Naga Chaitanya: ವೇದಿಕೆಯಲ್ಲೇ ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ !
Naga Chaitanya: `ವಿರೂಪಾಕ್ಷ' ಸಿನಿಮಾ ಖ್ಯಾತಿಯ ಕಾರ್ತಿಕ್ ದಂಡು ನಿರ್ದೇಶನದ ʻವೃಷಕರ್ಮʼ ಚಿತ್ರದ ನಾಯಕ ನಾಗ ಚೈತನ್ಯ . ಈ ಚಿತ್ರದ ಗ್ಲಿಂಪ್ಸ್‌ಗಳನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಹೈದರಾಬಾದ್‌ನ ಪ್ರಸಾದ್ ಐ ಮ್ಯಾಕ್ಸ್ ಥಿಯೇಟರ್‌ನಲ್ಲಿ ಸಮಾರಂಭ ನಡೆಯಿತು. ವೇದಿಕೆ ಮೇಲೆ ತಮಗಾಗಿ ಹಾಕಿದ್ದ ಕುರ್ಚಿಯ ಮೇಲೆ ಕೂರಲು ಹೋದಾಗ ಅವರು ಹಿಂದಕ್ಕೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ಗಾಬರಿಯಾದರೆ, ನಾಗ ಚೈತನ್ಯ ಮಾತ್ರ ನಗುಮುಖದಲ್ಲೇ ಎದ್ದು ನಿಂತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ನಾಗ ಚೈತನ್ಯ -
`ವಿರೂಪಾಕ್ಷ' ಸಿನಿಮಾ ಖ್ಯಾತಿಯ ಕಾರ್ತಿಕ್ ದಂಡು ನಿರ್ದೇಶನದ ʻವೃಷಕರ್ಮʼ ಚಿತ್ರದ ನಾಯಕ ನಾಗ ಚೈತನ್ಯ (naga chaitanya). ಈ ಚಿತ್ರದ ಗ್ಲಿಂಪ್ಸ್‌ಗಳನ್ನು ಗುರುವಾರ (Feb 6) ಬಿಡುಗಡೆ ಮಾಡಲಾಯಿತು. ಹೈದರಾಬಾದ್‌ನ ಪ್ರಸಾದ್ ಐ ಮ್ಯಾಕ್ಸ್ ಥಿಯೇಟರ್‌ನಲ್ಲಿ (Theatre) ಸಮಾರಂಭ ನಡೆಯಿತು. ವೇದಿಕೆ ಮೇಲೆ ತಮಗಾಗಿ ಹಾಕಿದ್ದ ಕುರ್ಚಿಯ (Chair) ಮೇಲೆ ಕೂರಲು ಹೋದಾಗ ಅವರು ಹಿಂದಕ್ಕೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ಗಾಬರಿಯಾದರೆ, ನಾಗ ಚೈತನ್ಯ ಮಾತ್ರ ನಗುಮುಖದಲ್ಲೇ ಎದ್ದು ನಿಂತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಒಂದು ವಿಶಿಷ್ಟ ಚಿತ್ರ
'ವೃಷಕರ್ಮ' ಸಿನಿಮಾ ನಾಗ ಚೈತನ್ಯ ಅವರ ವೃತ್ತಿಜೀವನದಲ್ಲಿ ಒಂದು ವಿಶಿಷ್ಟ ಚಿತ್ರವಾಗಲಿದೆ. 'ಬಂಗಾರರಾಜು' ಸಿನಿಮಾದಂತೆಯೇ ಕಾಮಿಡಿ ಫ್ಯಾಂಟಸಿ ಸಿನಿಮಾದಲ್ಲಿ ಇದುವರೆಗೆ ನಟಿಸಿದ್ದ ನಾಗ ಚೈತನ್ಯ, 'ವೃಷಕರ್ಮ' ಸಿನಿಮಾದಂತೆಯೇ ಹಾರರ್ ಮಿಶ್ರಿತ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ಇದನ್ನೂ ಓದಿ: South Movies on OTT: ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ; ಈ ಎಲ್ಲ ಸೌತ್ ಸಿನಿಮಾಗಳು ಸ್ಟ್ರೀಮಿಂಗ್ ಎಲ್ಲಿ?
ಈ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 5 ರಂದು ಮೀನಾಕ್ಷಿ ಚೌಧರಿ ಅವರ ಹುಟ್ಟುಹಬ್ಬವಿರುವುದು ಗಮನಾರ್ಹ! ಈ ಸಂದರ್ಭದಲ್ಲಿ 'ವೃಷಕರ್ಮ' ಸಿನಿಮಾದ ಗ್ಲಿಂಪ್ಸ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಊಹಿಸಬಹುದು. ಆದರೆ, ಈ ಗ್ಲಿಂಪ್ಸ್ ಬಿಡುಗಡೆ ಸಮಾರಂಭದಲ್ಲಿ ಮೀನಾಕ್ಷಿ ಭಾಗವಹಿಸಲಿಲ್ಲ. ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.
ನಟ ಹೇಳಿದ್ದೇನು?
ನಾಗ ಚೈತನ್ಯ ಮಾಧ್ಯಮದ ಮುಂದೆ ಮಾತನಾಡಿ, ಇಂದು ನಾನು ತುಂಬಾ ಸಂತೋಷವಾಗಿದ್ದೇನೆ. ನಾವು 'ವೃಷಕರ್ಮ' ಗ್ಲಿಂಪ್ಸ್‌ಗಳನ್ನು ಪ್ರಾರಂಭಿಸಿದ್ದೇವೆ. ನಾನು ಈ ಕ್ಷಣಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇನೆ. ಏಕೆಂದರೆ ಇದು ನನ್ನ ವೃತ್ತಿಜೀವನದಲ್ಲಿ 100% ಅತ್ಯುತ್ತಮ ಚಿತ್ರವಾಗಲಿದೆ. ಇದು ಈಗಷ್ಟೇ ಅಲ್ಲ. ಸ್ಕ್ರಿಪ್ಟ್ ಕೇಳಿದಾಗ ನನಗೆ ಅದು ಅನಿಸಿತು. ನಟನಾಗಿ ನನಗೆ ಒಂದು ಆಸೆ ಇದೆ. ನಾನು ಯಾವಾಗಲೂ ದೊಡ್ಡ ಪ್ರಮಾಣದ ಅದ್ಭುತ ಚಿತ್ರವನ್ನು ಮಾಡಬೇಕೆಂದು ಬಯಸಿದ್ದೆ.. ಪೌರಾಣಿಕ ಹೊಂದಿರುವ VFX ಚಿತ್ರವನ್ನು ಮಾಡಬೇಕು ಎಂದು. ಅದಕ್ಕೆ ಉತ್ತರ ವೃಷಕರ್ಮ. ಅದಕ್ಕಾಗಿ ನಾನು ಕಾರ್ತಿಕ್‌ಗೆ ಧನ್ಯವಾದ ಹೇಳಬೇಕು ಎಂದರು.
ಅಭಿಮಾನಿಗಳು ತೀವ್ರ ಆಕ್ರೋಶ
ವೃಷಕರ್ಮ' ಚಿತ್ರದ ಬಿಡುಗಡೆ ಸಮಾರಂಭದಲ್ಲಿ ನಾಗಚೈತನ್ಯ ಕುರ್ಚಿಯಿಂದ ಬಿದ್ದ ಬಗ್ಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sorry but sound chesta paddadu Naga Chaitanya, so embarrassing
— Prabhas Fan (@prabhasfan555) March 6, 2026
organizers ni dengali
pic.twitter.com/5Wfck1gZ5b
ವಿಡಿಯೋ ವೈರಲ್ ಆಗ್ತಿದ್ದಂತೆ, ಕಾರ್ಯಕ್ರಮದ ಆಯೋಜಕರ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿಯಲ್ಲಿ ಬಿವಿಎಸ್‌ಎನ್ ಪ್ರಸಾದ್ ಅವರು ಸುಕುಮಾರ್ ರೈಟಿಂಗ್ಸ್ ಜೊತೆ ಸೇರಿ ಸಿನಿಮಾ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!
ನರಸಿಂಹಾಚಾರಿ ಚೆನ್ನೊಜು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರ್ಚನಾ ರಾವ್ ವಸ್ತ್ರ ವಿನ್ಯಾಸ ಮಾಡಿದ್ದು, ವಿಜಯ್, ಟುಡೋರ್ ಲಜಾರೋವ್, ಮತ್ತು ಕರುಣಾಕರ್ ಸಾಹಸ ನಿರ್ದೇಶನ ಮಾಡಿದ್ದಾರೆ.