‘ಸು ಫ್ರಂ ಸೋ’ ಸಿನಿಮಾ ಇಂಡಸ್ಟ್ರಿ ಹಿಟ್ ಆದ ಬಳಿಕ, ರಾಜ್ ಬಿ ಶೆಟ್ಟಿ (Raj B Shetty) ನಟಿಸಿರುವ ‘45’ ಸಿನಿಮಾವೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಒಂದರ ನಂತರ ಒಂದಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು, ರಾಜ್ ತಮ್ಮದೇ ಆದ ಶೈಲಿಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ (Rakkasapuradhol) ಬಿಡುಗಡೆಗೆ (Release) ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ವಿಭಿನ್ನ ಅವತಾರ ತಾಳಿದ್ದಾರೆ. ‘45’ ಸಿನಿಮಾದಲ್ಲಿ (45 Cinema) ತಮ್ಮ ಅಭಿನಯದಿಂದ ಗಮನ ಸೆಳೆದಿರುವ ರಾಜ್, ಈಗ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೊಳ್ಳೇಗಾಲವನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಸ್ಟೋರಿ ಆಗಿದ್ರು, ಇದು ಒಬ್ಬ ವ್ಯಕ್ತಿಯ ಒಳಗಿನ ದೈತ್ಯನ ಬಗ್ಗೆ ಒಂದು ಕಥೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳಿರತ್ತೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಟೀಸರ್‌ನಲ್ಲಿ ಇದನ್ನು ಬಹುಮುಖ್ಯವಾಗಿ ತೋರಿಸಲಾಗಿದೆ.
ಇದನ್ನೂ ಓದಿ: Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾನೆ ಕಾರಣ; ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ!
ರವಿ ಸಾರಂಗ ಆ್ಯಕ್ಷನ್-ಕಟ್
ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿರೀಕ್ಷೆ ಮೂಡಿಸಿರುವ ‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದುವರೆಗೆ ‘ರಕ್ಕಸಪುರದೋಳ್’ ಸಿನಿಮಾದ ಯಾವುದೇ ದೃಶ್ಯ ಅಥವಾ ವಿಡಿಯೋ ಕಂಟೆಂಟ್ ಬಿಡುಗಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್‌ನಲ್ಲಿ ಹೈಲೈಟ್ ಆಗಿವೆ. ‘ರಕ್ಕಸಪುರದೋಳ್’ ಸಿನಿಮಾವನ್ನು ರವಿಸಾರಂಗ್ ನಿರ್ದೇಶನ ಮಾಡುತ್ತಿದ್ದು, ಡಾ. ಕೆ. ರವಿವರ್ಮ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ವಿಭಿನ್ನ ಕಥೆ ಮತ್ತು ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾದ ರಾಜ್ ಬಿ ಶೆಟ್ಟಿ, ಈ ಸಿನಿಮಾದಲ್ಲೂ ಏನಾದರೂ ವಿಶೇಷ ನೀಡಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ.ಒಟ್ಟಾರೆ ಸಿನಿಮಾ ಹೇಗಿರಲಿದೆ ಎಂಬುದರ ಝಜಲ್ ಈ ಟೀಸರ್‌ನಲ್ಲಿ ಕಾಣಿಸಿದೆ.