ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ; ಶಿವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಯ್ತು!

Annayya Serial: ವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಗಿದೆ. ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ಇದೆಲ್ಲ ಸನ್ನಿವೇಶಗಳನ್ನು ನೋಡಿದ ವೀಕ್ಷಕರಿಗೆ ಸೀನಾ ಮೇಲೆ ಸಂಶಯ ಮೂಡಿದೆ. ಜಿಮ್‌ ಸೀನಾ ಹಾಗೂ ರಶ್ಮಿ ಅತ್ತೆ ಸದಾ ಪಿಂಕಿಯ ಹಿಂದೆ ಇರ್ತಾ ಇದ್ದರು. ಕೊನೆಗೂ ಪಿಂಕಿಯನ್ನ ಸೀನ ಪ್ರೀತಿ ಮಾಡುತ್ತಿರುವ ವಿಚಾರ ರಶ್ಮಿಗೂ ಗೊತ್ತಾಯ್ತು. ಅಣ್ಣ ಶಿವುಗೂ ಈ ವಿಚಾರ ಗೊತ್ತಾಗಿ ಹೋಯ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಸೀನ, ಪಿಂಕಿಯನ್ನೇ ಮದುವೆ ಆಗ್ತೀನಿ ಅಂತ ನಿರ್ಧಾರ ಮಾಡಿದ್ದ.

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ!

ಅಣ್ಣಯ್ಯ ಧಾರಾವಾಹಿ -

Yashaswi Devadiga
Yashaswi Devadiga Jul 29, 2026 6:26 PM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ (Annayya serial) ಜಿಮ್‌ ಸೀನ ಈಗ ಬದಲಾಗಿದ್ದಾನೆ. ಮನೆಬಿಟ್ಟ ಮಾದಪ್ಪಣ್ಣನ (Madappanna) ಮಗ ಸೊಸೆ ಈಗ ಒಂದಾಗಿದ್ದಾರೆ. ಶಿವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಗಿದೆ. ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ಇದೆಲ್ಲ ಸನ್ನಿವೇಶಗಳನ್ನು ನೋಡಿದ ವೀಕ್ಷಕರಿಗೆ ಸೀನಾ (Jim seena) ಮೇಲೆ ಸಂಶಯ ಮೂಡಿದೆ.

ಜಿಮ್‌ ಸೀನಾ ಹಾಗೂ ರಶ್ಮಿ ಅತ್ತೆ ಸದಾ ಪಿಂಕಿಯ ಹಿಂದೆ ಇರ್ತಾ ಇದ್ದರು. ಕೊನೆಗೂ ಪಿಂಕಿಯನ್ನ ಸೀನ ಪ್ರೀತಿ ಮಾಡುತ್ತಿರುವ ವಿಚಾರ ರಶ್ಮಿಗೂ ಗೊತ್ತಾಯ್ತು. ಅಣ್ಣ ಶಿವುಗೂ ಈ ವಿಚಾರ ಗೊತ್ತಾಗಿ ಹೋಯ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಸೀನ, ಪಿಂಕಿಯನ್ನೇ ಮದುವೆ ಆಗ್ತೀನಿ ಅಂತ ನಿರ್ಧಾರ ಮಾಡಿದ್ದ.

ಇದನ್ನೂ ಓದಿ: Amruthadhaare Serial: ಐಪಿಎಸ್ ಮಲ್ಲಿ ರಾಕ್‌ ಜೈದೇವ್‌ ಶಾಕ್‌! ಮನದರಸಿ ಭೂಮಿಗಾಗಿ ಗೌತಮ್‌ ಚೌಕಾಸಿ

ಜಿಮ್ ಸೀನಾ ರಶ್ಮಿಯಿಂದ ದೂರವಾಗಿ, ಪಿಂಕಿಯನ್ನು ಮದುವೆಯಾಗಲು ಎಲ್ಲಾ ತಯಾರಿ ನಡೆಸಿದ್ದ. ಆದರೆ ಪಿಂಕಿ ಕೆಲಸ ಇಲ್ಲದ, ಆಸ್ತಿನೂ ಇಲ್ಲ ಸೀನಾನನ್ನೆ ದೂರ ಮಾಡಿ, ಮದುವೆ ದಿನ ಬೇರೆ ಯಾರೊಂದಿಗೋ ಓಡಿ ಹೋಗಿದ್ದಾಳೆ. ಇದರಿಂದ ಮನೆ, ಮಠ ಕಳೆದುಕೊಂಡ ಸೀನಾ, ಭಿಕ್ಷುಕರ ಜೊತೆ ಜೀವನ ಮಾಡುವಂತಾಗಿತ್ತು.

ದೇವಸ್ಥಾನದಲ್ಲಿ ಭೀಕ್ಷುಕರನ್ನ ಸ್ನಾನ ಮಾಡಿಸಲು ಶಿವು ಕುಟುಂಬ ಬಂದಿರುತ್ತೆ. ಅದರಲ್ಲಿ ಜಿಮ್‌ ಸೀನನನ್ನು ರಶ್ಮಿ ಸ್ನಾನ ಮಾಡಿಸುತ್ತಾಳೆ. ದೇವಸ್ಥಾನಕ್ಕೆ ಪರಿವಾರ ಸಮೇತ ಬಂದ ರಶ್ಮಿ, ಅಲ್ಲಿ ಸಿಕ್ಕಿದ ಬಿಕ್ಷುಕನೊಬ್ಬನಿಗೆ ಸ್ನಾನ ಮಾಡಿಸಲು ಮುಂದಾಗುತ್ತಾಳೆ. ಆ ಸಮಯದಲ್ಲಿ ಆಕೆಯ ಕೈಹಿಡಿಯುತ್ತಾನೆ ಸೀನ. ಸೀನನನ್ನು ನೋಡಿದ ಕೂಡಲೇ ರಶ್ಮಿ ಶಾಕ್ ಆಗುತ್ತಾಳೆ. ಸೀನಾ, ನಿನ್ನ ಕಾಲು ತೊಳೆದು ನೀರು ಕುಡಿದ್ರು ನನ್ನ ಪಾಪ ಕಮ್ಮಿ ಆಗಲ್ಲ ಎಂದು ರಶ್ಮಿಗೆ ಕ್ಷಮೆ ಕೇಳುತ್ತಾನೆ.

ಆ ಬಳಿಕ ಸೀನ ಮತ್ತೆ ಮಾದಪ್ಪನ ಮನೆಗೆ ವಾಪಸ್‌ ಬರುತ್ತಾನೆ. ಇಬ್ಬರನ್ನು ಆರತಿ ಎತ್ತಿ ಸ್ವಾಗತಿಸುತ್ತಾರೆ. ಇನ್ನೇನು ರಶ್ಮಿ ಒಳಗೆ ಬರುವಾಗ, ತನ್ನ ಕೈಯನ್ನು ನೆಲದ ಮೇಲೆ ಇಡುವ ಸೀನಾ, ನಿನ್ನ ಕಾಲು ನೆಲ ಸೋಕದಂತೆ ನಾನು ಇನ್ನು ನಿನ್ನನ್ನು ಕಾಪಾಡುತ್ತೇನೆ ಎನ್ನುತ್ತಾನೆ.

ಇದನ್ನೂ ಓದಿ: Amruthadhaare Serial: ಜೈದೇವ್‌ನ ಪುಂಡಾಟಕ್ಕೆ ಲಾಠಿ ಏಟಿನ ರುಚಿ ತೋರಿಸಿದ್ದಾಳೆ ಮಲ್ಲಿ!

ಇದನ್ನು ನೋಡಿ ಶಿವು ಸೇರಿ ಮನೆಮಂದಿ ಸಂಭ್ರಮಪಟ್ಟಿದ್ದಾರೆ.ಆದರೆ ವೀಕ್ಷಕರು ಮಾತ್ರ ಸೀನ ಬದಲಾಗಿಲ್ಲ ಅಂತ ಕಮೆಂಟ್‌ ಮಾಡುತ್ತಿದ್ದಾರೆ.