ವಾರಣಾಸಿ (Varanasi) ಗ್ಲೋಬ್ ಟ್ರಾಟರ್ ಕಾರ್ಯಕ್ರಮದ ಸಂದರ್ಭದಲ್ಲಿ ದೇವರ ಬಗ್ಗೆ ನಿರ್ದೇಶಕ ಎಸ್.ಎಸ್. ರಾಜಮೌಳಿ ( ss rajamouli ) ಮಾಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಆ ಬಳಿಕ ರಾಜಮೌಳಿ ಅವರು ವಿವಾದದ ಮಧ್ಯದಲ್ಲಿ ಸಿಲುಕಿದರು. ರಾಜಮೌಳಿವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈಗ ರಾಮ್ ಗೋಪಾಲ್ ವರ್ಮಾ (Ram Gopal Varma) ರಾಜಮೌಳಿಯನ್ನು ಸಮರ್ಥಿಸಿಕೊಂಡಿದ್ದಾರೆ . "ಭಾರತದಲ್ಲಿ ನಾಸ್ತಿಕನಾಗಿರುವುದು ಅಪರಾಧವಲ್ಲ. ಸಂವಿಧಾನದ 25ನೇ ವಿಧಿ ಪ್ರಕಾರ, ದೇವರನ್ನು ನಂಬದಿರುವುದು ವೈಯಕ್ತಿಕ ಸ್ವಾತಂತ್ರ್ಯ" ಎಂದಿದ್ದಾರೆ.
ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
ಶುಕ್ರವಾರ ತಮ್ಮ X ಖಾತೆಯಲ್ಲಿ RGV ಹೀಗೆ ಹೇಳಿದರು, ಭಾರತದಲ್ಲಿ ನಾಸ್ತಿಕರಾಗಿರುವುದು ಅಪರಾಧವಲ್ಲ. ಸಂವಿಧಾನದ 25ನೇ ವಿಧಿ ಪ್ರಕಾರ, ದೇವರನ್ನು ನಂಬದಿರುವುದು ವೈಯಕ್ತಿಕ ಸ್ವಾತಂತ್ರ್ಯ. ದೇವರನ್ನು ನಂಬದಿದ್ದರೆ ತನ್ನ ಚಲನಚಿತ್ರಗಳಲ್ಲಿ ದೇವರನ್ನು ಏಕೆ ತೋರಿಸುತ್ತಾರೆ?" ಆ ತರ್ಕದ ಪ್ರಕಾರ, ಚಲನಚಿತ್ರ ನಿರ್ಮಾಪಕನೊಬ್ಬ ಗ್ಯಾಂಗ್‌ಸ್ಟರ್ ಸಿನಿಮಾ ಮಾಡಲು ಗ್ಯಾಂಗ್‌ಸ್ಟರ್ ಆಗಬೇಕೇ, ಹಾರರ್ ಸಿನಿಮಾ ಮಾಡಲು ದೆವ್ವವಾಗಬೇಕೇ?”
ದೇವರನ್ನು ನಂಬದಿದ್ದರೂ, ದೇವರು ರಾಜಮೌಳಿ ಅವರಿಗೆ ದೇವರನ್ನು ಅಷ್ಟೊಂದು ನಂಬಿದವರಿಗೂ ಸಿಗದ ಯಶಸ್ಸು, ಸಂಪತ್ತು ನಾಸ್ತಿಕ ರಾಜಮೌಳಿಗೆ ಸಿಕ್ಕಿದೆ. ಇದರಿಂದ ದೇವರು ನಾಸ್ತಿಕರನ್ನೇ ಹೆಚ್ಚು ಪ್ರೀತಿಸುತ್ತಾನೋ ಅಥವಾ ಮನುಷ್ಯರನ್ನು ಮೆಚ್ಚಿಕೊಳ್ಳುವುದಿಲ್ಲವೋ" ಎಂದಿದ್ದಾರೆ. ದೇವರು ಚೆನ್ನಾಗಿದ್ದಾನೆ, ರಾಜಮೌಳಿಯೂ ಚೆನ್ನಾಗಿದ್ದಾನೆ. ಇಬ್ಬರನ್ನೂ ಅರ್ಥಮಾಡಿಕೊಳ್ಳದವರೇ ಬಾಧೆಪಡುತ್ತಿದ್ದಾರೆ. ವಾರಣಾಸಿ ಸಿನಿಮಾದಿಂದ ದೇವರು ಆತನ ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಹೆಚ್ಚಿಸುತ್ತಾನೆ" ಎಂದಿದ್ದಾರೆ.
ಹಿಂದೂ ಭಾವನೆಗಳಿಗೆ ಧಕ್ಕೆ
ನವೆಂಬರ್ 15 ರಂದು, ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ ವಾರಣಾಸಿಗಾಗಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಎಸ್.ಎಸ್. ರಾಜಮೌಳಿ ಭಾಷಣದ ಸಮಯದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಾನರ ಸೇನಾ ಸಂಘಟನೆ ದೂರು ದಾಖಲಿಸಿತು.
ವಾರಣಾಸಿಯಲ್ಲಿ ಮಹೇಶ್ ಬಾಬು , ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2027 ರ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಲಿದೆ.
ಏನಿದು ವಿವಾದ?
ಈಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ʻವಾರಣಾಸಿʼ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಲಾಗಿತ್ತು. ಅದಕ್ಕಾಗಿ ಗ್ರ್ಯಾಂಡ್ ಇವೆಂಟ್ ಮಾಡಲಾಗಿತ್ತು. ಈ ವೇಳೆ ಒಂದಷ್ಟು ಟೆಕ್ನಿಕಲ್ ಸಮಸ್ಯೆಗಳು ನಡೆದವು.
ಆ ಬಗ್ಗೆ ಮಾತನಾಡಿದ್ದ ರಾಜಮೌಳಿ, "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ. ಆದರೆ ನನ್ನ ತಂದೆ ಹನುಮಂತ ಇದ್ದಾನೆ, ಅವನು ಯಾವುದೇ ತೊಂದರೆ ಇಲ್ಲದೇ ಎಲ್ಲವನ್ನು ನಡೆಸಿಕೊಡುತ್ತಾನೆ ಎಂದಿದ್ದರು. ಆಗ ನನಗೆ ತಕ್ಷಣವೇ ಕೋಪ ಬಂದಿತ್ತು. ಈ ರೀತಿಯೇ ನಡೆಸಿಕೊಡುವುದು" ಎಂದು ಹೇಳಿದ್ದರು.
ಇದನ್ನೂ ಓದಿ: Varanasi title dispute: ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?
ಇನ್ನು, ʻವಾರಣಾಸಿʼ ಸಿನಿಮಾದ ಬಗ್ಗೆ ಹೇಳಬೇಕೆಂದರೆ, ಈ ಚಿತ್ರವು 2027ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸುತ್ತಿದ್ದಾರೆ. ಮಿಕ್ಕಂತೆ ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.