ರಾಜೇಶ್ ಧ್ರುವ (Rajesh Dhruva) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ಅಖಿಲ್' ಪಾತ್ರ ನಿವ್ಹಿಸುವ ಮೂಲಕ ಖ್ಯಾತಿ ಪಡೆದರು. ನಂತರ ಅರಮನೆ ಗಿಣಿ ಧಾರವಾಹಿಯಲ್ಲಿ ಅಭಿನಯಿಸಿದರು. ಇದೀಗ ನಟ ಎಂಗೇಜ್ ಆಗಿದ್ದಾರೆ. "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಚಿತ್ರಕ್ಕೆ ನಾಯಕ ನಟಿಯ ಹುಡುಕಾಟದ ಸಂದರ್ಭದಲ್ಲಿ ಸಿಕ್ಕವರೇ ಮುಂದೆ ನನ್ನ ಬಾಳ ಸಂಗಾತಿ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ರಾಜೇಶ್ ಧ್ರುವ 2023ರಲ್ಲಿ ತೆರೆಕಂಡ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್
ಈ ಬಗ್ಗೆ ನಟ ಫೋಟೋ ಹಂಚಿಕೊಂಡು, ಒಂದು ವಿಷ್ಯ ಹೇಳ್ಬೇಕಿತ್ತು ಅಂದ್ನಲ್ಲ...ಅದೇನಂದ್ರೆ... ನನ್ನ ಮೊದಲ ಸಿನೆಮಾ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಚಿತ್ರಕ್ಕೆ ನಾಯಕ ನಟಿಯ ಹುಡುಕಾಟದ ಸಂದರ್ಭದಲ್ಲಿ ಸಿಕ್ಕವರೇ ಮುಂದೆ ನನ್ನ ಬಾಳ ಸಂಗಾತಿ ಆಗ್ತಾರೆ ಅಂತ ಅಂದುಕೊಂಡಿರ್ಲಿಲ್ಲ. ಆಗ ನನ್ನ ಚಿತ್ರದಲ್ಲಿ ನಾಯಕಿ ಆಗಿ ಪರಿಚಯಿಸಿದ "ರಾಧಿಕಾ ಅಚ್ಯುತ ರಾವ್" ರವರನ್ನು ಈಗ ನನ್ನ ಬಾಳ ಸಂಗಾತಿಯಾಗಿ ನಿಮ್ಮೆಲ್ಲರಿಗೂ ಮರು ಪರಿಚಯಿಸುತ್ತಿದ್ದೇನೆ. ಗುರು ಹಿರಿಯರ ಸಮ್ಮತಿ ಹಾಗೂ ಆಶೀರ್ವಾದದೊಂದಿಗೆ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ!. ಈ ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಂತಸ ನಮ್ಮದು .ಸಿನಿಪಯಣ to ಬಾಳಪಯಣ . ನಿಮ್ಮ ಹಾರೈಕೆ - ಆಶೀರ್ವಾದ ಎಂದಿನಂತೆ ನಮ್ಮೊಂದಿಗೆ ಇರಲಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಈ ವಾರ ದೊಡ್ಮನೆಯಲ್ಲಿ ತಂತ್ರ, ಪ್ರತಿತಂತ್ರ ಜೊತೆಗೆ ಸ್ವಲ್ಪ ಕುತಂತ್ರ!
ರಾಧಿಕಾ ಅಚ್ಯುತ ರಾವ್ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಉದಯೋನ್ಮುಖ ನಟಿ ಮತ್ತು ನಿರ್ದೇಶಕಿಇವರು ಕನ್ನಡದ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸೇರಿದಂತೆ ಇತ್ತೀಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ತೆಲುಗಿನ 'ಭೂತಂ ಪ್ರೇತಂ' ಮುಂತಾದ ಮುಂಬರುವ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.ರಾಧಾ ಕಲ್ಯಾಣ' ಸೇರಿದಂತೆ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಇವರು ಪರಿಚಿತರಾಗಿದ್ದಾರೆ.