ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಪಾತಾಳಕ್ಕೆ ಕುಸಿದ ಸೀತಾ ರಾಮ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಯಾವುದು?

11ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್ಪಿ ಕುಸಿದಿದೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.

ಪಾತಾಳಕ್ಕೆ ಕುಸಿದ ಸೀತಾ ರಾಮ ಧಾರಾವಾಹಿ ಟಿಆರ್​ಪಿ

Kannada Serial TRP

Profile Vinay Bhat Mar 28, 2025 4:30 PM

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್​ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.

ಇದೀಗ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್​ಪಿ ಕುಸಿದಿದೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.

ಕನ್ನಡದ ನಂಬರ್ 1 ಸೀರಿಯಲ್ ಯಾವುದು?

11ನೇ ವಾರದ ಸೀರಿಯಲ್ ಟಿಆರ್​ಪಿ ಲೆಕ್ಕಾಚಾರ ನೋಡೋದಾದರೆ ಮೊದಲ ಸ್ಥಾನದಲ್ಲಿ ಅಣ್ಣಯ್ಯ ಧಾರಾವಾಹಿ ಇದೆ. ಇದು 8.4 ಟಿವಿಆರ್ ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೆ. ಇದು 7.7 ಟಿವಿಆರ್ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ ಧಾರಾವಾಹಿಯಿದ್ದು, 7.5 ಟಿವಿಆರ್ ಪಡೆದಿದೆ. ಈ ಧಾರಾವಾಹಿ 10ನೇ ವಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಅಮ್ಮ - ಮಗಳ ಪ್ರೀತಿಯ ಜೊತೆಗೆ, ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಈ ಧಾರಾವಾಹಿ ಒಳಗೊಂಡಿದೆ.

ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸವಿದದು ಇದು ಕ್ರಮವಾಗಿ 7.2 ಟಿವಿಆರ್‌ ದಾಖಲಿಸಿದೆ. ಐದನೇ ಸ್ಥಾನದಲ್ಲಿ ಬ್ರಹ್ಮಗಂಟು ಸೀರಿಯಲ್‌.. ಅದೂ 6.6 ಟಿವಿಆರ್ ಪಡೆದುಕೊಂಡಿದೆ. ಸೀತಾ ರಾಮ ಧಾರಾವಾಹಿಯ ಟಿವಿಆರ್ ಪಾತಾಳಕ್ಕೆ ಕುಸಿದಿದ್ದು, ಕೇವಲ 2.2 ಟಿವಿಆರ್ ಗಳಿಸಿದೆ.

ರಿಯಾಲಿಟಿ ಶೋ ವಿಚಾರಕ್ಕೆ ಬಂದರೆ ಸರಿಗಮಪ ರಿಯಾಲಿಟಿ ಶೋ 9.2 ಟಿವಿಆರ್ ಪಡೆದು ನಂಬರ್ 1 ಸ್ಥಾನದಲ್ಲಿದೆ. ಭರ್ಜರಿ ಬ್ಯಾಚುಲರ್ಸ್ 8.4 ಟಿವಿಆರ್ ದಾಖಲಿಸಿದೆ. ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ 3.4 ಟಿವಿಆರ್‌ ಪಡೆದರೆ, ಸೃಜನ್ ಲೋಕೇಶ್ ನೇತೃತ್ವದ, ಯೋಗರಾಜ್ ಭಟ್ ಸಹ ಇರುವ ಮಜಾ ಟಾಕೀಸ್ ಕಾರ್ಯಕ್ರಮ 2.4 ಟಿವಿಆರ್ ಪಡೆದಿದೆ.

Bhagya Lakshmi Serial: ಟೂರ್ ಹೋಗಲು ಶ್ರೇಷ್ಠಾಳ ಸಹಿ ಪಡೆದ ತನ್ವಿ: ಭಾಗ್ಯಾಗೆ ಗೊತ್ತಾದ್ರೆ ಅಷ್ಟೇ..