ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಕೇಳಿದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು!
ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಜಪಾನ್ ಓಪನ್ ಸೂಪರ್-750 ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಎರಡು ವರ್ಷಗಳ ಸುದೀರ್ಘ ಫಾರ್ಮ್ ಕೊರತೆಯ ನಂತರ ಯಮಗುಚಿ ವಿರುದ್ಧ ಭರ್ಜರಿ ಜಯ ಗಳಿಸಿದ ಸಿಂಧು ಅವರಿಗೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
-
ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಪ್ರತಿಷ್ಠಿತ ಜಪಾನ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ‘ಮೊಟ್ಟಮೊದಲ ಭಾರತೀಯ ಕ್ರೀಡಾಪಟು’ ಎಂಬ ಐತಿಹಾಸಿಕ ದಾಖಲೆಗೆ ಭಾಜನರಾಗಿದ್ದಾರೆ. ಭಾನುವಾರ (ಜುಲೈ 19) ನಡೆದ ರೋಚಕ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿಂಧು, ಜಪಾನ್‌ನ ಸ್ಟಾರ್ ಶಟ್ಲರ್ ಅಕಾನೆ ಯಮಗುಚಿ ಅವರನ್ನು 21-17, 21-17 ನೇರ ಸೆಟ್‌ಗಳಿಂದ ಮಣಿಸಿ ಕಿರೀಟ ಮುಡಿಗೇರಿಸಿಕೊಂಡರು.
2 ವರ್ಷಗಳ ಬಳಿಕ ಭರ್ಜರಿ ಕಂಬ್ಯಾಕ್
2024ರಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಪ್ರಶಸ್ತಿ ಗೆದ್ದ ನಂತರ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ ಸಿಂಧು, ತೀವ್ರ ಟೀಕೆಗಳನ್ನು ಎದುರಿಸಿದ್ದರು. ಆದರೆ, ದೀರ್ಘ ವಿರಾಮದ ನಂತರ ಆಡಿದ ಮೊದಲ ಫೈನಲ್‌ನಲ್ಲೇ ಹಳೆಯ ಫಾರ್ಮ್‌ಗೆ ಮರಳಿ, ತಾವೇಕೆ ‘ರಿಯಲ್ ಚಾಂಪಿಯನ್’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕ್ರೀಡಾ ಕ್ಷೇತ್ರವಷ್ಟೇ ಅಲ್ಲದೆ, ಚಿತ್ರರಂಗವನ್ನೂ ಅಚ್ಚರಿಗೊಳಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ಭವಿಷ್ಯದಲ್ಲಿ ಬೆಳ್ಳಿಪರದೆಯಲ್ಲಿ ಮಿಂಚಲು, ಮುಖ್ಯವಾಗಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲು ಸಿದ್ಧರಿರುವುದಾಗಿ ಘೋಷಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಟ್ವೀಟ್ ಮಾಡಿ ಹಾರೈಸಿದ ರಾಜಮೌಳಿ
ಹೌದು, ಸಾಧನೆ ಮಾಡಿದ ಸಿಂಧು ಅವರನ್ನು ಅಭಿನಂದಿಸಿ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. "ಇದು ನಿಜವಾದ ಚಾಂಪಿಯನ್ ಕಂಬ್ಯಾಕ್! ನಿಮ್ಮ ಈ ಅದ್ಭುತ ಗೆಲುವಿಗೆ ಶುಭಾಶಯಗಳು ಸಿಂಧು. ಇಡೀ ಭಾರತ ದೇಶವೇ ನಿಮ್ಮನ್ನು ನೋಡಿ ಹೆಮ್ಮೆಪಡುತ್ತಿದೆ" ಎಂದು ರಾಜಮೌಳಿ ಹೊಗಳಿದ್ದರು.
ಜಪಾನ್ ಓಪನ್; ಐತಿಹಾಸಿಕ ಚಿನ್ನ ಗೆದ್ದ ಪಿ.ವಿ ಸಿಂಧು
ನಿಮ್ಮ ಸಿನಿಮಾದಲ್ಲಿ ನಟಿಸಲು ರೆಡಿ
ರಾಜಮೌಳಿ ಅವರ ಅಭಿನಂದನೆಯ ಪೋಸ್ಟ್‌ಗೆ ಪಿ.ವಿ. ಸಿಂಧು ಅಷ್ಟೇ ವೇಗವಾಗಿ ಮತ್ತು ಕುತೂಹಲಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಮೌಳಿ ಅವರಿಗೆ ಧನ್ಯವಾದ ಅರ್ಪಿಸುತ್ತಾ, ಅವರ ನಿರ್ದೇಶನದಲ್ಲಿ ಶೀಘ್ರದಲ್ಲೇ ಬರಲಿರುವ 'ವಾರಣಾಸಿ' ಸಿನಿಮಾಗಾಗಿ ತಾವು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಅವರು ರಾಜಮೌಳಿ ಅವರ ಮುಂದೆ ಕ್ರೇಜಿ ಆಫರ್ ಒಂದನ್ನು ಇಟ್ಟಿದ್ದಾರೆ. ಒಂದು ವೇಳೆ ಭವಿಷ್ಯದಲ್ಲಿ ನಿಮ್ಮ ಕಥೆಗಳಲ್ಲಿ ಎಂದಾದರೂ ಬ್ಯಾಡ್ಮಿಂಟನ್ ಆಟಗಾರ್ತಿಯ ಹಿನ್ನೆಲೆ ಇರುವ ಪಾತ್ರದ ಅಗತ್ಯ ಬಂದರೆ, ನಿಮ್ಮ ಹೊಸ ಸಿನಿಮಾದಲ್ಲಿ ನಟಿಸಲು ನಾನು ಯಾವಾಗಲೂ ಸಿದ್ಧ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಪ್ರಸ್ತುತ ರಾಜಮೌಳಿ ಮತ್ತು ಸಿಂಧು ನಡುವೆ ನಡೆದ ಈ ಸೋಶಿಯಲ್ ಮೀಡಿಯಾ ಸಂಭಾಷಣೆ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ಭಾರತದ 15 ವರ್ಷಗಳ ಕಾಯುವಿಕೆಗೆ ಅಂತ್ಯ; ಜಪಾನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ ಪಿ.ವಿ ಸಿಂಧು
ಪಿ ವಿ ಸಿಂಧು ಅವರ ಟ್ವೀಟ್
Thank you so much, Rajamouli Garu. ❤️ Eagerly waiting for Varanasi, sir!
— PV Sindhu (@Pvsindhu1) July 19, 2026
And if you ever need to a badminton player in one of your films… I’d be more than happy to become your newest “actress.” 😂🙏@ssk1122 https://t.co/tLoFxf5cLx
ಪಿ. ವಿ. ಸಿಂಧು ಭರ್ಜರಿ ಕಂಬ್ಯಾಕ್
ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸಿಂಧು ವಿಜೇತರಾಗಿ ಹೊರಹೊಮ್ಮಿ ಸುಮಾರು ಎರಡು ವರ್ಷಗಳಾಗಿದ್ದವು. ಹಿಂದೆ 2024ರಲ್ಲಿ ಅವರು ಸೈಯದ್ ಮೋದಿ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆ ನಂತರ ಅವರು ಫಾರ್ಮ್ ಕಳೆದುಕೊಂಡು, ಕನಿಷ್ಠ ಫೈನಲ್‌ಗೂ ತಲುಪಲು ಸಾಧ್ಯವಾಗದೆ ಟೀಕೆಗಳನ್ನು ಎದುರಿಸಿದ್ದರು. ಆದರೆ ಆ ಎಲ್ಲ ಟೀಕೆಗಳಿಗೆ ಉತ್ತರಿಸುವಂತೆ, ದೀರ್ಘ ವಿರಾಮದ ನಂತರ ಆಡಿದ ಮೊದಲ ಫೈನಲ್ ಪಂದ್ಯದಲ್ಲೇ ತಮ್ಮ ಹಳೆಯ ಫಾರ್ಮ್ ಅನ್ನು ಪೂರ್ಣ ಪ್ರಮಾಣದಲ್ಲಿ ಪ್ರದರ್ಶಿಸಿ ಜಪಾನ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.