Rajinikanth: ಗಂಗಾ ನದಿಯಲ್ಲಿ ಸ್ನಾನ, ರಸ್ತೆ ಬದಿಯಲ್ಲಿ ಊಟ; ಸೂಪರ್ ಸ್ಟಾರ್ ರಜನಿಕಾಂತ್ ಸರಳತೆಗೆ ಫ್ಯಾನ್ಸ್ ಫಿದಾ
ನಟ ರಜನೀಕಾಂತ್ ಜೈಲರ್ 2 ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೂ ಕೂಡ ಆಪ್ತರ ಜೊತೆಗೆ ಪುಣ್ಯಕ್ಷೇ ತ್ರಗಳಿಗೆ ಭೇಟಿ ನೀಡುವ ಸಲುವಾಗಿ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಹಿಮಾ ಲಯದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ನಟ ರಜನೀಕಾಂತ್ ಅವರು ತಮ್ಮ ಆಪ್ತರ ಸಮ್ಮುಖದಲ್ಲಿ ತೆರಳಿದ್ದಾರೆ. ಈ ವೇಳೆ ರಸ್ತೆಬದಿಯಲ್ಲಿ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Rajinikanth -

ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಎಂದೆ ಖ್ಯಾತಿ ಪಡೆದ ನಟ ರಜನೀಕಾಂತ್ (Rajinikanth) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದ ಮೂಲಕ ಪ್ರತೀ ಸಿನಿಮಾಕ್ಕು ಆಯಾ ಪಾತ್ರಕ್ಕೆ ಜೀವ ತುಂಬುವ ರಜನೀಕಾಂತ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ತೆರೆ ಮೇಲೆ ಅವರು ಸೂಪರ್ ಸ್ಟಾರ್ ಆಗಿ ಅಭಿಮಾನಿಗಳ ಮನಗೆದ್ದಿದ್ದರೂ ನಿಜ ಜೀವನದಲ್ಲಿ ಅವರು ಬಹಳ ಸರಳವಾಗಿರುವುದನ್ನು ಇಷ್ಟಪಡುತ್ತಾರೆ. ಸದಾ ಸಿನಿಮಾ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿರುತ್ತಿದ್ದ ಇವರು ಸದ್ಯ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ರಜನೀಕಾಂತ್ ಜೈಲರ್ 2 ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೂ ಕೂಡ ಆಪ್ತರ ಜೊತೆಗೆ ಪುಣ್ಯಕ್ಷೇ ತ್ರಗಳಿಗೆ ಭೇಟಿ ನೀಡುವ ಸಲುವಾಗಿ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ ಹಿಮಾಲಯದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ನಟ ರಜನೀಕಾಂತ್ ಅವರು ತಮ್ಮ ಆಪ್ತರ ಸಮ್ಮುಖದಲ್ಲಿ ತೆರಳಿದ್ದಾರೆ. ಈ ವೇಳೆ ರಸ್ತೆಬದಿಯಲ್ಲಿ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಸೂಪರ್ ಸ್ಟಾರ್ ರಜನೀಕಾಂತ್ ಅವರು ಮೊದಲಿಗೆ ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದು ಅಲ್ಲಿ ಧ್ಯಾನ ಮಾಡಿದ್ದಾರೆ. ಬಳಿಕ ಅಲ್ಲಿಂದ ಭಾರತದ ಪವಿತ್ರ ಆಚರಣೆಯಾದ ಗಂಗಾ ಆರತಿಯ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ನಂತರ ದ್ವಾರಾಹಾತ್ ಕಡೆಗೆ ಪ್ರಯಾಣಿ ಸಿದರು. ಈ ವೇಳೆಯಲ್ಲಿ ಮಾರ್ಗ ಮಧ್ಯೆಯೆ ರಸ್ತೆ ಬದಿಯಲ್ಲಿ ಯಾವುದೇ ಆಡಂಬರ ಇಲ್ಲದೆ, ಜನ ಸಾಮಾನ್ಯ ನಡುವೆ ಆಪ್ತರ ಸಮ್ಮುಖದಲ್ಲಿ ಊಟ ಮಾಡಿದ್ದ ಫೋಟೊ ಸದ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ.
ರಸ್ತೆ ಬದಿಯಲ್ಲಿ ಊಟ ಮಾಡುತ್ತಿರುವ ರಜನಿಕಾಂತ್
ನಟ ಸೂಪರ್ ಸ್ಟಾರ್ ರಜನೀಕಾಂತ್ ಅವರ ಈ ಫೋಟೋ ಗಳು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡುತ್ತಿದೆ. ವೈರಲ್ ಆದ ಫೋಟೊದಲ್ಲಿ ರಜನಿಕಾಂತ್ ಅವರ ಸರಳತ್ವ ನೆಟ್ಟಿಗರ ಗಮನ ಸೆಳೆಯುವಂತೆ ಮಾಡುತ್ತಿದೆ. ಬಿಳಿ ಬಟ್ಟೆಗಳನ್ನು ಧರಿಸಿ ಸಾಮಾನ್ಯ ಹಳ್ಳಿಯವರಂತೆ ಅವರು ಕಂಡಿದ್ದಾರೆ. ರಸ್ತೆ ಬದಿಯಲ್ಲಿ ಕಲ್ಲಿನ ಮೇಲೆ ಇಟ್ಟಿದ್ದ ಎಲೆಯೊಂದರ ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ಅವರು ತಿನ್ನುತ್ತಿರಯವ ದೃಶ್ಯಗಳನ್ನು ಫೋಟೊದಲ್ಲಿ ಕಾಣಬಹುದು.
ಈ ಫೋಟೊಗಳನ್ನು ಕಂಡ ಅಭಿಮಾನಿಗಳು ನಾನಾ ತರನಾಗಿ ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸೂಪರ್ ಸ್ಟಾರ್ ಆದರೂ ಇವರ ಸರಳ ಜೀವನ ನಮಗೆಲ್ಲರಿಗೂ ಸ್ಫೂರ್ತಿ ಎಂದು ಫೋಟೊಗೆ ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ನೆಟ್ಟಿಗರು, ಇಂದು ದೊಡ್ಡ ದೊಡ್ಡ ಸ್ಟಾರ್ ನಟರು ತೆರೆ ಮೇಲೆ ಮಿಂಚಬೇಕು ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಸರ್ಜರಿ ಇತರ ಕಾಸ್ಮೆಟಿಕ್ಸ್ ಮೊರೆ ಹೋಗುತ್ತಿದ್ದಾರೆ. ಆದರೆ ರಜನೀಕಾಂತ್ ಅವರು ಇದ್ಯಾವುದರ ಮೇಲೂ ಅವಲಂಬಿತ ವಾಗದೆ ಸರಳ ಜೀವನದಲ್ಲಿ ಖುಷಿಯಾಗಿದ್ದಾರೆ ನೀವು ನಿಜಕ್ಕೂ ಗ್ರೇಟ್ ಸರ್ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ರಜನಿಕಾಂತ್ ಅವರ ಕೂಲಿ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ದೊಡ್ಡ ಯಶಸ್ಸು ನೀಡದಿದ್ದರು ಅವರ ಅಭಿನಯ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಪ್ರಸ್ತುತ ಅವರು 'ಜೈಲರ್ 2' ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 2026ರ ಜೂನ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರೀಕರಣದ ಒತ್ತಡ ಹಾಗೂ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅವರು ಋಷಿಕೇಶಕ್ಕೆ ಭೇಟಿ ನೀಡಿರಬಹುದು ಎಂದು ಸಹ ಹೇಳಲಾಗುತ್ತಿದೆ.