ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎರಡನೇ ರನ್ನರ್ ಅಪ್ ಆಗಿರುವ ರಜತ್ ಕಿಶನ್ ಅವರು ವಿಶ್ವವಾಣಿ ಜೊತೆ ಕೆಲ ವಿಚಾರಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಮುಖ್ಯವಾಗಿ ಇವರು ಬಿಗ್‌ ಬಾಸ್‌ ಮನೆಯೊಳಗೆ ಇದ್ದಾಗ ಹೊರಗಡೆ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್‌ ಆದ ಬಗ್ಗೆ ಮಾತನಾಡಿದ್ದಾರೆ.

ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್

Rajath Kishan

Profile Vinay Bhat Jan 30, 2025 7:07 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದೆ. ಹಳ್ಳಿ ಹೈದ ಹನುಮಂತ ವಿನ್ನರ್ ಆಗಿದ್ದು, ಮಾಸ್ಟರ್ ತ್ರಿವಿಕ್ರಮ್ ಅವರು ಫಸ್ಟ್ ರನ್ನರ್ ಅಪ್, ರಜತ್ ಕಿಶನ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜನರಿನ್ನೂ ಬಿಗ್ ಬಾಸ್ ಗುಂಗಿನಿಂದ ಹೊರಬರುತ್ತಿಲ್ಲ. ಕೆಲವರು ಶೋ ಮುಗಿಯಿತಲ್ಲ ಇನ್ನೇನು ನೋಡೋದು ಎಂಬ ಬೇಸರದಲ್ಲಿದ್ದಾರೆ. ಇದರ ಮಧ್ಯೆ ಬಿಬಿಕೆ 11ನ ಫಿನಾಲೆ ಸ್ಪರ್ಧಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದರಲ್ಲಿ‌ ಬ್ಯುಸಿಯಾಗಿದ್ದಾರೆ.

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎರಡನೇ ರನ್ನರ್ ಅಪ್ ಆಗಿರುವ ರಜತ್ ಕಿಶನ್ ಅವರು ವಿಶ್ವವಾಣಿ ಜೊತೆ ಕೆಲ ವಿಚಾರಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಮುಖ್ಯವಾಗಿ ಇವರು ಬಿಗ್‌ ಬಾಸ್‌ ಮನೆಯೊಳಗೆ ಇದ್ದಾಗ ಹೊರಗಡೆ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್‌ ಆದ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜತ್, ಏನೂ ತೊಂದ್ರೆ ಇಲ್ಲ.. ಇದನ್ನೆಲ್ಲ ಮಾಡಿರೋರು ಯಾರು ಅಂತ ನನ್ಗೆ ಗೊತ್ತು. ಅವ್ಳು ಒಂದು ಹೆಂಗಸು. ನಂದು ಏನಾದ್ರು ಹಾಕೋಳಿ ಅವಳು ಆದ್ರೆ ಇದ್ರಲ್ಲಿ ಒಂದು ಹುಡುಗಿ ಜೀವನ ಇದೆ.. ಅವಳಿಗೆ ಫ್ಯಾಮಿಲಿ ಇರುತ್ತೆ.. ಬಟ್ ಮಾಡ್ಕೊಳ್ಳಿ ತೊಂದ್ರೆ ಇಲ್ಲ.. ನನ್ನ ಕೇಳಿದ್ರೆ ಇನ್ನೂ ಒಳ್ಳೆ ಫೋಟೋಸ್ ಕಳುಹಿಸುತ್ತಿದ್ದೆ. ಈತರ ಮಾಡೋದು ಎಷ್ಟರ ಮಟ್ಟಿಗೆ ಸರಿ ಅಂತ ಅವರವರೇ ತಿಳ್ಕೋಬೇಕು. ಅವರು ಪಾಡಿಗೆ ಅವರು ಮಾಡಲಿ, ನನ್ನ ಪಾಡಿಗೆ ಹೇಗೆ ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ಹೇಳಿದ್ದಾರೆ.



ನಂದು ಹಳೇ ಕಥೆಗಳಿವೆ ಜೀವನದಲ್ಲಿ.. ನಾವು ಮನುಷ್ಯರೆ ದೇವರುಗಳಲ್ಲ.. ನೀವು ಯೋಚನೆ ಮಾಡಿ ಈ ತರ ಏನಾದ್ರು ಮಾಡಿ, ಯಾಕಂದ್ರೆ ನಾನು ತಲೆಕೆಟ್ಕೊಂಡು ನಿಮ್ಮ ಅಪೊಸಿಟ್ ನಿತ್ಕೊಂಡೆ ಅಂದ್ರೆ ನಿಮ್ದೆಲ್ಲ ಹೊರಗಡೆ ಹಾಕಬೇಕಾಗುತ್ತೆ, ಅದು ಚೆನ್ನಾಗಿರಲ್ಲ. ನನ್ಗೆ ಇದರಿಂದ ಏನೂ ಪ್ರಾಬ್ಲಂ ಆಗಲ್ಲ.. ಆದ್ರೆ ಬೇರೆಯವರಿಗೆ ಲೈಫ್ ಇರುತ್ತೆ ಅದರ ಬಗ್ಗೆ ಯೋಚನೆ ಮಾಡಿ. ನಂದು ಸೋಲೋ ಆಗಿದ್ರೆ ಏನಾದ್ರು ಮಾಡ್ಕೊಳ್ಳಿ ಬಟ್ ಬೇರೆ ಹುಡುಗಿಯ ಜೀವನ ಇದ್ರಲ್ಲಿದೆ. ಆ ರೀತಿ ಮಾಡಬಾರದು. ಎನ್ನುವ ಮೂಲಕ ರಜತ್‌ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

Hanumantha BBK 11: ಧನರಾಜ್ ಆಚಾರ್ ಕೈ ಸೇರಿದ ಹನುಮಂತನಿಗೆ ಸಿಕ್ಕ ಬಿಗ್ ಬಾಸ್ ಟ್ರೋಫಿ