ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajinikanth: ದೀಪಾವಳಿ ಆಚರಣೆಯ ಸ್ಪೆಷಲ್ ಫೋಟೋ ಶೇರ್ ಮಾಡಿದ ರಜನಿಕಾಂತ್ ಪುತ್ರಿ!

Rajinikanth: ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ತಮ್ಮ ಪುತ್ರಿ ಹಾಗೂ ಪತ್ನಿ ಜೊತೆ ಬೆಳಕಿನ ಹಬ್ಬ ವನ್ನು ಆಚರಣೆ ಮಾಡಿದ್ದಾರೆ.‌ ರಜನಿಕಾಂತ್ ಫ್ಯಾಮಿಲಿಯೂ ಪೋಯಸ್ ಗಾರ್ಡನ್ ನಿವಾಸದಲ್ಲಿ ದೀಪಾವಳಿ ಹಬ್ಬವನ್ನು ಗ್ರಾಂಡ್ ಆಗಿ ಆಯೋಜಿಸಿದ್ದು ಈ ಕ್ಷಣಗಳ ಫೋಟೋವನ್ನು ಅವರ ಪುತ್ರಿ ಸೌಂದರ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಕೊಂಡಿದ್ದಾರೆ.

Rajinikanth

ನವದೆಹಲಿ: ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ ಜೋರಾಗಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಬಹಳ ಅದ್ದೂರಿಯಾಗಿ ಎಲ್ಲರೂ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅದೇ ರೀತಿ ಸೂಪರ್‌ಸ್ಟಾರ್ ರಜಿನಿಕಾಂತ್ (Rajinikanth) ಅವರು ತಮ್ಮ ಪುತ್ರಿ ಹಾಗೂ ಪತ್ನಿ ಜೊತೆ ಬೆಳಕಿನ ಹಬ್ಬವನ್ನು ಆಚರಣೆ ಮಾಡಿದ್ದಾರೆ.‌ ರಜನಿಕಾಂತ್ ಫ್ಯಾಮಿಲಿಯೂ ಪೋಯಸ್ ಗಾರ್ಡನ್ ನಿವಾಸದಲ್ಲಿ ದೀಪಾವಳಿ ಹಬ್ಬವನ್ನು ಗ್ರಾಂಡ್ ಆಗಿ ಆಯೋಜಿಸಿದ್ದು ಈ ಕ್ಷಣಗಳ ಫೋಟೋವನ್ನು ಅವರ ಪುತ್ರಿ ಸೌಂದರ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಜಿನಿಕಾಂತ್ ಅವರ ಪುತ್ರಿ ಸೌಂದರ್ಯಾ ರಜಿನಿಕಾಂತ್ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಕುಟುಂಬದ ದೀಪಾವಳಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ ರಜನಿಕಾಂತ್ ತಮ್ಮ ಪತ್ನಿಯೊಂದಿಗೆ ಸೋಫಾದಲ್ಲಿ ಕುಳಿತಿರುವುದನ್ನು ಕಾಣಬಹುದು, ಅವರ ಇಬ್ಬರು ಪುತ್ರಿಯರಾದ ಐಶ್ವರ್ಯಾ ಮತ್ತು ಸೌಂದರ್ಯಾ ಅವರು ಪೋಷಕರ ಹಿಂದೆ ನಿಂತು ಪ್ರೀತಿ ಯಿಂದ ಅವರ ಭುಜದ ಮೇಲೆ ಕೈ ಇರಿಸಿದ್ದಾರೆ.



ಈ ಫೋಟೋಗಳನ್ನು ಹಂಚಿಕೊಂಡ ಸೌಂದರ್ಯಾ, "ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶ ಯಗಳು" ಎಂದು ಬರೆದಿದ್ದಾರೆ. ಇದಕ್ಕೆ ನಟಿ ಲಕ್ಷ್ಮಿಮಂಚು ಸೇರಿದಂತೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ದೀಪಾವಳಿಯ ಶುಭ ದಿನದಂದು ರಜಿನಿಕಾಂತ್ ಅಭಿಮಾನಿಗಳು ಬೆಳಿಗ್ಗೆಯೇ ಅವರ ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆದರೆ ತಮ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದ ಅಭಿಮಾನಿಗಳಿಗೆ 'ತಲೈವಾ' ನಿರಾಸೆ ಮಾಡಲಿಲ್ಲ.ಬಂದ ಅಭಿಮಾನಿಗಳಿಗೆ ಸೂಪರ್‌ಸ್ಟಾರ್, ಮನೆಯ ಗೇಟ್ ಬಳಿ ಹೊರಬಂದು ಅಭಿ ಮಾನಿಗಳಿಗೆ ದರ್ಶನ ನೀಡಿದರು. ಅಭಿ ಮಾನಿಗಳ ಘೋಷಣೆ, ಹರ್ಷೊದ್ಗಾರ ನಡುವೆ, ನಗುತ್ತಾ, ಕೈಮುಗಿದು, ಅಭಿಮಾನಿಗಳಿಗೆ ಶುಭ ಕೋರಿದ್ದು ಅಭಿಮಾನಿಗ ಳಿಗೆ ನಿಜವಾದ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದರು.

ಇದನ್ನು ಓದಿ:Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಸದ್ಯ ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್ 2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು 2026ರ ಜೂನ್ 12ರಂದು ಬಿಡುಗಡೆಯಾಗಲಿದೆ.