ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramayana trailer reactions: ಯಶ್‌ಗೆ ಪ್ರಶಂಸೆ, ಆದ್ರೆ ಇವರನ್ನ ಮಿಸ್ ಮಾಡ್ಕೊಳ್ತಿದ್ದಾರೆ ವೀಕ್ಷಕರು!

Ramayana trailer: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ, ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಜಂಟಿಯಾಗಿ ಸಂಗೀತ ನೀಡಿದ್ದು, ಟ್ರೇಲರ್‌ನ ಬ್ಯಾಕ್‌ಗ್ರೌಂಡ್ ಸ್ಕೋರ್ ಪ್ರತಿ ದೃಶ್ಯದ ತೀವ್ರತೆಯನ್ನು ದುಪ್ಪಟ್ಟು ಮಾಡಿದೆ.

ರಾಮಾಯಣ ಸಿನಿಮಾ

ನಿತೇಶ್ ತಿವಾರಿ ಅವರ 'ರಾಮಾಯಣ' (Ramayana Trailer) ಟ್ರೇಲರ್ ಇಂದು ಬೆಳಗ್ಗೆ 4:15 ಕ್ಕೆ ಬ್ರಹ್ಮ ಮುಹೂರ್ತದ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಇದರಲ್ಲಿ ರಣಬೀರ್ ಕಪೂರ್ (Ranbir Kapoor) ಅವರನ್ನು ರಾಮನಾಗಿ, ಸಾಯಿ ಪಲ್ಲವಿ ಅವರನ್ನು ಸೀತೆಯಾಗಿ, ರವಿ ದುಬೆ ಅವರನ್ನು ಲಕ್ಷ್ಮಣನಾಗಿ ಮತ್ತು ಯಶ್ (Yash) ಅವರನ್ನು ರಾವಣನ ಪಾತ್ರದಲ್ಲಿ ಪರಿಚಯಿಸಲಾಗಿದೆ. ಆದರೆ ನೋಡುಗರಲ್ಲಿ ಇದೊಂದೇ ಬೇಸರ ಇದೆ ಏನದು?

ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈಗಾಗಲೇ ಅಧಿಕೃತವಾಗಿದೆ. ಆದರೆ, ಇಂದು ಬಿಡುಗಡೆಯಾದ ಟ್ರೇಲರ್‌ನಲ್ಲಿ ಎಲ್ಲೂ ಅವರ ಪಾತ್ರದ ಝಲಕ್ ಕಾಣಿಸಿಕೊಂಡಿಲ್ಲ. ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಹನುಮಂತ ಎಲ್ಲಿದ್ದಾನೆ?’ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ಅತ್ಯಂತ ಹೈಲೈಟ್ ಆಗಿರುತ್ತದೆ.

ಟ್ರೇಲರ್‌ನಲ್ಲಿ (ಸನ್ನಿ ಡಿಯೋಲ್) ನಟಿಸಿದ ಹನುಮಾನ್ ಪಾತ್ರದ ಅನುಪಸ್ಥಿತಿಯು ಅನೇಕ ವೀಕ್ಷಕರ ಗಮನ ಸೆಳೆದ ಒಂದು ಅಂಶವಾಗಿದೆ. ಸನ್ನಿ ಡಿಯೋಲ್ ದೃಶ್ಯ ಇರಬೇಕಿತ್ತು ಎಂದು ಬೇಸರ ಹೊರ ಹಾಕಿದ್ದಾರೆ.



ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ದಿವ್ಯ ರೂಪ ಮತ್ತು ಶಾಂತ ಸ್ವಭಾವದ ನಟನೆ ಮನಸೂರೆಗೊಳ್ಳುವಂತಿದೆ. ಧನುರ್ಧಾರಿಯಾಗಿ ನಿಲ್ಲುವ ಅವರ ದೃಶ್ಯಗಳು ಹಾಗೂ ಮರ್ಯಾದಾ ಪುರುಷೋತ್ತಮನ ತೇಜಸ್ಸು ಪ್ರತಿಯೊಬ್ಬರಿಗೂ ಭಕ್ತಿಯ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು! ‘ರಾಮಾಯಣ’ ಬಿಗ್‌ ಅಪ್‌ಡೇಟ್‌

"ಅತ್ಯುತ್ತಮ VFX- ಉನ್ನತ ದರ್ಜೆಯ ದೃಶ್ಯಗಳು- ಗ್ರ್ಯಾಂಡ್ ಹಿನ್ನೆಲೆ ಸ್ಕೋರ್- ರಾಮಾಯಣ ಟ್ರೇಲರ್ ಕೇವಲ ಟ್ರೇಲರ್ ಅಲ್ಲ-ಇದು ಸಂಪೂರ್ಣ ಸಿನಿಮಾ" ಎಂದು ಬರೆದಿದ್ದಾರೆ.

ಮತ್ತೊಬ್ಬ ವೀಕ್ಷಕ "ಇದು ಕೇವಲ ಟ್ರೇಲರ್ ಅಲ್ಲ. ಇದು ಭಾರತೀಯ ಚಿತ್ರರಂಗದ ಹೆಗ್ಗುರುತು" ಎಂದು ಬರೆದಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಇಲ್ಲಿಯವರೆಗೆ ₹ 4000 ಕೋಟಿ ಚಿತ್ರದಂತೆ ಕಾಣುತ್ತಿಲ್ಲ! ನಮಿತ್ ಮಲ್ಹೋತ್ರಾ ನಿರೀಕ್ಷೆಗಳನ್ನು ಇಷ್ಟು ಹೆಚ್ಚಾಗಿ ಮತ್ತು ನಂತರ ನಿರಾಶಾದಾಯಕವಾಗಿಸಲು ಕಾರಣರಾಗಿದ್ದಾರೆ” ಎಂದು ಬರೆದಿದ್ದಾರೆ.

ರಣಬೀರ್ ಕಪೂರ್ ಶ್ರೀರಾಮನಿಗೆ ಸೂಕ್ತವಲ್ಲ ಎಂದು ಹೇಳುವವರು ಬಹುಶಃ ರಾಮನ ಸಾರವನ್ನೇ ತಪ್ಪಾಗಿ ಅರ್ಥೈಸಿಕೊಂಡಿರಬಹುದು. ರಾಮನು ಎಂದಿಗೂ ಕೂಗಾಡುವುದು, ಕೋಪಗೊಳ್ಳುವುದು ಅಥವಾ ಬಲವಂತದ ಸಾಮೂಹಿಕ ಅಭಿವ್ಯಕ್ತಿಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರ ಶಕ್ತಿ ಅವರ ಶಾಂತತೆ, ದಯೆ, ಸಂಯಮ ಮತ್ತು ಮರ್ಯಾದೆಯಲ್ಲಿತ್ತು ಎಂದು ಬರೆದಿದ್ದಾರೆ.



ಜುಲೈ 18 ರಂದು ನವದೆಹಲಿಯಲ್ಲಿ ನಡೆದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದ ನಂತರ, ಟ್ರೇಲರ್‌ನ ಕೆಲವು ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರ ನಂತರ, ಸ್ಯಾನ್ ಡಿಯಾಗೋ ಕಾಮಿಕ್ ಕಾನ್ 2026 ರಲ್ಲಿ ಗ್ರ್ಯಾಂಡ್ ಗ್ಲಿಂಪ್ಸ್ ಪ್ರದರ್ಶನವನ್ನು ನಡೆಸಲಾಯಿತು ಮತ್ತು ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ವಿತರಣೆಯನ್ನು ಸಹ ಲಾಕ್ ಮಾಡಲಾಯಿತು.



ಒಟ್ಟಾರೆಯಾಗಿ, ‘ರಾಮಾಯಣ’ ಕೇವಲ ಒಂದು ಸಿನಿಮಾವಲ್ಲ, ಬದಲಿಗೆ ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹಾ ದೃಶ್ಯ ಕಾವ್ಯ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ.

ಇದನ್ನೂ ಓದಿ: Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ; ಶಿವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಯ್ತು!

ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.

Yashaswi Devadiga

View all posts by this author