Actor Yash: 'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು; ಅಸಲಿ ವಿಚಾರ ಬಿಚ್ಚಿಟ್ಟ ಯಶ್
Toxic Movie: ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ರಿಲೀಸ್ (Release) ವಿಳಂಬದ ಬಗ್ಗೆ ಯಶ್ ಮಾತನಾಡಿದ್ದಾರೆ. ಈ ನಿರ್ಧಾರವು ತನ್ನ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಟಾಕ್ಸಿಕ್ ಸಿನಿಮಾ -
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ 'ಟಾಕ್ಸಿಕ್' (Toxic Movie) ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ಯಶ್ (Yash) ಅವರ ಕನಸಾಗಿದೆ. ಜೂನ್ 4ಕ್ಕೆ ಬರಬೇಕಿದ್ದ 'ಟಾಕ್ಸಿಕ್' ರಿಲೀಸ್ ಮುಂದೂಡಿದ್ದಾರೆ. ಈ ಬಾರಿ ಹೊಸ ಡೇಟ್ ಕೂಡ ಅನೌನ್ಸ್ ಮಾಡಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ರಿಲೀಸ್ (Release) ವಿಳಂಬದ ಬಗ್ಗೆ ಯಶ್ ಮಾತನಾಡಿದ್ದಾರೆ. ಈ ನಿರ್ಧಾರವು ತನ್ನ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಯಶ್ ವೆರೈಟಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ಯಾಕೆ ವಿಳಂಬ ಆಯ್ತು ಎಂದು ಮಾತನಾಡಿದರು.
ಒಂದು ಟೈಮ್‌ಲೈನ್ ಇರುತ್ತೆ!
ಹಾಲಿವುಡ್‌ಗೆ ತಕ್ಕಂತೆ 'ಟಾಕ್ಸಿಕ್' ಸಿನಿಮಾ ಪ್ರಕ್ರಿಯೆ, ವ್ಯವಹಾರ ನಡೀತಿದೆ. ಸಿನಿಮಾ ಸಂಪೂರ್ಣ ಸಿದ್ಧವಾಗಿ ಫೈನಲ್ ಕಾಪಿ ಸಿಕ್ಕಿದ ಮೇಲೆ ಅಲ್ಲಿ ಸಿನಿಮಾ ವಿತರಣೆ, ರಿಲೀಸ್ ಪ್ಲ್ಯಾನ್ ನಡೆಯುತ್ತದೆ. ಈಗ ನಾನು ಸಮಯ ತೆಗೆದುಕೊಂಡು ಸಿನಿಮಾ ಬಿಡುಗಡೆ ನಿರ್ಧಾರ ಮಾಡಿದ್ದೀನಿ ಎಂದಿದ್ದಾರೆ. ಈಗ ನಾನು ನನ್ನ ಸಮಯ ತೆಗೆದುಕೊಂಡು ಈ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ.
ಇದನ್ನೂ ಓದಿ: Vicky Kaushal: ಮಗನ ಮೊದಲ ಲುಕ್ ಹಂಚಿಕೊಂಡ ಕತ್ರಿನಾ! ಪತಿಯ ಬರ್ತ್‌ಡೇ ಸೆಲೆಬ್ರೇಶನ್ ಹೇಗಿತ್ತು?
ಅದು ನಿಜವಾಗಿಯೂ ನನ್ನ ಅಭಿಮಾನಿಗಳು ಅಥವಾ ಭಾರತದ ಜನರು ಇಷ್ಟಪಡದ ವಿಷಯ. ಅವರ ತಲೆಯಲ್ಲಿ ಒಂದು ಟೈಮ್‌ಲೈನ್ ಇರುತ್ತದೆ. ಮತ್ತು ದುರದೃಷ್ಟವಶಾತ್, ನೀವು ಬಯಸದಿದ್ದರೂ ಸಹ ಮಾರ್ಕೆಟಿಂಗ್ ಆಗಿರುತ್ತೆ. ನಾವು ಚಿತ್ರೀಕರಣ ಪ್ರಾರಂಭಿಸಿದ ಕ್ಷಣ, ಜನರು ಅದರ ಬಗ್ಗೆ ಬರೆಯಲು ಪ್ರಾರಂಭಿಸುತ್ತಾರೆ."
ಪಾಶ್ಚಿಮಾತ್ಯ ವಿತರಕರು ರೈಟ್ಸ್ ಕೊಂಡುಕೊಳ್ಳಲು ಸಿನಿಮಾ ಸಿದ್ಧವಿರಬೇಕು, ಸಿನಿಮಾ ಫೈನಲ್ ಕಾಪಿ ಸಿಕ್ಕಿದ ಮೇಲೆ ಅಲ್ಲಿ ಎಲ್ಲರೂ ಆರಂಭವಾಗುತ್ತದೆ. ಯಾರಾದರೂ ಸಿನಿಮಾ ರೈಟ್ಸ್ ಕೊಂಡುಕೊಳ್ಳಬೇಕು, ತಂಡದ ಭಾಗವಾಗಬೇಕು ಅಂದ್ರೆ ಪೂರ್ತಿ ಸಿನಿಮಾ ನೋಡುತ್ತಾರೆ.
ಕಾರಣ ಭಾರೀ ಮೊತ್ತದ ಹಣ ಹೂಡಿಕೆ ಮಾಡುತ್ತಾರೆ. ಇದೇ ಈಗ ಸವಾಲಾಗಿದೆ. ಆದರೆ ನ್ನ ತಂಡದ ಬಗ್ಗೆ ನನಗೆ ನಂಬಿಕೆಯಿದೆ. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಯಶ್ ವಿವರಿಸಿದ್ದಾರೆ.
ತಾರಾ ಸುತಾರಿಯಾ ಹೇಳಿದ್ದೇನು?
ಕೆಲವು ದಿನಗಳ ಹಿಂದೆ, ತಾರಾ ಸುತಾರಿಯಾ ಕೂಡ ಚಿತ್ರದ ಬಿಡುಗಡೆಯಲ್ಲಿನ ವಿಳಂಬ ಮತ್ತು ಅವುಗಳನ್ನು ಹೇಗೆ ಪ್ರಕ್ರಿಯೆಗೊಳಿಸಿದ್ದಾರೆ ಎಂಬುದರ ಕುರಿತು ಚರ್ಚಿಸಿದರು. ‘ನಾನು ತುಂಬಾ ತಾಳ್ಮೆಯಿಂದ ಇರಬಲ್ಲೆ. ಸಿನಿಮಾ ತಕ್ಷಣವೇ ಬಿಡುಗಡೆಯಾಗದಿದ್ದರೆ ನನಗೆ ಏನಾಗಬಹುದು ಎಂಬ ಸಂಕುಚಿತ ಯೋಚನೆ ನನ್ನದಲ್ಲ. ನಾನು ಯಾವಾಗಲೂ ದೊಡ್ಡ ಚಿತ್ರಣವನ್ನು ಗಮನಿಸುತ್ತೇನೆ. ಒಬ್ಬ ನಟಿಯಾಗಿ ನಾನು ಸಿನಿಮಾವನ್ನು ಕೇವಲ ನನ್ನದು ಎಂದು ಭಾವಿಸಲಾಗುವುದಿಲ್ಲ. ಅದು ಇಡೀ ತಂಡದ ಸಿನಿಮಾ ಎಂದಿದ್ದರು.
ಯಶ್ ಮತ್ತು ಗೀತು ಮೋಹನದಾಸ್ ಬರೆದು ಗೀತು ಮೋಹನದಾಸ್ ನಿರ್ದೇಶಿಸಿರುವ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.
ಇದನ್ನೂ ಓದಿ: Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರ ಗೊಂಡ ಈ ಚಿತ್ರ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳಲ್ಲಿಯೂ ಬಿಡುಗಡೆಯಾಗಲಿದೆ.