ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

Ram Charan: ರಾಮ್ ಚರಣ್ ತಮ್ಮ ಮುಂಬರುವ ಚಿತ್ರ ಪೆದ್ದಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಚಿತ್ರದ ಮೊದಲ ನೋಟವೇ ವೀಕ್ಷಕರನ್ನು ಆಕರ್ಷಿಸಿದೆ. ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರೊಂದಿಗೆ ರಾಮ್ ಚರಣ್ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಂದರ್ಶನದಲ್ಲಿ ರಾಮ್ ತಮ್ಮ ಕಠಿಣ ದೈಹಿಕ ರೂಪಾಂತರದ ಅನುಭವವನ್ನು ಹಂಚಿಕೊಂಡಿದ್ದಾರೆ.

ರಾಮ್‌ ಚರಣ್‌

ತೆಲುಗು ನಟ ರಾಮ್ ಚರಣ್ (Ram Charan) ತಮ್ಮ ಮುಂಬರುವ ಚಿತ್ರ ಪೆದ್ದಿ (Peddi Movie) ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಚಿತ್ರದ ಮೊದಲ ನೋಟವೇ ವೀಕ್ಷಕರನ್ನು ಆಕರ್ಷಿಸಿದೆ. ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರೊಂದಿಗೆ ರಾಮ್ ಚರಣ್ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಂದರ್ಶನದಲ್ಲಿ ರಾಮ್ (Ram Charan) ತಮ್ಮ ಕಠಿಣ ದೈಹಿಕ ರೂಪಾಂತರದ ಅನುಭವವನ್ನು ಹಂಚಿಕೊಂಡಿದ್ದಾರೆ.

ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಬೇಕಿತ್ತು ಎಂದು ರಾಮ್‌ ಚರಣ್‌ ಮಾತು ಶುರು ಮಾಡಿದರು. " “ಕ್ರಿಕೆಟಿಗನ ಮೈಕಟ್ಟು ಮತ್ತು ಕುಸ್ತಿಪಟುವಿನ ಮೈಕಟ್ಟು – ಎರಡೂ ಬಹಳ ವಿಭಿನ್ನ. ಕ್ರಿಕೆಟ್ ಆಟಗಾರರು ತಿಲಕ್ ವರ್ಮಾ ಅಥವಾ ಹಾರ್ದಿಕ್ ಪಾಂಡ್ಯ ಅವರಂತೆ ತೆಳ್ಳಗಿರುತ್ತಾರೆ. ಮೊದಲು ಅಂತಹ ದೇಹ ಬೇಕಿತ್ತು. ನಂತರ ಕಬಡ್ಡಿ ಮತ್ತು ಕುಸ್ತಿಗಾಗಿ ದೊಡ್ಡ ಮತ್ತು ಬಲಶಾಲಿ ದೇಹ ಬೇಕಾಯಿತು.”ಎಂದರು.

ಇದನ್ನೂ ಓದಿ: Amruthadhaare serial: ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

ಚಿತ್ರೀಕರಣ ಮುಗಿದ ಬಳಿಕ ರಾಮ್ ತಮ್ಮ ದೇಹದ ಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.“ಈಗ ಎಲ್ಲೆಡೆ ನೋವು ಬರುತ್ತಿದೆ. ಮಗಳನ್ನು ಎತ್ತುವುದೂ ಕೈಗೆ ನೋವುಂಟು ಮಾಡುತ್ತದೆ. ಎಕ್ಸ್-ರೇ ತೆಗೆಸಿಕೊಳ್ಳಬೇಕಿದೆ. ಕುಸ್ತಿ ಸಮಯದಲ್ಲಿ ನಿರಂತರ ಹಿಡಿತದಿಂದ ನಡುಕ ಬಂದಿದೆ,” ಎಂದು ಅವರು ಹೇಳಿದರು.ಚಿತ್ರದಲ್ಲಿ ನಿಜವಾದ ಕುಸ್ತಿಪಟುಗಳಿದ್ದರು. “ಆಕ್ಷನ್” ಎಂದ ತಕ್ಷಣ ಅವರು ಸಹಜವಾಗಿ ಕುಸ್ತಿ ಮಾಡಲು ಶುರು ಮಾಡುತ್ತಿದ್ದರು ಎಂದು ರಾಮ್ ತಿಳಿಸಿದರು. ಆದರೂ ತಂಡ ಯಾವುದೇ ದೊಡ್ಡ ಗಾಯವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿತು.

" ನಾನು ಈ ಪ್ರಕ್ರಿಯೆಯನ್ನು ನಿಜವಾಗಿಯೂ ಆನಂದಿಸಿದೆ. ನೀವು ಇಷ್ಟಪಡುವ ಕೆಲಸವನ್ನು ಮಾಡಿದಾಗ ನಿಮಗೆ ಆಯಾಸ ಅನಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ನನಗೂ ಹಾಗೆಯೇ ಅನಿಸಿತು."



ನಾನು ನಟಿಸಿದ ಪ್ರತಿ ಚಿತ್ರದಲ್ಲೂ ಅಪಘಾತ ಆಗಿದೆ. ಆರ್‌ಆರ್‌ಆರ್‌ನಲ್ಲಿ ಕಾಲು ಮುರಿದುಕೊಂಡೆ. ರಂಗಸ್ಥಳಂನಲ್ಲಿ ಏನೋ ಆಯಿತು. ಗೇಮ್ ಚೇಂಜರ್‌ನಲ್ಲಿ ತುಟಿ ಕತ್ತರಿಸಿಕೊಂಡೆ. ಆದರೆ ಪೆದ್ದಿ ಚಿತ್ರಕ್ಕೆ ಒಂದು ದಿನವೂ ನಿಲ್ಲಿಸಲಿಲ್ಲ. ಇದು ದೇವರ ದಯೆ ಎಂದಿದ್ದಾರೆ.

ಬುಚ್ಚಿ ಬಾಬು ಸಾನಾ ನಿರ್ದೇಶನದ, ಪೆದ್ದಿಯನ್ನು ವೃದ್ಧಿ ಸಿನಿಮಾಸ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ, IVY ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಇಶಾನ್ ಸಕ್ಸೇನಾ ಸಹ-ನಿರ್ಮಾಣ ಮಾಡಿದ್ದಾರೆ ಮತ್ತು ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ್ದಾರೆ.

ಇದನ್ನೂ ಓದಿ: Sanjay Dutt : ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ನಟ ಸಂಜಯ್ ದತ್? ಏನಿದು ಹೊಸ ಚರ್ಚೆ?

ಚಿತ್ರದಲ್ಲಿ ಜಾನ್ವಿ ಕಪೂರ್, ಶಿವ ರಾಜ್‌ಕುಮಾರ್, ದಿವ್ಯೆಂದು ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Yashaswi Devadiga

View all posts by this author