R Madhavan: ಪುತ್ರನಿಗೆ ಬದುಕಿನ ಪಾಠ ಕಲಿಸಿ ಕೊಟ್ಟ ನಟ ಮಾಧವನ್!
ಮಗನ ಸಾಧನೆಗೆ ತಂದೆ ಆರ್ ಮಾಧವನ್ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಮಗನ ಆಸಕ್ತಿ ವಿಷಯಕ್ಕೆ ಅಧಿಕ ಆಧ್ಯತೆ ನೀಡುತ್ತಾ ಬಂದ ಕಾರಣ ಮಗನ ಸಾಧನೆಗೆ ಬೆಂಗಾವಲಾಗಿದ್ದಾರೆ ಎನ್ನಬಹುದು.ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ವೇದಾಂತ್ ಅವರಿಗೆ ಮುಂದಿನ ಜೀವನದ ಸವಾಲುಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ

R Madhavan

ನವದೆಹಲಿ: ಬಹುಭಾಷಾ ನಟರಾದ ಆರ್.ಮಾಧವನ್ (R Madhavan) ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮಾಧವನ್ ತನ್ನ ಮಗನ ಸಾಧನೆಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ. ಮಗ ವೇದಾಂತ್ ರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು ಒಲಿಂಪಿಕ್ಸ್ 2026ಕ್ಕೆ ತಯಾರಿ ನಡೆಸುತ್ತಿದ್ದಾರೆ.
ಮಗನ ಸಾಧನೆಗೆ ತಂದೆ ಆರ್.ಮಾಧವನ್ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿಕ್ಕಂದಿನಿಂದಲು ಮಗನ ಆಸಕ್ತಿ ವಿಷಯಕ್ಕೆ ಅಧಿಕ ಆಧ್ಯತೆ ನೀಡುತ್ತಾ ಬಂದ ಕಾರಣ ಮಗನ ಸಾಧನೆಗೆ ಬೆಂಗಾವಲಾಗಿದ್ದಾರೆ ಎನ್ನಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ವೇದಾಂತ್ ಅವರಿಗೆ ಮುಂದಿನ ಜೀವನದ ಸವಾಲುಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಏನಂದ್ರು ಆರ್.ಮಾಧವನ್?
ಆರ್. ಮಾಧವನ್ ಅವರ ಪುತ್ರ ವೇದಾಂತ್ ಅವರು ಪ್ರಖ್ಯಾತ ಈಜುಗಾರರಾಗಿದ್ದು ಅನೇಕ ಪ್ರಶಸ್ತಿ ಪಡೆದಿದ್ದಾರೆ. ಹೀಗಾಗಿ ಜನರಿಗೆ ಈಗ ತಮ್ಮ ಮಗನ ಲೈಫ್ ಸ್ಟೈಲ್ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಎಂಬುದು ತಿಳಿದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಗುರುತಿಸಬಹುದಾದ ಸಾಧನೆಯ ಜೊತೆಗೆ ಮುಂಬರುವ ಸವಾಲುಗಳ ಬಗ್ಗೆ ಕೂಡ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ತನ್ನ ಮಗನಿಗೆ ಬೇಕಾದ ಪ್ರೋತ್ಸಾಹ ಸವಲತ್ತನ್ನು ನಾನು ನೀಡಿರುವೆ. ಇದು ಅದೃಷ್ಟವೂ ಆಗಬಹುದು ದುರಾದೃಷ್ಟವೂ ಆಗಬಹುದು ಎಂಬ ಮಾರ್ಗದರ್ಶನದ ಪಾಠವನ್ನು ನನ್ನ ಮಗನಿಗೆ ಹೇಳಬಯಸುತ್ತೇನೆ. ಇನ್ನು ಮುಂದೆ ನನ್ನ ಮಗನಿಗೆ ಯಾವುದೋ ಸಿಕ್ಕ ಸಿಕ್ಕ ಹಾಸಿಗೆಯಲ್ಲಿ ಅಂಗಿ ಕಳಚಿ ಮಲಗಲು ಸಾಧ್ಯವಿಲ್ಲ. ಒಂದು ವೇಳೆ ಈ ರೀತಿ ಮಾಡಿದರೂ ಅಂತಹದೊಂದು ಫೋಟೋ ಯಾರಿಗಾರದೂ ಸಿಕ್ಕರೆ ಅದು ರಾಷ್ಟ್ರೀಯ ಸುದ್ದಿಯಾಗಬಹುದು.
ಇಂತಹ ಪ್ರಿವಿಲೇಡ್ಜ್ ಜೀವನದ ಬಗ್ಗೆ ಎಚ್ಚರ ವಹಿಸಬೇಕು. ನಿಮ್ಮ ಉಳಿದ ಸ್ನೇಹಿತರಂತೆ ನೀವು ಕೂಡ ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಜೊತೆಗೆ ಇತರರಿಗೆ ಪ್ರೇರಣೆಯಾಗಬೇಕು ಎಂದು ತಮ್ಮ ಮಗ ವೇದಾಂತ್‌ಗೆ ನಟ ಆರ್. ಮಾಧವನ್ ಅವರು ಕಿವಿಮಾತು ಹೇಳಿದ್ದಾರೆ. ಕೆಲವರು ನಮ್ಮ ಸಿನೆಮಾ ಸಾಧನೆ ಕಂಡು ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನು ಕೆಲವರು ನಮ್ಮನ್ನು ವೇದಾಂತ್ ಅವರ ತಂದೆ ಎಂದು ಗುರುತಿಸುವುದು ನಮಗೆ ಮತ್ತಷ್ಟು ಹೆಮ್ಮೆತಂದಿದೆ ಎಂದು ನಟ ಆರ್. ಮಾಧವನ್ ಅವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ತಿಳಿಸಿದ್ದಾರೆ.
ವೇದಾಂತ್ ಗೆ ಸಾಧನೆಯ ಗರಿ:
ಆರ್. ಮಾಧವನ್ ಅವರು ತಮ್ಮ ಮಗ ವೇದಾಂತ್ ಅವರಿಗೆ ಕ್ರೀಡಾ ಸಾಧನೆಗೆ ಬೆಂಗಾವಲಾಗಿದ್ದಾರೆ. ವೇದಾಂತ್ ಅವರು ಈಜುಗಾರರಾಗಿದ್ದು ಮಲೇಷಿಯಾದ ಓಪನ್ ನಲ್ಲಿ 5 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಡ್ಯಾನಿಶ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ವಿಜೇತ ರಾಗಿದ್ದಾರೆ. ಲಟ್ವಿಯನ್ ಹಾಗೂ ಥೈಲ್ಯಾಂಡ್ ಓಪನ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಈ ಮೂಲಕ ಪ್ರಭಾವ ಶಾಲಿ ದಾಖಲೆಯನ್ನು ಹೊಂದಿದ್ದು ಇವರ ಸಾಧನೆ ಗರಿ ಎಲ್ಲರಿಗೂ ಸ್ಫೂರ್ತಿ ಎನ್ನಬಹುದು.
ಇದನ್ನು ಓದಿ: Madhugiri News: ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಪರಾರಿಯಾದ ದಂಪತಿ!
ಆರ್. ಮಾಧವನ್ ಅವರು ಮುಂಬರುವ ಸಿನಿಮಾದಲ್ಲಿ ಕಂಗನಾ ರಣಾವತ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ತಲೈವಿಯ ನಿರ್ದೇಶಕ ವಿಜಯ್ ಅವರು ಈ ಸಿನೆಮಾ ನಿರ್ದೇಶನ ಮಾಡಲಿದ್ದು,ನೀರವ್ ಶಾ ಛಾಯಾಗ್ರಾಹಕರಾಗಿ ಕೆಲಸಮಾಡಲಿದ್ದಾರೆ. ಆರ್. ರವೀಂದ್ರನ್ ಅವರು ಈ ಸಿನೆಮಾ ನಿರ್ಮಾಪಕರಾಗಿದ್ದು ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನೆಮಾ ಎಂದು ತಿಳಿದು ಬಂದಿದೆ. ಈ ನಡುವೆ ತನು ವೆಡ್ಸ್ ಮನು 3 ಕೂಡ ರೆಡಿ ಆಗ್ತಿದೆ ಎಂಬ ಮಾತು ಕೇಳಿಬರುತ್ತಿದೆ.