ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‌ ಆಗಿದ್ದ ರಜನಿಕಾಂತ್‌ಗೆ ಸಿಗ್ತಿದ್ದ ಸಂಬಳ ಎಷ್ಟು? ವೈರಲ್‌ ಆಯ್ತು 55 ವರ್ಷ ಹಿಂದಿನ ಬಿಟಿಎಸ್‌ ಐಡಿ ಕಾರ್ಡ್‌!

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು 1971ರಲ್ಲಿ ಬೆಂಗಳೂರಿನ ಬಿಟಿಎಸ್ ರೂಟ್ ನಂಬರ್ 10A ಬಸ್‌ನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಹೆಸರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಲದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇವತ್ತು ಅಪಾರ ಜನಪ್ರಿಯತೆ, ಅಭಿಮಾನಿಗಳನ್ನು ಸಂಪಾದಿಸಿರುವ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು 55 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಿಟಿಎಸ್‌ ಬಸ್‌ ಕಂಡಕ್ಟರ್‌ ಆಗಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಎಷ್ಟೇ ದೊಡ್ಡ ಸ್ಟಾರ್‌ ಆಗಿದ್ದರೂ, ರಜನಿಕಾಂತ್‌ ಮಾತ್ರ ತಮ್ಮ ಅಂದಿನ ದಿನಗಳನ್ನು ಸದಾ ಮೆಲುಕು ಹಾಕುತ್ತಲೇ ಇರುತ್ತಾರೆ. ರಜನಿಕಾಂತ್ ಅವರು ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವೀಸ್‌ನಲ್ಲಿ (BTS) ಕೆಲಸ ಮಾಡುತ್ತಿದ್ದ ಕಾಲದ ಅವರ ಐಡಿ ಕಾರ್ಡ್‌ ಸದ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಶಿವಾಜಿ ರಾವ್ ಗಾಯಕ್ವಾಡ್ ಹೆಸರಿನ ಕಾರ್ಡ್‌

ಎಲ್ಲರಿಗೂ ಗೊತ್ತಿರುವಂತೆ ಶಿವಾಜಿ ರಾವ್ ಗಾಯಕ್ವಾಡ್ ಎಂಬುದು ರಜನಿಕಾಂತ್‌ ಅವರ ಮೂಲ ಹೆಸರು. ಸದ್ಯ ವೈರಲ್‌ ಆಗುತ್ತಿರುವ ಐಡಿ ಕಾರ್ಡ್‌ನಲ್ಲಿ ಅದೇ ಹೆಸರಿದೆ, ಶಿವಾಜಿ ರಾವ್ ಗಾಯಕ್ವಾಡ್ ಎಂಬ ಹೆಸರಿನ ಜೊತೆಗೆ ಕಂಡಕ್ಟರ್ ಬ್ಯಾಡ್ಜ್ ಸಂಖ್ಯೆಯೂ ಅದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ಅಂದು ಸಂಚರಿಸುತ್ತಿದ್ದ ರೂಟ್ ನಂಬರ್ 10A ಬಸ್‌ನಲ್ಲಿ ರಜನಿಕಾಂತ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದರು.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ರಜನಿಕಾಂತ್ ಅವರು ಅಂದು ಸ್ಟೈಲ್ ಆಗಿ ಸೀಟಿ ಹೊಡೆಯುವುದು, ನೋಟುಗಳನ್ನು ಸ್ಟೈಲ್‌ ಆಗಿ ಎಣಿಸುತ್ತಾ, ಟಿಕೆಟ್ ಹರಿಯುವುದು ಮತ್ತು ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದ ರೀತಿ ಅಂದಿನ ದಿನಗಳಲ್ಲೇ ಪ್ರಯಾಣಿಕರನ್ನು ಎಷ್ಟು ಆಕರ್ಷಿಸುತ್ತಿತ್ತು ಎಂಬುದನ್ನು ಅವರ ಹಳೆಯ ಸ್ನೇಹಿತರು, ಮಾಜಿ ಸಹೋದ್ಯೋಗಿಗಳು ಹಲವು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಇಂದು ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುವ ರಜನಿಕಾಂತ್ ಅವರು ತಮ್ಮ ಹಳೆಯ ವೃತ್ತಿಯನ್ನು ಹಾಗೂ ಕಷ್ಟದ ಕಾಲದಲ್ಲಿ ತಮಗೆ ಜೊತೆಯಾಗಿ ನಿಂತ ಅಂದಿನ ಬಸ್ ಡ್ರೈವರ್, ತಮ್ಮ ಪ್ರಾಣಸ್ನೇಹಿತ ರಾಜ್ ಬಹದ್ದೂರ್ ಅವರನ್ನು ಎಂದಿಗೂ ಮರೆತಿಲ್ಲ. ಕೆಲವು ತಿಂಗಳುಗಳ ಹಿಂದೆ ರಜನಿಕಾಂತ್ ಅವರು ಯಾರಿಗೂ ಯಾವುದೇ ಮುನ್ಸೂಚನೆ ನೀಡದೆ, ಇದ್ದಕ್ಕಿದ್ದಂತೆ ಬೆಂಗಳೂರಿನ ಜಯನಗರದ ಬಿಎಂಟಿಸಿ (BMTC) ಬಸ್ ಡಿಪೋಗೆ ಭೇಟಿ ನೀಡಿದ್ದರು.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಐಡಿ ಕಾರ್ಡ್‌

Superstar Rajinikanth old ID card

ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸ್ತುತ ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದರು. ಅಂದಹಾಗೆ, ಶ್ರೀನಗರ ಡಿಪೋದ ರೂಟ್ ನಂಬರ್ 10A ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಜನಿಕಾಂತ್‌ಗೆ 1971ರಲ್ಲಿ ತಿಂಗಳಿಗೆ 275 ರೂಪಾಯಿ ಸಂಬಳ ನೀಡಲಾಗುತ್ತಿತ್ತಂತೆ! ಇಂದು ರಜನಿಕಾಂತ್‌ ಸಂಭಾವನೆ 150 ಕೋಟಿ ರೂ. ಮೇಲಿದೆ ಎಂಬದು ವಿಶೇಷ.