ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಣೇಶ ಚತುರ್ಥಿಯ ರಜೆ ಮೇಲೆ ಕಣ್ಣಿಟ್ಟ ರಜನಿಕಾಂತ್‌ ನಟನೆಯ ʻಜೈಲರ್‌ 2ʼ; ಆಗಸ್ಟ್‌ನಲ್ಲೇ ದರ್ಶನ ನೀಡಲಿದೆಯಾ ʻಟಾಕ್ಸಿಕ್‌ʼ? ‌

ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರವನ್ನು ಗಣೇಶ ಚತುರ್ಥಿಯ ಲಾಂಗ್ ವೀಕೆಂಡ್ ಸದುಪಯೋಗಪಡಿಸಿಕೊಳ್ಳಲು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲು ಸನ್ ಪಿಕ್ಚರ್ಸ್ ನಿರ್ಧರಿಸಿದೆ. ಇತ್ತ ಜೂನ್‌ನಿಂದ ಮುಂದೂಡಲ್ಪಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಗಸ್ಟ್‌ನಲ್ಲಿ ತೆರೆಕಾಣುವ ಮುನ್ಸೂಚನೆ ಸಿಕ್ಕಿದೆ.

ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರವನ್ನು ಸೆಪ್ಟೆಂಬರ್ 11ರಂದು ತೆರೆಕಾಣಿಸಲು ಸನ್‌ ಪಿಕ್ಚರ್ಸ್‌ ಪ್ಲಾನ್‌ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜೈಲರ್‌ 2 ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ, ಕೊನೆ ಕ್ಷಣದ ಬದಲಾವಣೆಯಲ್ಲಿ ಸೆಪ್ಟೆಂಬರ್‌ 11ರ ಮೇಲೆ ಜೈಲರ್‌ 2 ಕಣ್ಣಿಟ್ಟಿದೆ ಎಂಬ ಮಾತು ಕೇಳಿಬಂದಿದೆ. ಆ ವಾರ ಗಣೇಶ ಚತುರ್ಥಿ ಇರುವುದರಿಂದ ಹಬ್ಬದ ರಜೆ ಜೈಲರ್‌ 2 ಚಿತ್ರಕ್ಕೆ ವರದಾನವಾಗಲಿದೆ.

ಲಾಭ ತಂದುಕೊಡಲಿದೆಯಾ ಲಾಂಗ್‌ ವೀಕೆಂಡ್?

"ಜೈಲರ್‌ 2 ಬಿಡುಗಡೆ ದಿನಾಂಕಗಳ ವಿಷಯದಲ್ಲಿ ಒಂದಷ್ಟು ಗೊಂದಲಗಳಿದ್ದವು. ಆದರೆ ಈ ಬಾರಿ ನಿರ್ಮಾಪಕರು ಸೆಪ್ಟೆಂಬರ್ 11 ಅನ್ನು ಅಂತಿಮ ದಿನಾಂಕವಾಗಿ ಲಾಕ್ ಮಾಡಿದ್ದಾರೆ. ಸೆಪ್ಟೆಂಬರ್ 14 ರಂದು ಗಣೇಶ ಚತುರ್ಥಿ ಹಬ್ಬ ಇರುವುದರಿಂದ, ಈ ದಿನಾಂಕವು ಚಿತ್ರಕ್ಕೆ ಸುದೀರ್ಘ ವೀಕೆಂಡ್ ಮತ್ತು ರಜಾದಿನಗಳ ಭರ್ಜರಿ ಲಾಭವನ್ನು ತಂದುಕೊಡಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ದೊಡ್ಡ ಮಟ್ಟಿಗೆ ರಿಲೀಸ್ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದು, ಈ ಹೊಸ ವೀಕೆಂಡ್ ಅದಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ" ಎಂದು ಮೂಲಗಳು ತಿಳಿಸಿವೆ.

Actor Yash: 'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು; ಅಸಲಿ ವಿಚಾರ ಬಿಚ್ಚಿಟ್ಟ ಯಶ್

ಸೆಪ್ಟೆಂಬರ್ 11ರ ಶುಕ್ರವಾರ ಜೈಲರ್‌ 2 ಚಿತ್ರ ರಿಲೀಸ್ ಆದರೆ, ಸೋಮವಾರ (ಸೆಪ್ಟೆಂಬರ್ 14) ಗಣೇಶ ಚತುರ್ಥಿಯ ಸರ್ಕಾರಿ ರಜೆ ಇರಲಿದೆ. ಇದರಿಂದಾಗಿ ಚಿತ್ರಕ್ಕೆ ಸತತ ನಾಲ್ಕು ದಿನಗಳ ಸುದೀರ್ಘ ವೀಕೆಂಡ್ ಸಿಗಲಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಗಣೇಶ ಹಬ್ಬಕ್ಕೆ ಸಾರ್ವಜನಿಕ ರಜೆ ಇರುವುದರಿಂದ, ದೇಶದ ಅತ್ಯಂತ ಪ್ರಮುಖ ಐದು ರಾಜ್ಯಗಳ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣಲು ಇದು ಸಹಾಯ ಮಾಡಲಿದೆ ಎಂಬುದು ಕೇಳಿಬಂದಿರುವ ಲೆಕ್ಕಾಚಾರ.

2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಸೀಕ್ವೆಲ್ ಆಗಿರುವ ಜೈಲರ್‌ 2 ಸಿನಿಮಾವನ್ನು ಈ ಬಾರಿ ನಿರ್ದೇಶಕ ನೆಲ್ಸನ್ ಅವರು ತಮಿಳು ಪ್ರೇಕ್ಷಕರಿಗಷ್ಟೇ ಸೀಮಿತಗೊಳಿಸದೆ, ದೇಶದ ಬೇರೆ ಬೇರೆ ರಾಜ್ಯಗಳ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್, ವಿಜಯ್‌ ಸೇತುಪತಿ, ಮಿಥುನ್‌ ಚಕ್ರವರ್ತಿ, ಎಸ್‌ ಜೆ ಸೂರ್ಯ ಮುಂತಾದ ಭಾರತದ ಘಟಾನುಘಟಿ ಸ್ಟಾರ್ ನಟರು ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಆಗಸ್ಟ್‌ಗೆ ಬರಲಿದೆಯಾ ಟಾಕ್ಸಿಕ್?‌

ಈ ಮಧ್ಯೆ ಯಶ್‌ ಅವರ ಟಾಕ್ಸಿಕ್‌ ಯಾವಾಗ ತೆರೆಗೆ ಬರಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಜೂನ್‌ 4ರಂದು ಬರಬೇಕಿದ್ದ ಈ ಸಿನಿಮಾವು ಪೋಸ್ಟ್‌ಪೋನ್‌ ಆಗಿದ್ದು, ಹೊಸ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಸದ್ಯದ ಮಾಹಿತಿ ಪ್ರಕಾರ, ಟಾಕ್ಸಿಕ್‌ ಚಿತ್ರವನ್ನು ಆಗಸ್ಟ್‌ನಲ್ಲಿ ತೆರೆಕಾಣಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂಬ ಮಾಹಿತಿ ಕೇಳಿಬಂದಿದೆ.