ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakshit Shetty: ಏಕಾಏಕಿ ಬೇಸರದ ಫೋಟೋ ಪೋಸ್ಟ್‌ ಮಾಡಿದ ರಕ್ಷಿತ್ ಶೆಟ್ಟಿ!

Rakshit Shetty: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಅವರು ಸಿನಿಮಾ ಅಪ್‌ಡೇಟ್‌ ಇಲ್ಲದಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ಕುಟುಂಬದ ಜೊತೆ ಕಾಣಿಸಿಕೊಂಡಿದ್ದು ಬಿಟ್ಟರೆ, ಪೋಸ್ಟ್‌ ಆಗಲಿ, ಸಿನಿಮಾ ಅಪ್‌ಡೇಟ್‌ ಆಗಲಿ ಏನನ್ನು ಶೇರ್‌ ಮಾಡುತ್ತಿಲ್ಲ. ಆದರೀಗ ನಟ ಏಕಾಏಕಿ ಬೇಸರದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ.

ರಕ್ಷಿತ್‌ ಶೆಟ್ಟಿ

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (rakshith shetty) ಅವರು ಸಿನಿಮಾ ಅಪ್‌ಡೇಟ್‌ ಇಲ್ಲದಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ಕುಟುಂಬದ ಜೊತೆ ಕಾಣಿಸಿಕೊಂಡಿದ್ದು ಬಿಟ್ಟರೆ, ಪೋಸ್ಟ್‌ ಆಗಲಿ, ಸಿನಿಮಾ ಅಪ್‌ಡೇಟ್‌ ಆಗಲಿ ಏನನ್ನು ಶೇರ್‌ ಮಾಡುತ್ತಿಲ್ಲ. ಆದರೀಗ ನಟ ಏಕಾಏಕಿ ಬೇಸರದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ (777 charlie) ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ.

ಬೇಸರದ ಪೋಸ್ಟ್‌?

‘ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಆದರೆ ಈ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಮೋದ್‌ ಶೆಟ್ಟಿ ಅವರು ಸಣ್ಣ ಹಿಂಟ್‌ ಕೊಟ್ಟಿದ್ದರು. ಆದರೀಗ ಜೂನ್‌ನಲ್ಲಿ ಕಳೆದ ವರ್ಷ ರಿಲೀಸ್‌ ಆಗಿರುವ ಚಾರ್ಲಿ ಸಿನಿಮಾ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

‘777 ಚಾರ್ಲಿ’ ಸಿನಿಮಾದ ಬೇಸರದ ದೃಶ್ಯದ ಫೋಟೋವನ್ನು ಫೇಸ್​​​ಬುಕ್ ಕವರ್ ಪೇಜ್ ಆಗಿ ಪೋಸ್ಟ್ ಮಾಡಿರೋದು ಚರ್ಚೆಗೆ ಕಾರಣ ಆಗಿದೆ.

ರಕ್ಷಿತ್ ಶೆಟ್ಟಿ ಬೇಸರ ಪೋಸ್ಟ್‌ ಕಂಡು ರಶ್ಮಿಕಾ ಮದುವೆ ವಿಚಾರವಾಗಿ ಹೋಲಿಕೆ ಮಾಡಿ ಕಮೆಂಟ್‌ ಮಾಡ್ತಿದ್ದಾರೆ ನೆಟ್ಟಿಗರು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

‘ಹಳೆಯದನ್ನು ಮರೆತು ಮುಂದೆ ಸಾಗಿ ಅಂತ ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು. ಫೇಸ್​​​ಬುಕ್​​ ಅಲ್ಲಿ ಅವರ ಕೊನೆಯ ಪೋಸ್ಟ್ ಬಂದಿದ್ದು 2025ರ ಏಪ್ರಿಲ್​​ನಲ್ಲಿ. ಆ ಬಳಿಕ ಅವರು ಪೋಸ್ಟ್ ಮಾಡುತ್ತಿರುವ ಫೋಟೋ ಇದೇ ಆಗಿದೆ.

Rakshith shetty

ಸಿನಿಮಾಗಳ ಅಪ್‌ಡೇಟ್‌ ಏನು?

ಸಿನಿಮಾ ವಿಚಾರಕ್ಕೆ ಬರೋದಾದರೆ 2013ರಲ್ಲಿ ತೆರೆಗೆ ಬಂದ ʻಉಳಿದವರು ಕಂಡಂತೆʼ ಚಿತ್ರದ ಮುಂದುವರಿದ ಭಾಗವಾಗಿ ʻರಿಚರ್ಡ್ ಆಂಟನಿʼ ಸಿನಿಮಾ ಮೂಡಿಬರುತ್ತಿದೆ. ʻಉಳಿದವರು ಕಂಡಂತೆʼ ಚಿತ್ರಕ್ಕೆ ದೊಡ್ಡ ಅಭಿಮಾನಿ ವರ್ಗವಿದ್ದು, ಇದೀಗ ಸಿನಿಪ್ರಿಯರು ʻರಿಚರ್ಡ್ ಆಂಟನಿʼ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ʻರಿಚರ್ಡ್ ಆಂಟನಿʼ ಸಿನಿಮಾವನ್ನು ಮುಗಿಸಿದ ಕೂಡಲೇ ʻಪುಣ್ಯಕೋಟಿʼ ಚಿತ್ರವನ್ನು ರಕ್ಷಿತ್‌ ಕೈಗೆತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ: Naga Chaitanya: ವೇದಿಕೆಯಲ್ಲೇ ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ !

ಈ ಚಿತ್ರಕ್ಕೆ ವಿಎಫ್‌ಎಕ್ಸ್‌ ಕೆಲಸಗಳು ಜಾಸ್ತಿ ಇರುವುದರಿಂದ ʻರಿಚರ್ಡ್ ಆಂಟನಿʼ ಜೊತೆಗೆಯೇ ʻಪುಣ್ಯಕೋಟಿʼ ಚಿತ್ರದ ವಿಎಫ್‌ಎಕ್ಸ್‌ ಕೆಲಸಗಳು ಸಾಗಲಿವೆಯಂತೆ. ಇದೆಲ್ಲದರ ನಡುವೆ ಮತ್ತೆ ಮೂರು ಹೊಸ ಸಿನಿಮಾಗಳ ಸ್ಕ್ರಿಪ್ಟ್‌ಗಳನ್ನು ರಕ್ಷಿತ್‌ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಎಲ್ಲಾ ಸಿನಿಮಾಗಳ ನಿರ್ದೇಶನವನ್ನು ರಕ್ಷಿತ್‌ ಶೆಟ್ಟಿ ಅವರೇ ಮಾಡಲಿದ್ದು, ನಿರ್ಮಾಣದ ಹೊಣೆ ಕೂಡ ಬಹುತೇಕ ಅವರದ್ದೇ ಆಗಿರಲಿದೆ.

Yashaswi Devadiga

View all posts by this author