ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮಾಯಣದಲ್ಲಿ ರಾಮನ ಪಾತ್ರ ಮಾಡುತ್ತಿರುವಾಗಲೇ ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ರಣಬೀರ್ ಕಪೂರ್: ಸರಯೂ ನದಿ ತೀರದಲ್ಲಿ ಹೊಸ ಹೂಡಿಕೆ

ಬಾಲಿವುಡ್ ನಟ ರಣಬೀರ್ ಕಪೂರ್ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಕೋಟಿ ರೂ. ಮೌಲ್ಯದ ಜಮೀನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್, ಅಯೋಧ್ಯೆಯ ಆಧ್ಯಾತ್ಮಿಕ ಸೆಳೆತಕ್ಕೆ ಮಾರುಹೋಗಿ ಈ ಹೂಡಿಕೆ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ʻರಾಮಾಯಣʼ ನಟ ರಣಬೀರ್ ಕಪೂರ್

-

Avinash GR
Avinash GR May 15, 2026 1:22 PM

ಬಾಲಿವುಡ್ ನಟ ರಣಬೀರ್ ಕಪೂರ್ ಅಯೋಧ್ಯೆಯ 'ಹೌಸ್ ಆಫ್ ಅಭಿನಂದನ್ ಲೋಧಾ' (HoABL) ಸಂಸ್ಥೆಯ ಪ್ರತಿಷ್ಠಿತ ಪ್ಲಾಟೆಡ್ ಡೆವಲಪ್‌ಮೆಂಟ್‌ನಲ್ಲಿ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಗುರುವಾರ ತಿಳಿಸಿದೆ. ಸರಿಸುಮಾರು 3.31 ಕೋಟಿ ಮೌಲ್ಯದ ಈ ವ್ಯವಹಾರವು 2,134 ಚದರ ಅಡಿ ವಿಸ್ತೀರ್ಣದ ಜಮೀನಿಗೆ ಸಂಬಂಧಿಸಿದ್ದಾಗಿದೆ.

ಈ ಯೋಜನೆಯು ಸುಸಜ್ಜಿತ ಕ್ಲಬ್‌ಹೌಸ್ ಸೇರಿದಂತೆ 35ಕ್ಕೂ ಹೆಚ್ಚು ಸೌಲಭ್ಯಗಳನ್ನು ಒಳಗೊಂಡಿದೆ. ಐದು ಎಕರೆಯ ಈ ಪ್ರದೇಶದೊಳಗೆ 'ದಿ ಲೀಲಾ' (The Leela) ಸಮೂಹದ ಹೋಟೆಲ್ ನಿರ್ಮಾಣವಾಗಲಿದೆಯಂತೆ. ಈ ಯೋಜನೆಯು ಕಾನೂನುಬದ್ಧ ಮತ್ತು ಉತ್ತಮ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ ಹಾಗೂ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಸಮೀಪದಲ್ಲಿದೆ. ಅಭಿನಂದನ್ ಲೋಧಾ ಅವರ ಸಂಸ್ಥೆಯೊಂದಿಗೆ ರಣಬೀರ್ ಮಾಡಿಕೊಂಡಿರುವ ಈ ಹೂಡಿಕೆಯು ಅಯೋಧ್ಯೆಯ ರಿಯಲ್ ಎಸ್ಟೇಟ್ ಮತ್ತು ಪ್ರವಾಸೋದ್ಯಮದ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತಿದೆ.

Ranbir Kapoor : ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಗರಂ; ವಿಡಿಯೋ ವೈರಲ್‌

ನನ್ನನ್ನು ಅಯೋಧ್ಯೆಯೇ ಆಯ್ಕೆ ಮಾಡಿದೆ

ರಣಬೀರ್ ಕಪೂರ್ ಈ ಕುರಿತು ಮಾತನಾಡಿ, "ಅಯೋಧ್ಯೆಯೇ ನನ್ನನ್ನು ಆಯ್ಕೆ ಮಾಡಿದೆ ಎಂದು ನಾನು ನಂಬುತ್ತೇನೆ ಮತ್ತು ಈ ಕರೆಯನ್ನಷ್ಟೇ ನಾನು ಪಾಲಿಸಿದ್ದೇನೆ" ಎಂದು ಹೇಳಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್‌ ಕಪೂರ್‌, ಇದೇ ವೇಳೆ ಅಯೋಧ್ಯೆಯಲ್ಲೇ ಜಮೀನು ಖರೀದಿ ಮಾಡಿರುವುದು ಕಾಕತಾಳೀಯವೇ ಸರಿ.

ನನ್ನ ಕುಟುಂಬದ ಪರಂಪರೆಯ ಭಾಗ

"ಅಯೋಧ್ಯೆಯು ನಮ್ಮ ಇತಿಹಾಸದಲ್ಲಿ ಆಳವಾಗಿ ಬೇರೂರಿದೆ. ನಮ್ಮ ಸಾಂಸ್ಕೃತಿಕ ಚೌಕಟ್ಟಿನ ನಿರ್ಣಾಯಕ ಭಾಗವಾಗಿದೆ. ಸರಯೂನಲ್ಲಿನ ಈ ಭೂಮಿಯು ನನ್ನ ಕುಟುಂಬದ ಪರಂಪರೆಯ ಭಾಗವಾಗಲಿದೆ. ಅಭಿನಂದನ್ ಲೋಧಾ ಸಂಸ್ಥೆಯ ಡಿಜಿಟಲ್ ಪ್ರಕ್ರಿಯೆಯು ಈ ಹೂಡಿಕೆಯ ಪಯಣವನ್ನು ಅತ್ಯಂತ ಪಾರದರ್ಶಕ ಮತ್ತು ಸುಲಭಗೊಳಿಸಿದೆ" ಎಂದು ರಣಬೀರ್‌ ಕಪೂರ್ ಅವರು ಹೇಳಿದ್ದಾರೆ.

Ranbir Kapoor: ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಮಾತ್ರ ಸೂಕ್ತ ವ್ಯಕ್ತಿ; ನಮಿತ್ ಮಲ್ಹೋತ್ರಾ

ಅಯೋಧ್ಯೆಯು ಇಂದು ಹೂಡಿಕೆ, ಸಂಪರ್ಕ ಮತ್ತು ಅಭಿವೃದ್ಧಿಯ ಬಲದೊಂದಿಗೆ ಜಾಗತಿಕ ತಾಣವಾಗಿ ಹೊರಹೊಮ್ಮುತ್ತಿದೆ. ಪ್ರವಾಸೋದ್ಯಮದಲ್ಲಿನ ಏರಿಕೆಯು ಇದಕ್ಕೆ ಸಾಕ್ಷಿಯಾಗಿದೆ. ಮಂದಿರ ನಿರ್ಮಾಣಕ್ಕೂ ಮುನ್ನ ವಾರ್ಷಿಕವಾಗಿ 5.75 ಕೋಟಿಯಷ್ಟಿದ್ದ ಪ್ರವಾಸಿಗರ ಸಂಖ್ಯೆ, 2025ರ ಜನವರಿಯಿಂದ ಜೂನ್ ಅವಧಿಯಲ್ಲೇ 23 ಕೋಟಿಗೆ ಏರಿಕೆಯಾಗಿದೆ. 2025ರ ಅಂತ್ಯದ ವೇಳೆಗೆ ಸುಮಾರು 50 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಸರ್ಕಾರ ಅಂದಾಜಿಸಿದೆ.