾರೆ ಎಂಬ ಬಗ್ಗೆ ಕೂಡ ಸೋಶಿಯಲ್ ಮಿಡಿಯಾದಲ್ಲಿ ಅನೇಕ ಚರ್ಚೆ ಏರ್ಪಡುತ್ತಿದೆ. ಮಾಹಿತಿ ಪ್ರಕಾರ ನಟ ಯಶ್ ಅವರು ತಮ್ಮ 'ಟಾಕ್ಸಿಕ್' ಸಿನಿಮಾವನ್ನು ಗ್ಲೋಬಲ್ ಲೆವೆಲ್ ಗೆ ತರುವ ಉದ್ದೇಶ ದಿಂದಲೇ ಲಂಡನ್ ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಲಂಡನ್ ನಲ್ಲಿ ಗ್ಲೋಬಲ್ ಪಾರ್ಟ್ನರ್‌ಶಿಪ್‌ ಬಗ್ಗೆ ಪ್ರಮುಖ ಕಂಪನಿಗಳ ಜೊತೆ ಮಾತುಕತೆ ನಡೆಸುವುದಕ್ಕೆ ಅವರು ತೆರಳಿದ್ದು ಅಲ್ಲಿಯೇ ಕೆಲವು ಶೂಟಿಂಗ್ ಕೆಲಸ ಕೂಡ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:Niranjan Yashaswini: ಎಂಟು ವರ್ಷಗಳ ಬಳಿಕ ಗುಡ್ ನ್ಯೂಸ್ ಕೊಡಲು ಮುಂದಾದ ನಿರಂಜನ್ ದಂಪತಿ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ , ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಟಾಕ್ಸಿಕ್ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್‌ನ ಕೆ.ನಾರಾಯಣ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ನ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಕರೀನಾ ಕಪೂರ್, ಕೈರಾ ಅದ್ವಾನಿ, ಹುಮಾ ಖುರೇಷಿ, ನಯನತಾರ ಸೇರಿದಂತೆ ಹಲವರು ಸ್ಟಾರ್ ಸೆಲೆಬ್ರಿಟಿಗಳು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. 2026ರ ಮಾರ್ಚ್ 19ಕ್ಕೆ ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ರಿಲೀಸ್ ಆಗಲಿದೆ.