ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಸ್ ಕಂಡಕ್ಟರ್ ಟು ʻಸೂಪರ್‌ ಸ್ಟಾರ್ʼ; ಆತ್ಮಕಥೆ ಬರೆಯುತ್ತಿದ್ದಾರೆ ರಜನಿಕಾಂತ್, ಸಿನಿಮಾ ಆಗಲಿದೆಯಾ ʻತಲೈವಾʼ ಬದುಕು?

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಆನಂತ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವ ರಜನಿಕಾಂತ್ ಅವರ ಜೀವನ ಪಯಣ ಈಗ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ರಜನಿಕಾಂತ್ ಪ್ರಸ್ತುತ ತಾವು ಬರೆಯುತ್ತಿರುವ ಆತ್ಮಕಥೆಯನ್ನು ಆಧರಿಸಿ ಬಯೋಪಿಕ್ ನಿರ್ಮಿಸುವ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಇಂದು ಭಾರತೀಯ ಚಿತ್ರರಂಗದ ಅತಿ ದೊಡ್ಡ ಸೂಪರ್‌ ಸ್ಟಾರ್ ಆಗಿ ಹೊರಹೊಮ್ಮಿರುವ ‘ತಲೈವರ್’ ರಜನಿಕಾಂತ್ ಅವರ ಜೀವನ ಪಯಣ ಈಗ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ಕಳೆದ ಕೆಲವು ಸಮಯದಿಂದ ತಮ್ಮ ಆತ್ಮಕಥೆಯನ್ನು ಬರೆಯುವಲ್ಲಿ ನಿರತರಾಗಿರುವ ರಜನಿಕಾಂತ್‌, ಈ ಪುಸ್ತಕ ಆಧರಿಸಿ ಬಯೋಪಿಕ್ ನಿರ್ಮಿಸುವ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಕಥೆಯಲ್ಲಿ ಬಿಚ್ಚಿಡಲಿದೆ ಅಪರೂಪದ ಕ್ಷಣಗಳು

ಮೂಲಗಳ ಪ್ರಕಾರ, ಈ ಆತ್ಮಕಥೆಯು ರಜನಿಕಾಂತ್ ಅವರ ವೈಯಕ್ತಿಕ ಜೀವನ, ವೃತ್ತಿಪರ ಸಾಧನೆಗಳು, ಅಪರೂಪದ ಕ್ಷಣಗಳು ಹಾಗೂ ಅವರು ಎದುರಿಸಿದ ಕಠಿಣ ಸವಾಲುಗಳನ್ನೊಳಗೊಂಡ ಆಳವಾದ ಕಥಾನಕವಾಗಿ ಮೂಡಿಬರಲಿದೆ. ಈ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವ ಕುರಿತು ರಜನಿ ಅವರು ಈಗಾಗಲೇ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರ ಪುತ್ರಿ ಸೌಂದರ್ಯ ರಜನಿಕಾಂತ್, "ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಪಟ್ಟ ಕಷ್ಟಗಳಿಂದ ಹಿಡಿದು ಕಾಲಿವುಡ್‌ನ ಸೂಪರ್‌ಸ್ಟಾರ್ ಆಗುವವರೆಗಿನ ತಮ್ಮ ಜೀವನ ಚರಿತ್ರೆಯನ್ನು ತಂದೆ ಬರೆಯಲು ಪ್ರಾರಂಭಿಸಿದ್ದಾರೆ. ಪ್ರತಿಯೊಂದು ಪಾತ್ರ ಹಾಗೂ ಜೀವನಕ್ಕಾಗಿ ಅವರು ಹಾಕಿದ ಶ್ರಮದ ಒಳನೋಟ ಈ ಪುಸ್ತಕದಲ್ಲಿದ್ದು, ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ" ಎಂದು ತಿಳಿಸಿದ್ದರು.

Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ಐದು ದಶಕಗಳ ಅದ್ಭುತ ಸಾಧನೆ

ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಜನಿಕಾಂತ್‌ ಅವರು ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರರಂಗಗಳಲ್ಲಿ ನಟಿಸಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಕಲಾ ಸೇವೆಯನ್ನು ಗೌರವಿಸಿ ಭಾರತ ಸರ್ಕಾರವು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ರಜನಿಕಾಂತ್‌ ಅವರ ಮುಂದಿನ ಸಿನಿಮಾಗಳು

ಪ್ರಸ್ತುತ ರಜನಿಕಾಂತ್‌ ಅವರ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಅಕ್ಟೋಬರ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನೆಲ್ಸನ್ ದಿಲೀಪ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಸನ್‌ ಪಿಕ್ಚರ್ಸ್‌ ಹಣ ಹಾಕಿದೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇದರ ಜೊತೆಗೆ ನಿರ್ದೇಶಕ ಅಶ್ವಥ್ ಮರಿಮುತ್ತು ಅವರ 'ಧರ್ಮನ್' ಚಿತ್ರದಲ್ಲೂ ರಜನಿಕಾಂತ್‌ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಕಮಲ್‌ ಹಾಸನ್‌ ಅವರು ನಿರ್ಮಾಣ ಮಾಡುತ್ತಿರುವುದು ವಿಶೇಷ.