ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Peddi Trailer Review: ಕ್ರಾಸ್‌ಓವರ್ ಅಥ್ಲೀಟ್ ಆಗಿ ಧೂಳೆಬ್ಬಿಸಿದ ʻಗ್ಲೋಬಲ್ ಸ್ಟಾರ್ʼ ರಾಮ್ ಚರಣ್; ಗುರುವಾಗಿ ಬಂದ ಶಿವಣ್ಣ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ 'ಪೆದ್ದಿ' ಚಿತ್ರದ ರಗಡ್ ಟ್ರೇಲರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ರಾಮ್ ಚರಣ್ ಕ್ರಾಸ್‌ಓವರ್ ಅಥ್ಲೀಟ್ ಆಗಿ ಕಾಣಿಸಿಕೊಂಡರೆ, ಶಿವರಾಜ್‌ಕುಮಾರ್ ಕುಸ್ತಿ ಹೇಳಿಕೊಡುವ ಪವರ್‌ಫುಲ್ ಗುರು 'ಗೌರ್ ನಾಯ್ಡು' ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ʻಪೆದ್ದಿʼ ಟ್ರೇಲರ್ ಧಮಾಕಾ; ರಾಮ್ ಚರಣ್‌ಗೆ ಗುರುವಾಗಿ ಬಂದ ಶಿವರಾಜ್‌ಕುಮಾರ್‌

-

Avinash GR
Avinash GR May 18, 2026 7:13 PM

ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರೆ, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ಜಗಪತಿ ಬಾಬು, 'ಮಿರ್ಜಾಪುರ್' ಖ್ಯಾತಿಯ ದಿವ್ಯೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಟ್ರೇಲರ್‌ ಅಭಿಮಾನಿಗಳನ್ನು ರಂಜಿಸಿದೆ. ಮುಂಬೈನಲ್ಲಿಂದು ಅದ್ದೂರಿಯಾಗಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ರಾಮ್ ಚರಣ್, ನಾಯಕಿ ಜಾಹ್ನವಿ ಕಪೂರ್, ನಿರ್ದೇಶಕ ಬುಚ್ಚಿ ಬಾಬು ಸನಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ರಗಡ್ ಲುಕ್‌ನಲ್ಲಿ ರಾಮ್‌ ಚರಣ್

3 ನಿಮಿಷಗಳ 'ಪೆದ್ದಿ' ಟ್ರೇಲರ್‌ ಸಖತ್‌ ರೋಮಾಂಚನಕಾರಿಯಾಗಿ ಕಟ್ ಮಾಡಲಾಗಿದೆ. ಇದರಲ್ಲಿ ರಾಮ್ ಚರಣ್ ಕ್ರಾಸ್‌ಓವರ್ ಅಥ್ಲೀಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟರ್ ಆಗಿ, ಕುಸ್ತಿಪಟುವಾಗಿ ಹಾಗೂ ರನ್ನರ್ ಆಗಿ ಅವರ ಪಾತ್ರವನ್ನು ಪರಿಚಯಿಸಲಾಗಿದೆ. "ಪೆದ್ದಿ ಗುಡಿಯೊಳಗಿರೋ ದೇವ್ರಲ್ಲ.. ಗ್ರೌಂಡ್‌ನಲ್ಲಿರೋ ದೇವರು" ಎಂಬ ಡೈಲಾಗ್ ಮೂಲಕ ನಾಯಕನಿಗೆ ಭರ್ಜರಿ ಎಲಿವೇಶನ್ ಕೊಡಲಾಗಿದೆ. "ಆಟಾನೇ ನನ್ನ ಪೊಗರು" ಎನ್ನುತ್ತಾ ರಾಮ್‌ ಚರಣ್‌, ಒಂದು ಕಡೆ ಕ್ರಿಕೆಟ್ ಬ್ಯಾಟ್ ಹಿಡಿದರೆ, ಮತ್ತೊಂದು ಕಡೆ ಕುಸ್ತಿಪಟುವಾಗಿ ಅಖಾಡದಲ್ಲಿ ಅಬ್ಬರಿಸಿದ್ದಾರೆ. ಸಿನಿಮಾದಲ್ಲಿ ಮೂರನೇ ಆಟವಾಗಿ ರನ್ನಿಂಗ್ ಕೂಡ ಇರಲಿದೆ ಎಂಬುದನ್ನು ಟ್ರೇಲರ್‌ನಲ್ಲಿ ಹಿಂಟ್ ನೀಡಲಾಗಿದೆ.

ಗುರುವಾಗಿ ಬಂದ ಶಿವಣ್ಣ

ನಟಿ ಜಾನ್ವಿ ಕಪೂರ್ ಅವರು ಅಚ್ಚಿಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗೌರ್ ನಾಯ್ಡು' ಎಂಬ ಪವರ್‌ಫುಲ್ ಪಾತ್ರದಲ್ಲಿ ಶಿವರಾಜ್‌ಕುಮಾರ್ ತಮ್ಮ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಗಮನ ಸೆಳೆದಿದ್ದಾರೆ. "ನನಗೆ ಆಟ ಗೆಲ್ಲೋದಲ್ಲ.. ಬದುಕೋದು ಮುಖ್ಯ" ಎಂಬ ಡೈಲಾಗ್ ಮೂಲಕ ಅವರ ಕ್ಯಾರೆಕ್ಟರ್ ಎಷ್ಟು ಸ್ಟ್ರಾಂಗ್ ಆಗಿದೆ ಎಂಬುದನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ರಾಮ್‌ ಚರಣ್‌ಗೆ ಕುಸ್ತಿ ಹೇಳಿಕೊಡುವ ಗುರುವಿನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಖಳನಾಗಿ 'ಮಿರ್ಜಾಪುರ್' ಖ್ಯಾತಿಯ ದಿವ್ಯೇಂದು ಶರ್ಮಾ ಅಬ್ಬರಿಸಿದ್ದಾರೆ. ಇವರ ಜೊತೆಗೆ ಜಗಪತಿ ಬಾಬು, ಬೋಮನ್ ಇರಾನಿ, ಹರೀಶ್ ಪೇರಡಿ, ತಾರಕ್ ಪೊನ್ನಪ್ಪ, ಶ್ರೀಕಾಂತ್ ಅಯ್ಯಂಗಾರ್, ಜಾನ್ ವಿಜಯ್, ರವಿ ಕಿಶನ್, ಆಚಂಟ ಮಹೇಶ್ ಸೇರಿದಂತೆ ಅನೇಕ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದೆ. ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಭಾಷೆಯ ಪ್ರಮುಖ ನಟರನ್ನು ಚಿತ್ರದಲ್ಲಿ ಬಳಸಿಕೊಂಡಿರುವುದು ವಿಶೇಷ.‌

Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

ಟ್ರೈಲರ್ ಕೊನೆಯಲ್ಲಿ ಬರುವ ಕ್ರಾಸ್‌ಓವರ್ ಶಾಟ್ ಹೈಲೈಟ್ ಆಗಿದೆ. ಎ.ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತ ಹಾಗೂ ರತ್ನವೇಲು ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ʼಉಪ್ಪೆನ'ದಂತಹ ಬ್ಲಾಕ್‌ಬಸ್ಟರ್ ಕೊಟ್ಟ ನಿರ್ದೇಶಕ ಬುಚ್ಚಿ ಬಾಬು, ಸುಮಾರು 5 ವರ್ಷಗಳ ಗ್ಯಾಪ್ ನಂತರ ಒಂದು ಎಮೋಷನಲ್ ಸ್ಪೋರ್ಟ್ಸ್ ಡ್ರಾಮಾ ಮೂಲಕ ಬಂದಿದ್ದಾರೆ. ನಿರೀಕ್ಷೆಯಂತೆಯೇ ಆಕ್ಷನ್, ಎಮೋಷನ್ ಮತ್ತು ಸ್ಪೋರ್ಟ್ಸ್ ಎಲಿಮೆಂಟ್ಸ್ ಒಳಗೊಂಡ ಪಕ್ಕಾ ಮಾಸ್ ದೃಶ್ಯ ವೈಭವವನ್ನು ಕಣ್ಣಮುಂದೆ ಇಟ್ಟಿದ್ದಾರೆ. ಸಿನಿಮಾದ ಕೊನೆಯ 50 ನಿಮಿಷಗಳು ಅತ್ಯಂತ ಎಮೋಷನಲ್ ಆಗಿರಲಿದೆ ಎಂದು ಬುಚ್ಚಿಬಾಬು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ.

Ram Charan: 'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್‌

ಜೂನ್ 4 ರಂದು ರಿಲೀಸ್

'ಪೆದ್ದಿ' ಟ್ರೈಲರ್ ಕೊನೆಯಲ್ಲಿ ರಾಮ್ ಚರಣ್ ಕುಂಟುತ್ತಾ ಗ್ರೌಂಡ್ ಕಡೆ ನೋಡುತ್ತಿರುವುದನ್ನು ಗಮನಿಸಿದರೆ, ಇದುವರೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ 'ಪ್ಯಾರಾ ಅಥ್ಲೀಟ್ ಗೇಮ್ಸ್' ಕಥೆ ನಿಜವಿರಬಹುದು ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಹೀರೋ ಕಾಲಿಗೆ ತೊಂದರೆಯಾಗಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಅರ್ಪಿಸುವ, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ಈ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಪೆದ್ದಿ ಚಿತ್ರವು ಜೂನ್ 4 ರಂದು ತೆಲುಗು, ಕನ್ನಡ ಸೇರಿದಂತೆ ವಿಶ್ವದಾದ್ಯಂತ ತೆರೆಗೆ ಬರಲಿದೆ.