ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakshitha Shetty: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್

Bigg Boss Kannada 12: ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಮೊದಲ ರನ್ನರ್​ ಅಪ್​ ಆದ ಬಳಿಕ, ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳು ಎಂದೆಲ್ಲಾ ಸಖತ್ ಬ್ಯೂಸಿಯಾಗಿದ್ದ ರನ್ನರ್ ಅಫ್ ರಕ್ಷಿತಾ ಶೆಟ್ಟಿ ಇದೀಗ ಸ್ವಲ್ಪ ಫ್ರೀ ಆದಂತೆ ಕಂಡುಬಂದಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

ರಕ್ಷಿತಾ ಶೆಟ್ಟಿ

ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಮೊದಲ ರನ್ನರ್​ ಅಪ್​ (Runner Up) ಆದ ಬಳಿಕ, ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳು ಎಂದೆಲ್ಲಾ ಸಖತ್ ಬ್ಯೂಸಿಯಾಗಿದ್ದ ರನ್ನರ್ ಅಫ್ ರಕ್ಷಿತಾ ಶೆಟ್ಟಿ (Rakshitha Shetty) ಇದೀಗ ಸ್ವಲ್ಪ ಫ್ರೀ ಆದಂತೆ ಕಂಡುಬಂದಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ (Emotional Post) ಹಂಚಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

ನೆನಪುಗಳಿಂದ ಕಟ್ಟಿದ ಮನೆ

ರಕ್ಷಿತಾ ಪೋಸ್ಟ್‌ನಲ್ಲಿ ನನ್ನ ಜೀವನದಲ್ಲಿ ಎಂದಿಗೂ ಮರೆತೇ ಹೋಗಲಾರದ ದಿನ – ಬಿಗ್ ಬಾಸ್ ಮನೆಯಲ್ಲಿನ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಎಲ್ಲವೂ ಇತ್ತು. ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ. ಸ್ಪರ್ಧೆಯಾಗಿ ಆರಂಭವಾದ ಈ ಮನೆ, ಸಮಯದೊಂದಿಗೆ ನಿಜವಾದ ಮನೆಯಾಗಿಬಿಟ್ಟಿತು.ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು.

ಇದನ್ನೂ ಓದಿ: Dhurandhar 2: ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌! ಏನಿದು ಅಪ್‌ಡೇಟ್‌?

ಸಂಬಂಧಗಳನ್ನು ಕಟ್ಟಿಕೊಂಡೆ

ಇದು ಕೇವಲ ಒಂದು ಪ್ರಯಾಣವಲ್ಲ, ನಾನು ಇಲ್ಲಿ ಅನೇಕ ಸಂಬಂಧಗಳನ್ನು ಕಟ್ಟಿಕೊಂಡೆ.ಬಹಳಷ್ಟು ಅಣ್ಣಂದಿರು, ಅಮೂಲ್ಯವಾದ ಬಾಂಧವ್ಯಗಳು – ಇವು ಸದಾ ನನ್ನ ಹೃದಯದಲ್ಲಿರುತ್ತವೆ. ಸುದೀಪ್ ಸರ್ ಮನೆಗೆ ಪ್ರವೇಶಿಸಿದ ಕ್ಷಣ ತುಂಬಾ ಸಂತೋಷ ತಂದಿತು.ಆದರೆ ಮನೆ ಬಿಟ್ಟು ಹೊರಡುವ ಸಮಯ. ಅದು ನನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು.



ಜನರಿಗೆ ಹೃದಯಪೂರ್ವಕ ಧನ್ಯವಾದಗಳು

ಈ ಎಲ್ಲಾ ತಿಂಗಳುಗಳ ನಂತರ ಈ ಮನೆಯನ್ನು ಬಿಟ್ಟು ಹೋಗುವುದು ಸುಲಭವಾಗಿರಲಿಲ್ಲ. ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ. ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗಲು ಬಿಡುವುದಿಲ್ಲ. ಅವು ನಮ್ಮೊಳಗೇ ಉಳಿದುಬಿಡುತ್ತವೆ. ಮನೆಯ ಹೊರಗಿದ್ದ ನನ್ನ ಜನರಿಗೆ ಹೃದಯಪೂರ್ವಕ ಧನ್ಯವಾದಗಳು.

ಇದನ್ನೂ ಓದಿ: Parvathy Thiruvothu: ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

ನಿಮ್ಮ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಮತ್ತು ಮತಗಳು ನನಗೆ ಶಕ್ತಿ ನೀಡಿದವು. ನಾನು ಅಷ್ಟು ದೂರ ಈ ಮನೆಯಲ್ಲಿ ಉಳಿಯಲು ನಿವೇ ಕಾರಣ. ಯಾವತ್ತೂ ಕೃತಜ್ಞತೆ. ಯಾವತ್ತೂ ನೆನಪುಗಳು ಎಂದು ಬರೆದುಕೊಂಡಿದ್ದಾರೆ.

Yashaswi Devadiga

View all posts by this author