ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಯೋಹಾಟ್‌ಸ್ಟಾರ್‌ನಲ್ಲಿ ಇತಿಹಾಸ ಸೃಷ್ಟಿಸಿದ 'ಪ್ರೀತಮ್ ಆಂಡ್ ಪೆಡ್ರೊ'; ರಾಜ್‌ಕುಮಾರ್ ಹಿರಾನಿ OTT ಎಂಟ್ರಿಗೆ ದಾಖಲೆಯ ಓಪನಿಂಗ್!

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಾರಥ್ಯದ ಚೊಚ್ಚಲ ಒಟಿಟಿ ವೆಬ್ ಸರಣಿ 'ಪ್ರೀತಮ್ ಆಂಡ್ ಪೆಡ್ರೊ' ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಕಾಲಿಕ ವೀಕ್ಷಣೆ ಪಡೆದು, ದಾಖಲೆ ಬರೆದಿದೆ. ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿರುವ ಈ ಶೋ ಸದ್ಯ ಕನ್ನಡ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ಧೂಳೆಬ್ಬಿಸುತ್ತಿದೆ.

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹಾಗೂ ದೇಶದ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಒಟಿಟಿ (OTT) ಸರಣಿ 'ಪ್ರೀತಮ್ ಆಂಡ್ ಪೆಡ್ರೊ' ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಶೋ ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಇದುವರೆಗೆ 'ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಶೋ' ಹಾಗೂ ಈ ವರ್ಷದ 'ಅತಿ ದೊಡ್ಡ ಓಪನಿಂಗ್' ಪಡೆದ ಸರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂಲ ಹಿಂದಿ ಭಾಷೆಯಲ್ಲದೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಸೇರಿದಂತೆ ಒಟ್ಟು 6 ಪ್ರಾದೇಶಿಕ ಭಾಷೆಗಳಲ್ಲಿ ಈ ಸರಣಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದ್ದು, ದೇಶಾದ್ಯಂತ ವೀಕ್ಷಕರ ಮನ ಗೆದ್ದಿದೆ.

OTT Releases This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳಿವು

ಪ್ರೇಕ್ಷಕರ ಮನಗೆದ್ದ ವಿಶಿಷ್ಟ ಕಥಾಹಂದರ

ರಾಜ್‌ಕುಮಾರ್ ಹಿರಾನಿ ಅವರ ವಿಶಿಷ್ಟ ಶೈಲಿಯ ಕಥೆ ಹೇಳುವಿಕೆ, ನಟರಾದ ಅರ್ಷದ್ ವಾರ್ಸಿ ಮತ್ತು ವೀರ್ ನಡುವಿನ ಅದ್ಭುತ ಕೆಮಿಸ್ಟ್ರಿ ಈ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ. ಪ್ರಸ್ತುತ ಸಮಾಜದಲ್ಲಿನ ಸೈಬರ್ ವಂಚನೆ ಮತ್ತು ಆನ್‌ಲೈನ್ ಸುರಕ್ಷತೆಯಂತಹ ಗಂಭೀರ ವಿಷಯವನ್ನು ಹಾಸ್ಯ ಹಾಗೂ ಭಾವನಾತ್ಮಕತೆಯ ಮಿಶ್ರಣದೊಂದಿಗೆ ಪ್ರಸ್ತುತಪಡಿಸಲಾಗಿದೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವಂತಹ ಮನರಂಜನಾತ್ಮಕ ಕಥಾವಸ್ತು ಹೊಂದಿರುವ ಕಾರಣ, ಇದು ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಜಾಗೃತಿಯ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಡಾರ್ಕ್ ಕಥೆಗಳ ಭ್ರಮೆ ಮುರಿದ 'ಪ್ರೀತಮ್ ಆಂಡ್ ಪೆಡ್ರೊ'

ಸರಣಿಯ ಅಭೂತಪೂರ್ವ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜ್‌ಕುಮಾರ್ ಹಿರಾನಿ, "ಒಟಿಟಿ ಎಂದರೇ ಕೇವಲ ಡಾರ್ಕ್ ಮತ್ತು ಅತಿರೇಕದ ಕಥೆಗಳು ಮಾತ್ರ ಯಶಸ್ವಿಯಾಗುತ್ತವೆ ಎಂಬ ಅಲಿಖಿತ ನಿಯಮವನ್ನು ಈ ಸರಣಿಯ ಗೆಲುವು ಸುಳ್ಳಾಗಿಸಿದೆ. ಪ್ರೇಕ್ಷಕರು ಕೇವಲ ಜಾನರ್‌ಗಳನ್ನು ನೋಡುವುದಿಲ್ಲ, ಬದಲಿಗೆ ತಮ್ಮನ್ನು ನಗಿಸುವ, ಹೃದಯ ಮುಟ್ಟುವ ಮತ್ತು ದೀರ್ಘಕಾಲ ನೆನಪಿನಲ್ಲಿ ಉಳಿಯುವ ಕಥೆಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿದೆ. ಈ ಕಥೆಯ ಮೇಲೆ ನಂಬಿಕೆ ಇಟ್ಟ ಜಿಯೋಹಾಟ್‌ಸ್ಟಾರ್‌ಗೆ ನನ್ನ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಸೊಗಡಿನ ʻರಾಕ್ಷಸʼ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್;‌ ಸವದತ್ತಿಯ ಕಥೆ ಹೇಳೋಕೆ ಬಂದ್ರು ವಿಜಯ್‌ ರಾಘವೇಂದ್ರ

ಹೊಸ ಮಾದರಿಯ ಹಾಗೂ ಸುದೀರ್ಘ ಸಾಂಸ್ಕೃತಿಕ ಚರ್ಚೆಗಳನ್ನು ಹುಟ್ಟುಹಾಕುವ ಇಂತಹ ನೈಜ ಕಥೆಗಳಿಗೆ ಜಿಯೋಹಾಟ್‌ಸ್ಟಾರ್ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಪ್ಲಾಟ್‌ಫಾರ್ಮ್‌ನ ಮೂಲಗಳು ತಿಳಿಸಿವೆ.