ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KD: The Devil: 'ಚೋಲಿ ಕೆ ಪೀಚೆ ಕ್ಯಾ ಹೈ, ʻಪೀಲಿಂಗ್ಸ್‌ʼ ಚೆನ್ನಾಗಿತ್ತಾ? ರಕ್ಷಿತಾ ಖಡಕ್‌ ರಿಯಾಕ್ಷನ್

KD: The Devil: ʻಕೆಡಿʼ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು ದಾಖಲಾಗಿ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.ಈ ಬಗ್ಗೆ ಇದೀಗ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

ರಕ್ಷಿತಾ ಪ್ರೇಮ್‌

ʻಕೆಡಿʼ (KD Movie) ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ('Sarse ninna seraga sarse' song) ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ (Hindi Version) ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು ದಾಖಲಾಗಿ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.ಈ ಬಗ್ಗೆ ಇದೀಗ ರಕ್ಷಿತಾ ಪ್ರೇಮ್ (rakshitha prem) ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: Amruthadhaare Serial: ಜೇಡಿ ವಿರುದ್ಧ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾಳೆ ಶಕುಂತಲಾ! ಕಿಡಿ ಕಾರಿದ ಪಾರ್ಥ

ಏನಾಗ್ತಿದೆ ಎನ್ನುವುದು ಗೊತ್ತಿದೆ

ರಕ್ಷಿತಾ ಪೋಸ್ಟ್‌ನಲ್ಲಿ, ಕೆಲವರ ಪೋಸ್ಟ್‌ಗಳಲ್ಲಿ ನನ್ನನ್ನು ಟ್ಯಾಗ್ ಮಾಡ್ತಿದ್ದೀರಾ. ಏನು ಬರೆದಿದ್ದೀರಾ ಅನ್ನೋದು ನನಗೆ ತಿಳಿದಿದೆ. ಏನಾಗ್ತಿದೆ ಎನ್ನುವುದು ಗೊತ್ತಿದೆ. ನಾನು ಅದನ್ನು ಬೆಂಬಲಿಸುತ್ತೇನೆ ಅಥವಾ ವಿರೋಧಿಸುತ್ತೇನೆ ಎನ್ನುವುದು ಮುಖ್ಯವಲ್ಲ "ಪೀಲಿಂಗ್ಸ್', 'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ರೀತಿಯ ಹಾಡುಗಳು ಬಂದಾಗ ಸರಿ ಅನ್ನಿಸಿತ್ತು. ಸಿನಿಮಾದಲ್ಲಿ ಪಾತ್ರಗಳು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡಿದ್ರು ಅದು ಸರಿ ಅನ್ನಿಸಿತು. ಆದರೆ ಒಂದು ಹಾಡು ಮಾತ್ರ ದೊಡ್ಡ ಸುದ್ದಿಯಾಗ್ತಿದೆ. ನಾನು ಇದನ್ನು ಸಮರ್ಥಿಸುತ್ತಿಲ್ಲಸುಮ್ನೆ ಕೇಳುತ್ತಿರುವೆ ಎಂದು ಬರೆದುಕೊಂಡಿದ್ದಾರೆ.

ಗಿಮಿಕ್‌ಗಳಿಗಾಗಿ ಮಾಡುತ್ತಾರೆ ಎಂದರ್ಥವಲ್ಲ

ಮುಂಚೆ ಪ್ರೇಮ್‌ ಹಾಡನ್ನು ಮೆಚ್ಚಿಕೊಂಡವರೇ ಈಗ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಕೆಲ ಚಿತ್ರಗಳು ದೊಡ್ಡದಾಗಿ ಗೆಲ್ಲದಿದ್ದರೆ ಅದರಿಂದ ಅವರು ಕೆಟ್ಟ ನಿರ್ದೇಶಕನಾಗುವುದಿಲ್ಲ. ಗಿಮಿಕ್‌ಗಳಿಗಾಗಿ ಮಾಡುತ್ತಾರೆ ಎಂದರ್ಥವಲ್ಲ.

Rakshitha post

ನೀವು ಅವರನ್ನು ಪ್ರಶ್ನಿಸುವ ಹಕ್ಕು ಇದೆ, ಆದರೆ ಅವಮಾನ ಮಾಡುವ ಹಕ್ಕು ಇದೆಯಾ? ನನ್ನ ಜನ ಮತ್ತು ಭಾಷೆಯನ್ನು ನಾನು ಪ್ರೀತಿಸುವೆ. ನಮ್ಮ ಬಗ್ಗೆ ಕಾಮಿಡಿ ಮಾಡ್ತಾರೆ. ಪ್ರೇಮ್ ಮಾತ್ರ ಅಲ್ಲ. ನಾನು ಎಲ್ಲಿಗೆ ಹೋದರೂ ಕೆಲವರು ನನ್ನ ಬಗ್ಗೆ ಕೆಟ್ಟವಾಗಿ ಕಾಮೆಂಟ್ ಮಾಡುತ್ತಾರೆ. ಇಂದು ಜನರು ಹೆಚ್ಚು ರಕ್ತಸಿಕ್ತ ಚಿತ್ರಗಳನ್ನು ನೋಡುತ್ತಿದ್ದಾರೆ.

ಲೈಂಗಿಕ ವಿಷಯವನ್ನು ತುಂಬಾ ಮುಕ್ತವಾಗಿ ವೀಕ್ಷಿಸುತ್ತಿದ್ದಾರೆ. OTTಗೆ ಅಥವಾ ಚಾನೆಲ್‌ಗೆ ಸಿನಿಮಾ ಮಾರುವುದು ಕನ್ನಡ ನಿರ್ದೇಶಕರಿಗೂ ನಿರ್ಮಾಪಕರಿಗೂ ದೊಡ್ಡ ಸವಾಲಾಗಿದೆ.

ಎಷ್ಟು ಪ್ರಚಾರ ಮಾಡಿದ್ರು ಬಹಳ ಕಷ್ಟ

ಎಷ್ಟು ಪ್ರಚಾರ ಮಾಡಿದ್ರು, ಇತರ ಸಿನಿಮಾ ಇಂಡಸ್ಟ್ರಿಮಟ್ಟಕ್ಕೆ ತಲುಪುವುದು ಬಹಳ ಕಷ್ಟ. ಅವರ ಹಿಂದಿನ ಕೆಲಸದ ಬಗ್ಗೆ ಏನನ್ನಾದರೂ ಹೇಳಿ ಈ ಗಿಮಿಕ್ ಅನ್ನಬೇಡಿ. ಇತರ ಭಾಷೆಗಳ ಸಿನಿಮಾಗಳೊಂದಿಗೆ ಹೋಲಿಸಿದರೆ. ನಮ್ಮದೇ ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಕಷ್ಟ.ಪ್ರೇಕ್ಷಕರು ಥಿಯೇಟರ್‌ಗೆ ಬಂದ ನಂತರ ನೀವು ಸಿನಿಮಾ ಇಷ್ಟವಾಯಿತೇ ಇಲ್ಲವೇ ಎಂದು ಹೇಳುವ ಹಕ್ಕು ನಿಮಗೆ ಇದೆ.

ಇದನ್ನೂ ಓದಿ: ಅಂದು ʻಅಯ್ಯʼ ಸಿನಿಮಾಗೆ ಬಂದ ಸ್ಥಿತಿಯೇ ʻಕೆಡಿʼ ಚಿತ್ರಕ್ಕೂ ಬರಬಹುದೇ? ʻಸೆರಗು ಸರ್ಸೆʼ ಹಾಡನ್ನು ಮೂಲೆಗೆ ಸರಿಸಿದ ಸಿನಿಪ್ರಿಯರು!

ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ ಮತ್ತು ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವಿಲ್ಲದೆ ನಾವು ಏನೂ ಅಲ್ಲ, ಮತ್ತು ಅದು ನಮಗೆಲ್ಲರಿಗೂ ಅನ್ವಯಿಸುತ್ತದೆ. ಆದರೆ ಯಾರ ಬಗ್ಗೆಯಾದರೂ ನಿಂದಿಸುವುದು ಅಥವಾ ಕೆಟ್ಟದಾಗಿ ಮಾತನಾಡುವುದು ಸಾಮಾಜಿಕ ಮಾಧ್ಯಮದಲ್ಲಿ ವಾಸ್ತವವನ್ನು ತೋರಿಸುತ್ತದೆ. ಎಂದು ಬರೆದುಕೊಂಡಿದ್ದಾರೆ.

Yashaswi Devadiga

View all posts by this author